ಸುಂಟಿಕೊಪ್ಪ ಬಳಿ ಕಾರ್ಯಾಚರಣೆ ವೇಳೆ ದುರಂತ ಸೆರೆಸಿಕ್ಕ ಕಾಡಾನೆ ಸಾವು
ಕೊಡಗು

ಸುಂಟಿಕೊಪ್ಪ ಬಳಿ ಕಾರ್ಯಾಚರಣೆ ವೇಳೆ ದುರಂತ ಸೆರೆಸಿಕ್ಕ ಕಾಡಾನೆ ಸಾವು

January 14, 2023

ಮಡಿಕೇರಿ, ಜ.13- ಕಾರ್ಯಾಚರಣೆ ವೇಳೆ ಸೆರೆ ಸಿಕ್ಕಿದ್ದ ಕಾಡಾನೆಯೊಂದು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಸಲಗ 20 ವರ್ಷ ಪ್ರಾಯದ್ದಾಗಿರ ಬಹುದು ಎಂದು ಅಂದಾಜಿಸಲಾಗಿದೆ.

ಅತ್ತೂರು ನಲ್ಲೂರು ಗ್ರಾಮದ ಕೃಷಿ ಪ್ರದೇಶಗಳಿಗೆ ದಾಳಿಯಿಟ್ಟು, ಕೃಷಿ ಫಸಲು ಧ್ವಂಸಗೊಳಿಸಿ, ಕೃಷಿಕರ ನಿದ್ದೆಗೆಡಿ ಸಿದ್ದ ಹಾಗೂ ಜನರನ್ನು ಕಂಡಲ್ಲಿ ದಾಳಿಗೆ ಮುಂದಾಗುತ್ತಿದ್ದ ಕಾಡಾನೆ ಕಾರ್ಯಾಚರಣೆ ಯಲ್ಲಿ ಸೆರೆಸಿಕ್ಕಿದ ಬಳಿಕ ಸಾವನ್ನಪ್ಪಿದೆ.

ಸಾಕಾನೆಗಳಿಂದ ಕಾರ್ಯಾಚರಣೆ: ಮೋದೂರು, ಅತ್ತೂರು ನಲ್ಲೂರಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಯನ್ನು ಸೆರೆಹಿಡಿ ಯಲು ಕಳೆದ 6 ತಿಂಗಳ ಹಿಂದೆಯೇ ಸರಕಾರ ದಿಂದ ಅನುಮತಿ ಸಿಕ್ಕಿತ್ತು. ಆದರೆ ಮಳೆಯ ಕಾರಣದಿಂದಾಗಿ ಕಾಡಾನೆ ಸೆರೆ ಕಾರ್ಯಾ ಚರಣೆ ತಡವಾಗಿತ್ತು. ಈ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿ ಮೀರಿದ್ದ ರಿಂದ ಕಳೆದ 3 ದಿನಗಳಿಂದ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಕೈಗೊಂಡಿತ್ತು.

ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್, ಹರ್ಷ, ಸುಗ್ರೀವ, ಶ್ರೀರಾಮ, ಲಕ್ಷ್ಮಣ ಸಾಕಾನೆಗಳ ಸಹಕಾರದೊಂದಿಗೆ ಸಹಾ ಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಂಜನ್, ಇಲಾಖೆಯ ವೈದ್ಯರಾದ ಡಾ.ಚಿಟ್ಟಿಯಪ್ಪ ಮತ್ತು ಡಾ. ರಮೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆ ಸೆರೆ ಕಾರ್ಯಾ ಚರಣೆಯನ್ನು ಕೈಗೊಂಡಿದ್ದರು..

