ಮೈಸೂರು-ಚೆನ್ನೈ ನಡುವೆ ಪ್ರತಿಷ್ಠಿತ ವಂದೇ ಭಾರತ್ ರೈಲು ಸಂಚಾರ
News

ಮೈಸೂರು-ಚೆನ್ನೈ ನಡುವೆ ಪ್ರತಿಷ್ಠಿತ ವಂದೇ ಭಾರತ್ ರೈಲು ಸಂಚಾರ

October 15, 2022

ಬೆಂಗಳೂರು, ಅ.14 (ಕೆಎಂಶಿ)-ಕನ್ನಡ ರಾಜ್ಯೋ ತ್ಸವದ ಉಡುಗೊರೆಯಾಗಿ ಕೇಂದ್ರ ಸರ್ಕಾರ ವಂದೇ ಭಾರತ್ ರೈಲು ನೀಡಿದ್ದು, ಇದು ಮೈಸೂರು-ಬೆಂಗ ಳೂರು-ಚೆನ್ನೈ ಮಾರ್ಗ ವಾಗಿ ಸಂಚರಿಸಲಿದೆ.

ನವೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಲಿದ್ದು, ಬೆಂಗಳೂರಿಂದ ಮೈಸೂರಿಗೆ ಪ್ರಯಾಣ ಕೇವಲ ಒಂದು ಗಂಟೆ, ಮೈಸೂರಿನಿಂದ ಚೆನ್ನೈಗೆ ಕೇವಲ ಮೂರು ಗಂಟೆಯಲ್ಲಿ ಪ್ರಯಾಣ ಮಾಡ ಬಹುದಾಗಿದೆ. ಮೈಸೂರು-ಚೆನ್ನೈ ನಡುವೆ 483 ಕಿಲೋಮೀಟರ್ ಇದ್ದು, ಪ್ರತಿ ಗಂಟೆಗೆ 180 ಕಿಲೋ ಮೀಟರ್ ವೇಗವಾಗಿ ಈ ರೈಲು ಸಂಚರಿಸಿ, ಮೂರು ಗಂಟೆ ಅವಧಿಯಲ್ಲಿ ನಿಗದಿತ ಅಂತರ ತಲುಪಲಿದೆ.

ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾ ವಣೆ ನಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದಲ್ಲ ಒಂದು ಕಾರ್ಯಕ್ರಮ ಮತ್ತು ಯೋಜನೆಗಳನ್ನು ನೀಡುತ್ತಿದೆ. ಇದರ ಅಂಗವಾ ಗಿಯೇ ವಂದೇ ಭಾರತ್ ರೈಲು ಸಂಚಾರವೂ ಆರಂಭಗೊಳ್ಳುತ್ತಿದೆ. ಈ ಮೂರು ನಗರಗಳ ನಡುವೆ ವಿಮಾನಕ್ಕಿಂತ ರೈಲಿನ ಮೂಲಕವೇ ಪ್ರಯಾಣಿಕರು ಮತ್ತು ಉದ್ಯಮಿಗಳು ವೇಗವಾಗಿ ಒಂದು ನಗರ ದಿಂದ ಮತ್ತೊಂದು ನಗರಕ್ಕೆ ಸಂಚಾರ ಮಾಡ ಬಹುದಾಗಿದೆ. ಪ್ರಯಾಣಿಕರು ಎರಡು ವಿಮಾನ ನಿಲ್ದಾಣಗಳನ್ನು ನಗರ ಕೇಂದ್ರದಿಂದ ಪ್ರವೇಶಿಸಿ ಹೊರ ಬರಲು ಐದರಿಂದ ಆರು ಗಂಟೆ ಸಮಯಾವಕಾಶ ವಾಗುತ್ತಿದೆ. ಆದರೆ ಇದೀಗ ಎರಡು ಮೂರು ಗಂಟೆ ಗಳಲ್ಲಿ ಈ ಮೂರು ಪ್ರಮುಖ ನಗರಗಳನ್ನು ಮುಟ್ಟ ಬಹುದಾಗಿದೆ. ದೆಹಲಿ-ಉನಾ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‍ಪ್ರೆಸ್ ಸರಣಿಯ 4ನೇ ರೈಲಿಗೆ ಪ್ರಧಾನಿ ಮೋದಿ ಹಿಮಾಚಲ ಪ್ರದೇಶದಲ್ಲಿ ಗುರು ವಾರ ಚಾಲನೆ ನೀಡಿದ್ದಾರೆ. ನಂತರ ರಾಷ್ಟ್ರದ ಐದನೇ ಸರಣಿ ರೈಲಿಗೆ ನವೆಂಬರ್ 10 ರಂದು ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಚಾಲನೆಗೊಳ್ಳಲಿದೆ. ಫೆಬ್ರವರಿ 15, 2019ರಂದು ದೇಶದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ-ಕಾನ್ಪುರ-ಅಲಹಬಾದ್-ವಾರಣಾಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ. 2ನೇ ರೈಲು ದೆಹಲಿಯಿಂದ ವಾರಣಾಸಿಗೆ ಸಂಚರಿಸುತ್ತಿದೆ.

