ಕೆಆರ್‍ಎಸ್ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಬೇಸಿಗೆಯಲ್ಲಿ ಕುಡಿಯುವ ನೀರಿನ ಚಿಂತೆ ಬೇಡ
ಮೈಸೂರು

ಕೆಆರ್‍ಎಸ್ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹ ಬೇಸಿಗೆಯಲ್ಲಿ ಕುಡಿಯುವ ನೀರಿನ ಚಿಂತೆ ಬೇಡ

March 7, 2023

ಮೈಸೂರು, ಮಾ. 6(ಆರ್‍ಕೆ)- ಕೃಷ್ಣ ರಾಜಸಾಗರ (ಕೆಆರ್‍ಎಸ್) ಜಲಾಶಯ ದಲ್ಲಿ ಸಾಕಷ್ಟು ನೀರಿನ ಸಂಗ್ರಹ ಇರು ವುದರಿಂದ ಈ ಬಾರಿ ಬೇಸಿಗೆಯಲ್ಲಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಎಕ್ಸಿಕ್ಯೂಟಿವ್ ಇಂಜಿ ನಿಯರ್ ರಾಮಸ್ವಾಮಿ ತಿಳಿಸಿದ್ದಾರೆ.

ಕೆಆರ್‍ಎಸ್ ಜಲಾಶಯದಲ್ಲಿ ಇಂದು 104.66 ಅಡಿ ನೀರು ಸಂಗ್ರಹ ಇರುವು ದರಿಂದ ಈ ವರ್ಷ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರ ಗಳಿಗೆ ಕುಡಿಯುವ ನೀರು ಪೂರೈಕೆಗೆ ಕೊರತೆ ಉಂಟಾಗುವುದಿಲ್ಲ. ಆದರೆ ಪ್ರಸ್ತುತ ಬೆಳೆದು ನಿಂತಿರುವ ಬೆಳೆಗೆ ಮಾತ್ರ ಕಟ್ಟು ನೀರಿನ ಪದ್ಧತಿಯಂತೆ ನೀರು ಪೂರೈಸಲಾಗುವುದು.ಪ್ರಸ್ತುತ ಅಣೆಕಟ್ಟೆಯಲ್ಲಿ 28.44 ಟಿಎಂಸಿ ಅಡಿ ನೀರು ಸಂಗ್ರಹ ಇರುವುದರಿಂದ ಮೈಸೂರು, ಮಂಡ್ಯ, ಬೆಂಗಳೂರು ನಗರಗಳಿಗೆ ಸಮರ್ಪಕ ವಾಗಿ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದ್ದು, ಈ ಬಾರಿ ಭಾರೀ ಪ್ರಮಾಣದ ಮಳೆಯಾಗಿದ್ದರಿಂದ ವರ್ಷದ ಬಹುತೇಕ ದಿನಗಳಲ್ಲಿ ಒಳಹರಿವು ಹೆಚ್ಚಾಗಿತ್ತು. ಹಾಗಾಗಿ ಕೆಆರ್‍ಎಸ್ ಜಲಾಶಯ ಹಲವು ತಿಂಗಳ ಕಾಲ ಭರ್ತಿಯಾಗಿಯೇ ಇತ್ತು.
2022ರ ಮಾರ್ಚ್ 6 ರಂದು ಅಣೆಕಟ್ಟೆಯಲ್ಲಿ 112 ಅಡಿ ನೀರು ಸಂಗ್ರಹವಿತ್ತು. ಇಂದು 104.66 ಅಡಿ ನೀರಿದೆ. 90 ಅಡಿಗಿಂತ ಕಡಿಮೆ ಇದ್ದರೆ ಮಾತ್ರ ಕುಡಿಯುವ ನೀರಿನ ಬಗ್ಗೆ ಚಿಂತಿಸಬೇಕಾದ ಪ್ರಮೇಯ ಉದ್ಭವಿಸುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಬೇಸಿಗೆ ಕಾಲಕ್ಕೆ ಆತಂಕ ಪಡಬೇಕಾಗಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಬು ಫಾರೂಕ್ ಸಹ ತಿಳಿಸಿದ್ದಾರೆ.

Translate »