ವಿಶ್ವ ದಾಖಲೆ ನಿರ್ಮಾಣದ ಕೊಡವ ಕುಟುಂಬಗಳ ಬೃಹತ್ ಸಮ್ಮಿಲನ
ಕೊಡಗು

ವಿಶ್ವ ದಾಖಲೆ ನಿರ್ಮಾಣದ ಕೊಡವ ಕುಟುಂಬಗಳ ಬೃಹತ್ ಸಮ್ಮಿಲನ

December 27, 2022

ವಿರಾಜಪೇಟೆ/ಮಡಿಕೇರಿ, ಡಿ.26- ಅಲ್ಲಿ ಸಾವಿರಾರು ಮಂದಿ ಕೊಡವರು ಸೇರಿದ್ದರು. ಅವರ ಸಂಪ್ರದಾಯ ಮೇಳೈ ಸಿತ್ತು. ಎಲ್ಲಿ ನೋಡಿದರೂ ಕೊಡವರೇ. ಈ ಸಮ್ಮಿಲನ ಗಿನ್ನಿಸ್ ದಾಖಲೆ ಸ್ಥಾಪಿಸುವುದಾಗಿತ್ತು.

ಇತ್ತೀಚೆಗೆ ವಿರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ‘ಕೂರ್ಗ್ ಎತ್ನಿಕ್’ ಕಾರ್ಯ ಕ್ರಮದಲ್ಲಿ ಎಲ್ಲಾ ಕುಟುಂಬಗಳ 6 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು ಈ ಹಿಂದಿನ ಗಿನ್ನಿಸ್ ದಾಖಲೆಯನ್ನು ಮುರಿದು, ಹೊಸ ದಾಖಲೆ ನಿರ್ಮಿಸಲು ಮುಂದಾಗಿದ್ದರು. ಇದು ವಿಶೇಷ ಮತ್ತು ವಿಭಿನ್ನ ಕಾರ್ಯಕ್ರಮವಾಗಿತ್ತು.
ಕೊಡವರ ಎಲ್ಲಾ ಒಕ್ಕಗಳ ವಂಶಾವಳಿ ವೃಕ್ಷವನ್ನು ತಿತಿತಿ.ಞoಜಚಿvಚಿ ಛಿಟಚಿಟಿ.ಛಿom ಮೂಲಕ ಒಂದುಗೂಡಿಸಿ ಎಲ್ಲಾ ಕೊಡವರು ಒಂದೇ ಕುಟುಂಬಕ್ಕೆ ಸೇರಿದವರೆಂದು ದೃಢೀಕರಿಸುವ ಪ್ರಯತ್ನ ದಲ್ಲಿ ಕೊಡವ ಕ್ಲಾನ್ ಸಂಸ್ಥೆ ಈ ಮೂಲಕ ಯಶಸ್ಸು ಕಂಡಿದೆ.

ಈಗಾಗಲೇ ಗಿನ್ನಿಸ್ ಬುಕ್‍ನಲ್ಲಿ ದಾಖ ಲಾಗಿರುವ 4514 ಮಂದಿಯ ‘ಲಾರ್ಜೆಸ್ಟ್ ಫ್ಯಾಮಿಲಿ ಗ್ಯಾದರಿಂಗ್’ ದಾಖಲೆಯನ್ನು ಮುರಿಯುವ ಗುರಿಯ ಭಾಗವಾಗಿ ಕೊಡವ ಕುಟುಂಬಗಳ ಸಮ್ಮಿಲನ ಕಾರ್ಯ ಕ್ರಮ ಆಯೋಜಿಸಲಾಗಿತ್ತು. ಫ್ರಾನ್ಸ್‍ನಲ್ಲಿ ಒಲಿಮಿಯಾ ಕುಟುಂಬದ 4514 ಮಂದಿ ಒಂದೆಡೆ ಸೇರಿದ ದಾಖಲೆಯನ್ನು ಮುರಿಯು ವುದಕ್ಕಾಗಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಕೊಡವರು ಕಾರ್ಯಕ್ರಮದಲ್ಲಿ ಸೇರಿದ್ದರು ಎಂದು ಅಂದಾಜಿಸಲಾಗಿದೆ.
‘ಕೂರ್ಗ್ ಎತ್ನಿಕ್’ನಲ್ಲಿ 50 ಮಳಿಗೆಗಳನ್ನು ತೆರೆಯಲಾಗಿತ್ತಲ್ಲದೇ, ವಿವಿಧ ಸ್ಪರ್ಧೆಗಳು, ಪ್ರಸಾದ್ ಬಿದ್ದಪ್ಪ ಅವರ ಫ್ಯಾಷನ್ ಶೋ, ಸೂಪರ್ ಸಿಂಗರ್ ಮತ್ತು ವಾಲಗತ್ತಾಟ್ ನೃತ್ಯಗಳು, ಮನರಂಜನಾ ಕಾರ್ಯಕ್ರಮ ಗಳು ಗಮನ ಸೆಳೆದವು. ಮಹಿಳೆಯರು ಮಕ್ಕಳಾದಿಯಾಗಿ ನೆರೆದಿದ್ದವರು ಕೊಡವ ವಾಲಗಕ್ಕೆ ಕುಣಿದು ಸಂಭ್ರಮಿಸಿದರು.