ಎಲ್ಲಾ ಕೋಚ್‍ಗಳಲ್ಲೂ ಆಟೋಮ್ಯಾಟಿಕ್ ಡೋರ್‍ಗಳು ಇರುತ್ತವೆ. ಜಿಪಿಎಸ್ (ಉPS) ಆಧಾರಿತ ಆಡಿಯೋ ವಿಶ್ಯುಯಲ್ಸ್, ಪ್ರಯಾಣದ ಮಾಹಿತಿ, ಉಚಿತ ವೈಫೈ ವ್ಯವಸ್ಥೆ ಇರುತ್ತದೆ. ಸೀಟ್‍ಗಳು ಆರಾಮದಾಯಕವಾಗಿ ಇರುತ್ತವೆ. ಶೌಚಾ ಲಯಗಳು ಬಯೋ ವ್ಯಾಕ್ಯೂಮ್ ತಂತ್ರಜ್ಞಾನ ಆಧಾರಿತವಾಗಿರುತ್ತವೆ. ಪ್ರತಿ ಸೀಟ್‍ಗೂ ಪ್ರತ್ಯೇಕ ಲೈಟ್ ವ್ಯವಸ್ಥೆ ಇರುತ್ತದೆ. ಪ್ರಯಾಣಿಕರಿಗೆ ಬಿಸಿ ಹಾಗೂ ಶುಚಿ-ರುಚಿಯಾದ ಆಹಾರ ಪೂರೈಕೆ ಮಾಡಲಾಗುತ್ತದೆ. ಬಿಸಿ ಹಾಗೂ ತಂಪು ಪಾನೀಯಗಳು ಲಭ್ಯವಾಗುತ್ತವೆ. ರೈಲು ಸಾಗುವಾಗ ಪ್ರಯಾಣಿಕರಿಗೆ ಹೆಚ್ಚಿನ ಶಬ್ದ ಕೇಳಿ ಬರುವುದಿಲ್ಲ. ಪ್ರತಿ ರೈಲಿನಲ್ಲಿ 1,128 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲಿ ಅಪಘಾತ ತಡೆ ವ್ಯವಸ್ಥೆಗೆ ಅತ್ಯಂತ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ. ಪ್ರತಿ ಕೋಚ್‍ನಲ್ಲೂ ತುರ್ತು ನಿರ್ಗಮನ ಕಿಟಕಿ, ಸಿಸಿಟಿವಿ ಕ್ಯಾಮರಾ ಇರುತ್ತದೆ. ಅಗ್ನಿ ಅನಾಹುತ ತಡೆಯುವ ವ್ಯವಸ್ಥೆ ಕೂಡಾ ಇದೆ. ಮೊದಲ ಮೂರು ರೈಲುಗಳಿಗಿಂತ ನಾಲ್ಕು ಮತ್ತು ಐದನೇ ರೈಲು ಬಹಳ ಸುಧಾರಣೆಯಿಂದ ಕೂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ವಂದೇ ಭಾರತ್ ರೈಲಿಗೆ ಮೈಸೂರಿನಿಂದಲೇ ಪ್ರಧಾನಿಯವರು ಹಸಿರು ನಿಶಾನೆ ತೋರಬೇಕೆಂಬ ಒತ್ತಡವಿದೆ. ಆದರೆ ಈಗಿನ ಪ್ರಕಾರ ಬೆಂಗಳೂರಿನಲ್ಲೇ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ.

ಚೆನ್ನೈ-ಮೈಸೂರು ರೈಲು ನಂತರ ಬೆಂಗಳೂರು-ಧಾರವಾಡದ ನಡುವೆ ಮತ್ತೊಂದು ವಂದೇ ಭಾರತ್ ರೈಲು ಸಂಚರಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Translate »