ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿದ ಮೈಸೂರಿನ ರಘುಲಾಲ್ ರಾಘವನ್ ಸೇರಿ ಹಲವರಿಗೆ ರಾಜಭವನದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅಭಿನಂದನೆ
ಮೈಸೂರು

ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಿದ ಮೈಸೂರಿನ ರಘುಲಾಲ್ ರಾಘವನ್ ಸೇರಿ ಹಲವರಿಗೆ ರಾಜಭವನದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅಭಿನಂದನೆ

March 14, 2023

ಬೆಂಗಳೂರು, ಮಾ.13-ಪ್ರಧಾನಮಂತ್ರಿ ಟಿಬಿ(ಕ್ಷಯ) ಮುಕ್ತ ಭಾರತ ಅಭಿಯಾನಕ್ಕೆ ಕೈ ಜೋಡಿಸಿರುವ ಸಹೃದಯಿಗಳನ್ನು ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಅಭಿನಂದಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹೆಲ್ತ್ ಮಿಷನ್, ಕರ್ನಾಟಕ ಟಿಬಿ ಘಟಕ ಮತ್ತು ರಾಜ ಭವನದ ಸಹಯೋಗದಲ್ಲಿ ಇಲ್ಲಿನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸೋಮವಾರ ಆಯೋಜಿ ಸಿದ್ದ `ಕ್ಷಯ ರೋಗಿಗಳ ದತ್ತು ಪಡೆಯುವ ಮತ್ತು ನಿ-ಕ್ಷಯ ಮಿತ್ರ(ದಾನಿಗಳ) ಸನ್ಮಾನ’ ಸಮಾರಂಭದಲ್ಲಿ ಮೈಸೂರಿನ ರಘುಲಾಲ್ ಮೆಡಿಕಲ್ಸ್‍ನ ಎನ್.ರಾಘ ವನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಸಚಿವ ಗೋಪಾಲಯ್ಯ ಅವರ ಪತ್ನಿ ಎಸ್.ಪಿ.ಹೇಮಲತಾ ಗೋಪಾ ಲಯ್ಯ, ಮಂಡ್ಯ ಮಿಲ್ಕ್ ಯೂನಿಯನ್ ಲಿಮಿಟೆಡ್‍ನ ಎಂಡಿ ಡಾ.ಪಿ.ಆರ್.ಮಂಜೇಶ್, ಟಾಟಾ ಮೆಡಿಕಲ್ ಮತ್ತು ಡಯಾಗ್ನೋ ಸ್ಟಿಕ್‍ನ ಗಿರೀಶ್ ಕೃಷ್ಣಮೂರ್ತಿ, ಡಾ.ಫಾರೂಖ್ ಅಹಮದ್, ಜೀವಿತ್ ಎಂಟರ್‍ಪ್ರೈಸಸ್ ಸೇರಿದಂತೆ ಕ್ಷಯ ರೋಗಿಗಳ ದತ್ತು ಪಡೆದ ಅನೇಕ ಮಹನೀಯರನ್ನು ಗೌರವಿಸಿದರು.

ಈ ವೇಳೆ ರಾಜ್ಯಪಾಲರು ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಟಿಬಿ ಮುಕ್ತ ಭಾರತಕ್ಕಾಗಿ ಸಾರ್ವಜನಿಕ ಸಹಭಾಗಿತ್ವಕ್ಕೆ ಕರೆ ನೀಡಿದ್ದಾರೆ. ಪ್ರಧಾನ ಮಂತ್ರಿಯವರ ಟಿಬಿ ಮುಕ್ತ ಭಾರತ ಅಭಿ ಯಾನವನ್ನು ಜನಾಂದೋಲನವನ್ನಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಕಾರ, ಜಗತ್ತಿನ ಅನೇಕ ದೇಶ ಗಳು 2030ರ ವೇಳೆಗೆ ಟಿಬಿ ನಿರ್ಮೂ ಲನೆ ಮಾಡುವ ಗುರಿಯನ್ನು ಹೊಂದಿವೆ. ಆದರೆ ಪ್ರಧಾನಿ ಮೋದಿ ಅವರು 2025ರ ವೇಳೆಗೆ ಭಾರತ ಟಿಬಿ ಮುಕ್ತವಾಗಬೇಕೆಂಬ ಗುರಿ ಹೊಂದಿದ್ದಾರೆ. ಇದಕ್ಕೆ ಪೂರಕ ವಾಗಿ ರಾಜ್ಯದಲ್ಲಿ `ಕ್ಷಯ ಮುಕ್ತ ಕರ್ನಾ ಟಕ-2025′ ಗಾಗಿ ಯೋಜನೆಯನ್ನು ಅಳವಡಿಸಿಕೊಂಡಿದೆ ಎಂದರು.