ಕಾಡಾನೆ ಸೆರೆ: ಈ ನಡುವೆ ಗುರುವಾರ ರಾತ್ರಿ ಮನೆಯೊಂದರ ಮೇಲೆ ದಾಳಿ ನಡೆಸಿದ ಈ ಕಾಡಾನೆ ಸೊಂಡಿಲಿನಿಂದ ಮನೆಯ ಬಾಗಿಲನ್ನು ಮುರಿಯಲು ಯತ್ನಿಸಿತ್ತು. ಈ ಮಾಹಿತಿ ತಿಳಿದ ಅರಣ್ಯ ಇಲಾಖಾಧಿಕಾರಿಗಳು ಶುಕ್ರವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಕಾಡಾನೆ ಪತ್ತೆ ಕಾರ್ಯ ಆರಂಭಿಸಿದ್ದರು. ಬೆಳಗಿನ ಸುಮಾರು 9 ಗಂಟೆಯ ವೇಳೆಗೆ ಮೋದೂರು ತೋಟವೊಂದರಲ್ಲಿ ಈ ಕಾಡಾನೆ ಬೀಡು ಬಿಟ್ಟಿರುವುದನ್ನು ಕಾರ್ಯಾಚರಣೆ ತಂಡ ಗುರುತಿಸಿತ್ತು. ಬಳಿಕ ಡಾ. ರಮೇಶ್ ಅವರು ಅದರ ಮೇಲೆ ಅರವಳಿಕೆಯನ್ನು ಪ್ರಯೋ ಗಿಸಿದ್ದಾರೆ. ಇದರಿಂದ ಗಾಬರಿಯಾದ ಕಾಡಾನೆ ಸುಮಾರು 500 ಮೀಟರ್ ದೂರವರೆಗೆ ಓಡಿದೆ. ಅತ್ತೂರು ನಲ್ಲೂರು ಗ್ರಾಮದ ಮುತ್ತಣ್ಣ ಎಂಬುವರಿಗೆ ಸೇರಿದ ಇಳಿಜಾರು ಪ್ರದೇಶದಲ್ಲಿದ್ದ ತೋಟದ ಸುಮಾರು 35 ಅಡಿ ಆಳದ ಸಿಮೆಂಟ್ ಕಾಫಿ ಕಣಕ್ಕೆ ಬಿದ್ದಿದೆ.

ಕುಸಿದು ಬಿದ್ದ ‘ಮದಕರಿ’: ಬಳಿಕ ಸಾಕಾನೆ ಗಳ ಸಹಾಯದಿಂದ ಹಗ್ಗದ ಮೂಲಕ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಳು ಮೇಲಕ್ಕೆತ್ತಿದರು. ನಂತರ ಚೇತರಿಸಿ ಕೊಂಡ ಕಾಡಾನೆಯನ್ನು ಕಾಫಿ ತೋಟ ಮಾರ್ಗವಾಗಿ ಸುಮಾರು 100 ಮೀಟರ್ ದೂರ ಕರೆತರುವ ಸಂದರ್ಭ ಏಕಾಏಕಿ ಮತ್ತೆ ಕುಸಿದು ಬಿದ್ದಿದೆ. ತಕ್ಷಣವೇ ಇಲಾಖೆಯ ನುರಿತ ವೈದ್ಯರಾದ ಡಾ. ಚಿಟ್ಟಿಯಪ್ಪ ಮತ್ತು ಡಾ.ರಮೇಶ್ ಅವರು ಕಾಡಾನೆಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾಡಾನೆ ಮೃತಪಟ್ಟಿದೆ. ನಂತರ ಮೃತ ಕಾಡಾನೆಯ ಕಳೇಬರ ವನ್ನು ಕ್ರೇನ್ ಸಹಾಯದಿಂದ ಲಾರಿಯಲ್ಲಿ ಮೀನುಕೊಲ್ಲಿ ಅರಣ್ಯಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಗ್ರಾಮಸ್ಥರಾದ ಕಾರ್ಯಪ್ಪ ಅವರು ಮಾತನಾಡಿ, ಈ ವ್ಯಾಪ್ತಿಯಲ್ಲಿ ಸುಮಾರು 40 ವರ್ಷದಿಂದ ಕಾಡಾನೆಗಳ ಹಾವಳಿ ಇದೆ. ಮೀನುಕೊಲ್ಲಿ ಅರಣ್ಯ ವ್ಯಾಪ್ತಿ ಯಲ್ಲೇ ಈ ಹಿಂದೆ 17 ಕಾಡಾನೆಗಳಿದ್ದವು. ಅವುಗಳ ಸಂಖ್ಯೆ ಈಗ ಎಷ್ಟಿದೆ ಎಂದು ತಿಳಿದಿಲ್ಲ. ಕಾರ್ಯಾಚರಣೆ ಸಂದರ್ಭ ಸೆರೆಸಿಕ್ಕಿ ಸಾವನ್ನಪ್ಪಿದ ಪುಂಡಾನೆ, ಈ ವ್ಯಾಪ್ತಿಯಲ್ಲಿ ಕೃಷಿ ಫಸಲುಗಳನ್ನು ನಿರಂತರ ವಾಗಿ ಧ್ವಂಸಗೊಳಿಸುತ್ತಿತ್ತು. ಮಾತ್ರವಲ್ಲದೇ 1 ವರ್ಷದ ಹಿಂದೆ ತೋಟ ಕೆಲಸಕ್ಕೆ ತೆರಳು ತ್ತಿದ್ದ ಮಹಿಳೆಯೊರ್ವರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು ಎಂದು ಮಾಹಿತಿ ನೀಡಿದರು.

Translate »