ಗ್ರೇಟರ್ ರಾಜಸೀಟು ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಡಿಸಿ
ಕೊಡಗು

ಗ್ರೇಟರ್ ರಾಜಸೀಟು ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಡಿಸಿ

November 11, 2022

ಮಡಿಕೇರಿ, ನ.10- ರಾಜಸೀಟು ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಗರದ ರಾಜ ಸೀಟು ಉದ್ಯಾನವನದಲ್ಲಿ ಗುರುವಾರ ನಡೆಯಿತು.

ಗ್ರೇಟರ್ ರಾಜಸೀಟು ಅಭಿವೃದ್ಧಿ ಕಾಮಗಾರಿ ವೀಕ್ಷಣೆ ನಂತರ ನಡೆದ ಸಭೆಯಲ್ಲಿ ಮಾತ ನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ರಾಜಸೀಟು ಅಭಿವೃದ್ಧಿ ಸಂಬಂಧಿಸಿ ದಂತೆ ಲೋ ರೋಪ್‍ವೇ, ಕಿಡ್ಸ್ ನೆಟ್ ಕ್ಲೈಂಬಿಂಗ್ ಸೇರಿದಂತೆ ಮಕ್ಕಳು ಆಟವಾಡುವ ಸಾಹಸ ಚಟುವಟಿಕೆಗಳಿಗೆ ಅನುಮೋದನೆ ನೀಡಿದರು. ರಾಜಸೀಟು ಉದ್ಯಾನವನದ ನಿರ್ಗಮನದ ಬಾಗಿಲು, ಟಿಕೇಟ್ ಕೌಂಟರ್ ಮುಂಭಾಗದಲ್ಲಿ ಸ್ಟೀಲ್ ರೈಲಿಂಗ್ ಅಳವಡಿ ಸುವುದು, ಕೂರ್ಗ್ ವಿಲೇಜ್‍ನಲ್ಲಿ ಪ್ರವೇಶ ಬಾಗಿಲು ಮತ್ತು ಪುಟಾಣಿ ರೈಲು ಜಾಗದಲ್ಲಿ ಚೈನ್ ಲಿಂಕ್ ಪೆನ್ಸಿಂಗ್ ಅಳವಡಿಸುವುದು, ಪಾಲಿಹೌಸ್ ನಿರ್ಮಾಣ ಮತ್ತಿತರ ಕಾಮಗಾರಿ ಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅನುಮೋದಿಸಿದರು.

ರಾಜಸೀಟು ಅಭಿವೃದ್ಧಿ ಸಂಬಂಧಿಸಿದಂತೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳ ಬೇಕಿದ್ದರೂ ಸುರಕ್ಷತೆಯನ್ನು ಗಮನದಲ್ಲಿ ಟ್ಟುಕೊಳ್ಳಬೇಕು, ತಾಂತ್ರಿಕ ಪರಿಣತರಿಂದ ವರದಿ ಪಡೆದು ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ರಾಜಸೀಟಿನ ಪುಟಾಣಿ ರೈಲು ಅಭಿವೃದ್ಧಿ ಸಂಬಂಧಿಸಿದಂತೆ `ಪಿಪಿಪಿ’ ಮಾದರಿಯಲ್ಲಿ ನಿರ್ವಹಣೆ ಮಾಡಿದರೆ ಒಳ್ಳೆಯದು, ಇದ ರಿಂದ ಹೊರಗುತ್ತಿಗೆ ಅವರೇ ನಿರ್ವಹಣೆ ಮಾಡುತ್ತಾರೆ. ಈ ಬಗ್ಗೆ ಗಮನಹರಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಅವರು ತಿಳಿಸಿದರು.

ರಾಜಸೀಟಿನಲ್ಲಿ ಪ್ಲಾಸ್ಟಿಕ್ ಬಾಟಲ್‍ನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದನ್ನು ತಡೆಯು ವಲ್ಲಿ ಅಲ್ಲಲ್ಲಿ ಡಸ್ಟ್‍ಬಿನ್‍ಗಳನ್ನು ಇಡುವುದು, ಹಾಗೆಯೇ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕ ಅಳವಡಿಸುವುದು, ಹಾಗೆಯೇ ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ಸೂಚಿಸಿದರು.

ರಾಜಸೀಟು ಬಳಿ ಇರುವ ಕೂರ್ಗ್ ವಿಲೇಜ್‍ನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರು ಭೇಟಿ ನೀಡು ವಂತಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜಸೀಟಿನಲ್ಲಿ ಧ್ವನಿವರ್ಧಕ ಅಳವಡಿಸಿ, ಸಣ್ಣ ಸಂಗೀತ ಮಾದರಿಯ ಧ್ವನಿ ಇರ ಬೇಕು. ಹಾಗೆಯೇ ಬೆಳಕು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ರಾಜಸೀಟು ಮುಂಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡಲು ಟೆಂಡರ್ ಆಹ್ವಾನಿಸುವಂತಾಗಬೇಕು. ಇದ ರಿಂದ ರಾಜಸೀಟು ಅಭಿವೃದ್ಧಿಗೆ ಮತ್ತಷ್ಟು ಹಣ ಸಂಗ್ರಹವಾಗಲಿದೆ. ಆ ನಿಟ್ಟಿನಲ್ಲಿ ಲೋಕೋ ಪಯೋಗಿ ಮತ್ತು ನಿರ್ಮಿತಿ ಕೇಂದ್ರದವರು ಅಂದಾಜು ಪಟ್ಟಿ ಸಲ್ಲಿಸುವಂತೆ ಅವರು ಸೂಚಿಸಿದರು. ನೆಹರು ಮಂಟಪದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 7 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಬೇಕು. ಇನ್ನಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು. ನೆಹರು ಮಂಟಪಕ್ಕೆ ಒಬ್ಬ ರಕ್ಷಕರನ್ನು ನಿಯೋಜಿಸು ವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

`ರಾಜರ ಗದ್ದುಗೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವಲ್ಲಿ ಮುಂದಾಗಬೇಕು. ಸಿಸಿ ಟಿವಿ ಅಳವಡಿಸಬೇಕು. ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ರಾಜರ ಗದ್ದುಗೆಗೆ ಭೇಟಿ ನೀಡುವಂತಾ ಗಲು ಇನ್ನಷ್ಟು ಆಕರ್ಷಣೀಯ ಮಾಡುವಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಡಾ.ಬಿ.ಸಿ.ಸತೀಶ ಸೂಚಿಸಿದರು.
ಜಿ.ಪಂ. ಸಿಇಒ ಡಾ.ಎಸ್.ಆಕಾಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್, ಕಾಫಿ ಮಂಡಳಿ ಉಪ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಲೋಕೋಪಯೋಗಿ ಇಲಾಖೆಯ ಎಂಜಿನಿ ಯರ್‍ಗಳಾದ ಚೆನ್ನಕೇಶವ, ದೇವರಾಜು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರೇಖಾ, ಪ್ರವಾಸೋದ್ಯಮ ಇಲಾಖೆಯ ಜತೀನ್ ಇತರರು ಹಲವು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಅಧೀಕ್ಷಕರಾದ ಪ್ರಕಾಶ್, ಗಣೇಶ್, ಸತೀಶ್ ಇತರರಿದ್ದರು.

Translate »