ಹಿರಿಯ ಕಲಾವಿದ ಮುಳ್ಳೇರ ಜಿಮ್ಮಿ ಅಯ್ಯಪ್ಪ ಅವರ ನೆನಪಿನಲ್ಲಿ ಅವರ ಹಾಡು ಗಳು ಕೊಡವ ನೈಟ್ಸ್‍ನಲ್ಲಿ ಮೂಡಿ ಬಂದವು. ಕೊಡವ ಸಾಹಿತಿಗಳು ಬರೆದಿರುವ ಪುಸ್ತಕ ಗಳ ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮ ಆಯೋಜಕರಾದ ಗೊಮ್ಮಟ್ಟಿರ ಕಿಶು ಉತ್ತಪ್ಪ, ವಿರಾಜಪೇಟೆ ಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ‘ವಲ್ರ್ಡ್ ಬುಕ್ ಆಫ್ ರೆಕಾಡ್ರ್ಸ್’ನ ಪ್ರತಿನಿಧಿಗಳು ಆಗಮಿಸಿದ್ದರಲ್ಲದೇ, ಒಟ್ಟು ಸಂಖ್ಯೆಯ ದಾಖಲೀಕರಣವನ್ನು ಸ್ಥಳದಲ್ಲಿಯೇ ಮಾಡಿಕೊಂಡಿದ್ದಾರೆ ಎಂದರು.

ಅಲ್ಲಿ ಸೇರಿದವರೆಲ್ಲ ಒಂದೇ ಕುಟುಂಬದ ವಂಶವೃಕ್ಷಕ್ಕೆ ಸೇರಿದವರೆಂದು ನಿರ್ಧರಿಸಲು ಮತ್ತು ಅದನ್ನು ಖಚಿತಪಡಿಸಲು ಕೆಲವು ಮಾನದಂಡಗಳಿವೆ. ಈ ಪ್ರಕ್ರಿಯೆಗಳು ಪೂರ್ಣ ಗೊಳ್ಳಲು ಒಂದೂವರೆ ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಆ ಬಳಿಕ ವಿಶ್ವ ದಾಖಲೆಗೆ ಶಿಫಾರಸ್ಸು ಆಗಲಿದೆ ಎಂದು ಗೊಮ್ಮಟ್ಟಿರ ಕಿಶು ಉತ್ತಪ್ಪ ಮಾಹಿತಿ ನೀಡಿದ್ದಾರೆ.

ಕೊಡಗು ಸೇರಿದಂತೆ ದೆಹಲಿ, ಚೆನ್ನೈ, ಹೈದರಾಬಾದ್ ಮಾತ್ರವಲ್ಲದೇ ಸಿಂಗಾಪುರ್, ಯುಎಸ್‍ಎ, ದುಬೈಯಂತಹ ವಿದೇಶ ಗಳಿಂದಲೂ ಕೊಡವ ಕುಟುಂಬಗಳು ಆಗಮಿಸಿದ್ದವು ಎಂದು ಕಿಶು ಉತ್ತಪ್ಪ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಬಂದು ಸೇರಿದ ಎಲ್ಲರೂ ಕೊಡವ ವಂಶ ವೃಕ್ಷಕ್ಕೆ ಜೋಡಿಸಬೇಕಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದೂ ಕಿಶು ಉತ್ತಪ್ಪ ವಿವರಿಸಿದರು.

Translate »