`ನಿ-ಕ್ಷಯ 2.0′ ಪೆÇೀರ್ಟಲ್ ಮೂಲಕ ಟಿಬಿ ರೋಗಿಗಳಿಗೆ ಸಮುದಾಯದ ಸಹಭಾಗಿತ್ವವನ್ನು ಒದಗಿಸುವ ಉಪಕ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ಈ ಪೆÇೀರ್ಟಲ್‍ನಲ್ಲಿ ಸುಮಾರು 13.5 ಲಕ್ಷ ಕ್ಷಯ ರೋಗಿಗಳು ನೋಂದಾಯಿಸಿ ಕೊಂಡಿದ್ದಾರೆ. ಅವರಲ್ಲಿ 89 ಲಕ್ಷ ಸಕ್ರಿಯ ಟಿಬಿ ರೋಗಿಗಳು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ನಿ-ಕ್ಷಯ ಡಿಜಿಟಲ್ ಪೆÇೀರ್ಟಲ್ ಟಿಬಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮುದಾಯ ಬೆಂಬಲಕ್ಕಾಗಿ ವೇದಿಕೆಯನ್ನು ಒದಗಿಸುತ್ತಿದೆ. ನಾಗರಿಕರು, ಎನ್‍ಜಿಓಗಳು, ಕಾಪೆರ್Çರೇಟ್ ಸಂಸ್ಥೆ ಗಳು, ಚುನಾಯಿತ ಪ್ರತಿನಿಧಿಗಳು ಮತ್ತಿ ತರರು ನಿ-ಕ್ಷಯ ಮಿತ್ರರಾಗುವ ಮೂಲಕ ಟಿಬಿ ಮುಕ್ತ ಭಾರತ ಅಭಿಯಾನವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಒಬ್ಬರ ಜೀವ ಉಳಿಸುವ ಕಾರ್ಯ ಮಾನವೀಯ ಸೇವೆಯ ಅತ್ಯುತ್ತಮ ಕಾರ್ಯ. ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾದ `ಆಯುಷ್ಮಾನ್ ಭಾರತ್’ ಅಡಿಯಲ್ಲಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲೂ ಟಿಬಿಗೆ ಸಂಬಂಧಿಸಿದ ಸೇವೆ ವಿಸ್ತಾರವಾಗಿದೆ. ರಾಜ್ಯ ಸರ್ಕಾ ರದ ಪ್ರಯತ್ನದ ಫಲವಾಗಿ ಟಿಬಿ ಬಾಧೆ ಕಡಿಮೆಯಾಗಿದೆ. ಇದಕ್ಕಾಗಿ ಸಚಿವರು ಹಾಗೂ ಅಧಿಕಾರಿಗಳು ಹಾಗೂ ನೌಕರರನ್ನು ಅಭಿನಂದಿಸುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಗುರುತಿಸಲಾದ 39,745 ಟಿಬಿ ರೋಗಿ ಗಳಲ್ಲಿ 25,895 ರೋಗಿಗಳು ಪೋಷಣೆ ಪಡೆಯಲು ಒಪ್ಪಿಗೆ ನೀಡಿದ್ದು ಅವರಲ್ಲಿ 25,110 ರೋಗಿಗಳನ್ನು ದತ್ತು ಪಡೆಯ ಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮೈಸೂರು ಸೇರಿ 10 ಜಿಲ್ಲೆಗಳ 100 ಟಿಬಿ ರೋಗಿಗಳನ್ನು ರಾಜಭವನದಿಂದ ದತ್ತು ತೆಗೆದುಕೊಳ್ಳಲಾಗಿದೆ ಎಂದು ಘೋಷಿಸಿ ದರು. ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು 500 ಟಿಬಿ ರೋಗಿ ಗಳನ್ನು ದತ್ತು ಪಡೆದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯ ದರ್ಶಿ ಟಿ.ಕೆ.ಅನಿಲ್‍ಕುಮಾರ್, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ.ನವೀನ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Translate »