ರಘುಲಾಲ್ `ರಾಘವನ್’ ಸಾರ್ಥಕ ಬಹುಮುಖ ಸೇವೆ
ಮೈಸೂರು

ರಘುಲಾಲ್ `ರಾಘವನ್’ ಸಾರ್ಥಕ ಬಹುಮುಖ ಸೇವೆ

March 14, 2023

ಮೈಸೂರು: ಫಾರ್ಮಾ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ರಘುಲಾಲ್ ಅಂಡ್ ಕಂಪನಿ ಮುಖ್ಯಸ್ಥ ಎನ್.ರಾಘವನ್ ಅವರ ಸಾಮಾಜಿಕ ಸೇವೆ ಸ್ಮರಣೀಯ. ಹಸಿರೀಕರಣ, ಪರಿಸರ ಸಂರಕ್ಷಣೆ, ಬೀದಿಬದಿ ವ್ಯಾಪಾರಿಗಳಿಗೆ ನೆರವು ಹೀಗೆ ನಾನಾ ರೀತಿಯಲ್ಲಿ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಹಾಗೆಯೇ ಪ್ರಧಾನಮಂತ್ರಿ ಕ್ಷಯರೋಗ ಮುಕ್ತ ಭಾರತ ಅಭಿಯಾ ನಕ್ಕೂ ಕೈಜೋಡಿಸಿ ನೂರಾರು ಟಿಬಿ ರೋಗಿಗಳ ದತ್ತು ಪಡೆದು ಅವರಿಗೆ ಪೌಷ್ಟಿ ಕಾಂಶಯುಕ್ತ ಪೌಡರ್ ಕಲ್ಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಗತ್ತಿನಲ್ಲಿ ಟಿಬಿಯಿಂದ ಸಾವನ್ನಪ್ಪುವವ ರಲ್ಲಿ ಶೇ.34ರಷ್ಟು ಭಾರತೀಯರಾಗಿ ದ್ದಾರೆ. ಅಂದರೆ ವಾರ್ಷಿಕ 4 ಲಕ್ಷಕ್ಕೂ ಹೆಚ್ಚು ಜನ ಮರಣ ಹೊಂದುತ್ತಾರೆ. ಸದ್ಯ ಸಾವಿನ ಪ್ರಮಾಣ ಕಡಿಮೆಯಾಗಿದ್ದು, 2025ರೊಳಗೆ ಭಾರತ ಟಿಬಿ ಮುಕ್ತ ದೇಶವಾಗಬೇಕೆಂಬ ಆಶಯದೊಂದಿಗೆ ಪ್ರಧಾನಿ ಮೋದಿ ಅವರು ಅಭಿಯಾನ ಆರಂಭಿಸಿದ್ದಾರೆ. ಅದರ ಭಾಗವಾಗಿ ಟಿಬಿ ರೋಗಿಗಳನ್ನು 9 ತಿಂಗಳ ಅವಧಿಗೆ ದತ್ತು ಪಡೆದು ಅವರಿಗೆ ಬೇಕಾದ ಪೌಷ್ಟಿಕ ಆಹಾರ, ಇತರೆ ಉತ್ಪನ್ನಗಳನ್ನು ಕಲ್ಪಿಸು ವಂತೆ ಕರೆ ನೀಡಿದ್ದರು. ಇದಕ್ಕೆ ಕೋಟ್ಯಾಂತರ ಮಂದಿ ಕೈಜೋಡಿಸಿದ್ದಾರೆ. ಹಾಗೆಯೇ ನಾನು ಈವರೆಗೆ 300 ಟಿಬಿ ರೋಗಿಗಳಿಗೆ ಪೌಷ್ಟಿಕಾಂಶದ ಪೌಡರ್ ನೀಡುತ್ತಿದ್ದು, ಇನ್ನು ಮುಂದೆ 500 ಜನರಿಗೆ ನೀಡಲಿದ್ದೇವೆ ಎಂದರು. ಕ್ಷಯ ರೋಗಿಗಳು ವೈದ್ಯರ ಸಲಹೆಯಂತೆ 6-9 ತಿಂಗಳು ಕಡ್ಡಾಯ ವಾಗಿ ಔಷಧಿ ಪಡೆಯಬೇಕು. ಆದರೆ ಹಣ ಇನ್ನಿತರ ಕಾರಣದಿಂದ ಪೂರ್ಣ ವಾಗಿ ಔಷಧಿ ಪಡೆಯದೆ ಗಂಭೀರ ಸ್ಥಿತಿ ತಲುಪುತ್ತಾರೆ. ಹಾಗಾಗಿ ಸರ್ಕಾರ ರೋಗಿ ಗಳ ವಿವರವನ್ನು ಕಲೆಹಾಕಿ ಔಷಧಿ ಖರೀದಿಸಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಯೋಜನೆ ರೂಪಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಔಷಧಿ ಕೊಳ್ಳುವ ಟಿಬಿ ರೋಗಿಗಳ ಆಧಾರ್ ಹಾಗೂ ಮೊಬೈಲ್ ಸಂಖ್ಯೆ, ವೈದ್ಯರ ವಿವರ ವನ್ನು ಮೆಡಿಕಲ್ ಶಾಪ್‍ನವರು ದಾಖ ಲಿಸಿಕೊಂಡು ಪ್ರತಿ ತಿಂಗಳು ಔಷಧ ನಿಯಂತ್ರಣಾಧಿಕಾರಿ, ಜಿಲ್ಲಾ ಆರೋಗ್ಯಾ ಧಿಕಾರಿ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳಿಗೆ ವರದಿ ನೀಡಬೇಕು. ಈ ಕಷ್ಟಕರ ಕೆಲಸ ಬೇಡ ವೆಂದು ಹಲವರು ಟಿಬಿ ಔಷಧಿ ಮಾರಾಟ ವನ್ನೇ ಮಾಡುವುದಿಲ್ಲ. ಇದೆಲ್ಲವನ್ನೂ ಗಮನಿಸಿ ಅನೇಕ ಮಹನೀಯರೊಂದಿಗೆ ನನ್ನನ್ನೂ ಅಭಿನಂದಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.

Translate »