ಭಕ್ತರ ಮನೆ ಬಾಗಿಲಿಗೆ ಭಾಗಮಂಡಲ ಭಗಂಡೇಶ್ವರ, ತಲಕಾವೇರಿ ಪ್ರಸಾದ
ಕೊಡಗು

ಭಕ್ತರ ಮನೆ ಬಾಗಿಲಿಗೆ ಭಾಗಮಂಡಲ ಭಗಂಡೇಶ್ವರ, ತಲಕಾವೇರಿ ಪ್ರಸಾದ

March 7, 2023

ಮಡಿಕೇರಿ, ಮಾ.6-ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಗಳ ಇಲಾಖೆಯ ವತಿಯಿಂದ ಮಡಿಕೇರಿ ಅಂಚೆ ಕಚೇರಿಯ ಸಹಕಾರದೊಂದಿಗೆ ಕಾವೇರಿ ಕ್ಷೇತ್ರದ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಆನ್‍ಲೈನ್ ಸೇವೆಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಇಂದು ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿತ ಸರಳ ಕಾರ್ಯಕ್ರಮದಲ್ಲಿ ಶ್ರೀ ತಲಕಾವೇರಿಯ 100 ಎಂ.ಎಲ್ ತೀರ್ಥ, ತ್ರಿವೇಣಿ ಸಂಗಮ ಭಾಗಮಂಡ ಲದ ಶ್ರೀ ಭಗಂಡೇಶ್ವರ ದೇಗುಲದ ಪಂಚ ಕಜ್ಜಾಯ, ಕುಂಕುಮ, ಗಂಧವನ್ನು ಒಳ ಗೊಂಡ ಪ್ರಸಾದದ ಡಬ್ಬಿಯನ್ನು ಜಿಲ್ಲಾಧಿ ಕಾರಿಗಳು ಬಿಡುಗಡೆ ಮಾಡಿದರು. ಪವಿತ್ರ ಕಾವೇರಿ ಕ್ಷೇತ್ರದ ಪ್ರಸಾದವನ್ನು ಪಡೆಯಲು ಆಸಕ್ತಿ ಇರುವವರು ತಿತಿತಿ.iಟಿಜiಚಿಠಿosಣ. ಛಿom  ವೆಬ್‍ಸೈಟ್‍ಗೆ ಲಾಗ್ ಇನ್ ಆಗಿ, 300ರೂ. ಪಾವತಿಸಿ ಪ್ರಸಾದಕ್ಕೆ ತಮ್ಮ ಬೇಡಿಕೆಯನ್ನು ಸಲ್ಲಿಸಬಹುದು. ಈ ಆನ್ ಲೈನ್ ಬೇಡಿಕೆÀಗೆ ಅನುಗುಣವಾಗಿ ಪ್ರಸಾದ ವನ್ನು ಅಂಚೆ ಮೂಲಕ ಸಂಬಂಧಿಸಿದವ ರಿಗೆ ತಲುಪಿಸಲಾಗುತ್ತದೆ. ಭಕ್ತರ ಬೇಡಿಕೆಗೆ ಅನುಗುಣವಾಗಿ ಭವಿಷ್ಯದ ದಿನಗಳಲ್ಲಿ ಪ್ರಸಾದದೊಂದಿಗೆ ಲಾಡು ಕೂಡ ಸೇರ್ಪಡೆ ಮಾಡುವ ಚಿಂತನೆ ಇದೆ ಎಂದು ಜಿಲ್ಲಾಧಿ ಕಾರಿ ಡಾ.ಬಿ.ಸಿ.ಸತೀಶ ಮಾಹಿತಿ ನೀಡಿದರು.

ಭಾರತದಾದ್ಯಂತ ಪ್ರಸಾದ ಸೇವೆ: ಮಡಿ ಕೇರಿ ಅಂಚೆ ಕಚೇರಿಯ ಸೂಪರಿಂಟೆಂಡೆÉಂಟ್ ರಮೇಶ್ ಬಾಬು ಮಾತನಾಡಿ, ವೆಬ್‍ಸೈಟ್ ಮೂಲಕ ಬರುವ ಬೇಡಿಕೆಗೆ ಅನುಗುಣ ವಾಗಿ ಪ್ರಸಾದವನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.

ಭಾರತದ ಒಳಗಿನ ಯಾವುದೇ ಪ್ರದೇಶಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದವನ್ನು ತಲುಪಿಸಲಾಗುತ್ತದೆ. 4 ರಿಂದ 5 ದಿನಗಳ ಒಳಗೆ ಪ್ರಸಾದ ಪಡೆಯಲು ಇಚ್ಚಿಸಿದವರ ಮನೆ ಬಾಗಿಲಿಗೆ ಪ್ರಸಾದ ತಲುಪಲಿದೆ ಎಂದು ವಿವರಿಸಿದರು.

ಹೊರ ದೇಶಗಳಿಂದ ಬೇಡಿಕೆ ಬಂದಲ್ಲಿ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗದವರು, ದೂರದ ಊರುಗಳಲ್ಲಿ ನೆಲೆಸಿರುವವರು ಈ ವಿನೂತನ ಯೋಜನೆಯ ಮೂಲಕ ಕಾವೇರಿಯ ಪ್ರಸಾದವನ್ನು ತರಿಸಿಕೊಳ್ಳಬಹುದಾಗಿದೆ ಎಂದು ರಮೇಶ್ ಬಾಬು ಹೇಳಿದರು. ಪ್ರಸಾದ ಸೇವೆಯ ಉದ್ಘಾಟನೆಯ ಸಂದರ್ಭ ಶ್ರೀ ಭಾಗಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಆಡಳಿತಾಧಿಕಾರಿ ಹಾಗೂ ಎ.ಡಿ.ಸಿ ಡಾ.ನಂಜುಂಡೇಗೌಡ, ಕಾರ್ಯನಿರ್ವ ಹಣಾಧಿಕಾರಿ ಎಂ.ಎಸ್. ದೊರೆ, ಶ್ರೀ ತಲಕಾವೇರಿ ದೇವಾಲಯದ ಪಾರುಪತ್ತೆಗಾರ ಕೆ.ಟಿ.ಪೊನ್ನಣ್ಣ ಹಾಗೂ ಅಂಚೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Translate »