ರಾಜಮೌಳಿ RRR ಚಿತ್ರದ `ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ
News

ರಾಜಮೌಳಿ RRR ಚಿತ್ರದ `ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ

March 14, 2023

ಲಾಸ್ ಏಂಜಲೀಸ್, ಮಾ.13- ಅಕಾಡೆಮಿ ಅವಾಡ್ರ್ಸ್ ಸಮಾ ರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಎಸ್.ಎಸ್. ರಾಜಮೌಳಿ ಅವರ ಆರ್‍ಆರ್‍ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ.

ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್ ಲಭ್ಯವಾಗಿದೆ. `ನಾಟು ನಾಟು..’, `ಲಿಫ್ಟ್ ಮಿ ಅಪ್’, `ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಮೊದಲಾದ ಹಾಡುಗಳು ರೇಸ್‍ನಲ್ಲಿದ್ದವು. ಈ ಪೈಕಿ `ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ.

ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಸಭಾಂಗಣದ ತುಂಬಾ ಚಪ್ಪಾಳೆಯ ಸದ್ದು ಜೋರಾಗಿತ್ತು. ಭಾರತದಲ್ಲೂ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಭಾರತೀಯ ಸಿನಿಮಾ ರಂಗದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಗಳನ್ನು ಕೋರುತ್ತಿದ್ದಾರೆ. ಅದರಲ್ಲೂ ತೆಲುಗು ಸಿನಿಮಾ ರಂಗದಲ್ಲಿ ಹಬ್ಬದ ವಾತಾ ವರಣವೇ ಕಂಡು ಬಂದಿತು.

ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇ ಟರ್‍ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿ ಯಾಗಿದ್ದಾರೆ. ಅಲ್ಲದೇ ನಿರ್ದೇಶಕ ರಾಜ ಮೌಳಿ, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್. ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರತಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದ್ದವು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ಹೆಮ್ಮೆ ತಂದಿದೆ.

ಆಸ್ಕರ್ ಪ್ರಶಸ್ತಿಯ ಟ್ರೋಫಿ ಜೊತೆ ನಗದು ಬಹುಮಾನ ಕೊಡದೇ ಇದ್ದರೂ, ಉಡು ಗೊರೆಯ ರೂಪದಲ್ಲಿ ಅನೇಕ ವಸ್ತುಗಳು, ಪ್ರವಾಸ ಪ್ಯಾಕೇಜ್‍ಗಳು ವಿಜೇತರಿಗೆ ಸಿಗುತ್ತವೆ. ಕೇವಲ ಪ್ರಶಸ್ತಿ ಗೆದ್ದವರಿಗೆ ಮಾತ್ರವಲ್ಲ, ನಾಮ ನಿರ್ದೇಶನ ಗೊಂಡವರಿಗೆ ಉಡುಗೊರೆ ಇರಲಿದೆ.

ಈ ಬಾರಿ ಗಿಫ್ಟ್ ಬಾಕ್ಸ್‍ನಲ್ಲಿ 1 ಲಕ್ಷ ಡಾಲರ್ ಮೌಲ್ಯದ ಉಡುಗೊರೆಗಳು ಇವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪೀಸೆಸ್ ಆಫ್ ಆಸ್ಟ್ರೇಲಿಯಾ ಕಂಪೆನಿಯೊಂದು ನಾಮ ನಿರ್ದೇಶನ ಗೊಂಡವರಿಗೆ ಆಸ್ಟ್ರೇಲಿಯಾದಲ್ಲಿ ಒಂದು ಚದರ ಮೀಟರ್ ಭೂಮಿ ಕೊಡಲು ಮುಂದಾಗಿದೆಯಂತೆ.

Translate »