ತಾತ-ಮೊಮ್ಮಗನ ಬಲಿ ಪಡೆದ ಹುಲಿ ಸೆರೆ
ಕೊಡಗು

ತಾತ-ಮೊಮ್ಮಗನ ಬಲಿ ಪಡೆದ ಹುಲಿ ಸೆರೆ

February 15, 2023

ಗೋಣಿಕೊಪ್ಪ/ಮಡಿಕೇರಿ,ಫೆ.14- ಮೊಮ್ಮಗ ಮತ್ತು ತಾತನನ್ನು ಬಲಿ ಪಡೆ ದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾ ಗಿದೆ. 48 ಗಂಟೆಯಲ್ಲಿ ಹುಲಿ ಸೆರೆ ಹಿಡಿ ಯುವುದಾಗಿ ಈಗಾಗಲೇ ಅರಣ್ಯ ಅಧಿ ಕಾರಿಗಳು ಭರವಸೆ ನೀಡಿದ್ದರು. ಅಷ್ಟ ರೊಳಗೆ ಹುಲಿಯ ಸೆರೆ ಹಿಡಿದು, ಜನರಲ್ಲಿ ಕೊಂಚ ನೆಮ್ಮದಿ ತಂದಿದ್ದಾರೆ.

ಚೂರಿಕಾಡು ಗ್ರಾಮದ ನೆಲ್ಲೀರ ಪೂಣಚ್ಚ ಎಂಬುವರ ತೋಟದಲ್ಲಿ ಕಳೆದ ಭಾನು ವಾರ ಸಂಜೆ ಚೇತನ್(18) ಹಾಗೂ ಮರು ದಿನ ಬೆಳಗ್ಗೆ ಆತನ ತಾತ ರಾಜು(60) ಹುಲಿ ದಾಳಿಗೆ ಬಲಿಯಾಗಿದ್ದರು. ಇದರಿಂದ ಆಘಾತಕ್ಕೊಳಗಾಗಿ ಚೇತನ್ ಅಜ್ಜಿ ಜಯಮ್ಮ (55) ಅವರೂ ಸಾವನ್ನಪ್ಪಿದರು. ಈ ದುರಂತ ದಿಂದ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆದಿತ್ತು. ಪರಿಣಾಮ ಸರ್ಕಾರದ ಮಟ್ಟದಲ್ಲೂ ಗಂಭೀರ ಚರ್ಚೆಯಾಗಿ, 48 ಗಂಟೆಯಲ್ಲಿ ಹುಲಿ ಸೆರೆ ಹಿಡಿಯುವ ಭರವಸೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಂಡ ಕಾರ್ಯಾಚರಣೆಯನ್ನು ತೀವ್ರ ಗೊಳಿಸಿತ್ತು. ಮತ್ತಿಗೋಡು ಸಾಕಾನೆ ಶಿಬಿರ ದಿಂದ ದಸರಾ ಆನೆ ಅಭಿಮನ್ಯು ನೇತೃತ್ವದ ಚಿಕ್ಕಭೀಮ, ದೊಡ್ಡಭೀಮ, ಅಶ್ವತ್ಥಾಮ ಹಾಗೂ ಶ್ರೀಕಂಠ ಆನೆಗಳ ತಂಡದೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 150ಕ್ಕೂ ಹೆಚ್ಚು ಮಂದಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದ ತಂಡ ಹೆಜ್ಜೆ ಜಾಡು ಹಿಡಿದು ನಾಣಚ್ಚಿ ಗೇಟ್ ಬಳಿ ಮಧ್ಯಾಹ್ನ 2.30ರ ವೇಳೆಗೆ ಹುಲಿ ಯನ್ನು ಪತ್ತೆ ಮಾಡಿತು. ಜೀವ ಬಲಿ ಪಡೆದ ಹುಲಿಯೇ ಎನ್ನುವುದನ್ನು ಖಾತರಿಪಡಿಸಿ ಕೊಂಡ ಬಳಿಕ ಅಧಿಕಾರಿಗಳ ಸೂಚನೆ ಮೇರೆಗೆ ಟೈಗರ್ ಸ್ಕ್ವಾಡ್‍ನ ವೈದ್ಯಾಧಿಕಾರಿ ಡಾ.ರಂಜನ್ ಆನೆ ಮೇಲಿಂದ ಅರವಳಿಕೆ ಚುಚ್ಚು ಮದ್ದನ್ನು ಹುಲಿಗೆ ಡಾಟ್ ಮಾಡಿದರು. ಬಳಿಕ ಸ್ವಲ್ಪ ದೂರ ಓಡಿದ ಹುಲಿ ನಿತ್ರಾಣ ವಾಯಿತು. ಸಂಪೂರ್ಣವಾಗಿ ಪ್ರಜ್ಞೆ ತಪ್ಪಿದ ಬಳಿಕ ಅದನ್ನು ಸೆರೆ ಹಿಡಿಯಲಾಯಿತು.

ಮೈಸೂರಿಗೆ ಸ್ಥಳಾಂತರ: ಸೆರೆ ಸಿಕ್ಕ ಹೆಣ್ಣು ಹುಲಿ ಅಂದಾಜು 11 ರಿಂದ 12 ವರ್ಷ ವಯಸ್ಸಿನದು ಎಂದು ಅರಣ್ಯಾಧಿಕಾರಿ ಗಳು ತಿಳಿಸಿದ್ದಾರೆ. ಹುಲಿಯ ಕಾಲುಗಳಲ್ಲಿ ಆಳವಾದ ಗಾಯದ ಗುರುತುಗಳಿವೆ. ಆದ್ದರಿಂದ ಕಾಡುಪ್ರಾಣಿಗಳನ್ನು ಬೇಟೆ ಯಾಡಲು ಸಾಧ್ಯವಾಗದೇ, ಮಾನವನ ಮೇಲೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣದಿಂದ ಆ ಹುಲಿಯನ್ನು ಮೈಸೂರು ಕೂರ್ಗಳ್ಳಿಯಲ್ಲಿರುವ ಹುಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇಬ್ಬರ ಬಲಿಯ ನಂತರ ತೀವ್ರ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಕೂಂಬಿಂಗ್ ಮುಂದುವರೆಸಲಾಗು ವುದು. ಮನುಷ್ಯರ ಮೇಲೆ ದಾಳಿ ನಡೆದಿರುವ ಸ್ಥಳ, ಹುಲಿ ಸಂಚರಿಸಿರುವ ಪ್ರದೇಶಗಳಲ್ಲಿ ಹೆಚ್ಚಿನ ಶೋಧ ನಡೆಸಬೇಕಿದ್ದು, ಅದರಂತೆ ಕಾರ್ಯಾಚರಣೆ ನಡೆಸಲಾಗುವುದು. ಜನರ ಸುರಕ್ಷತೆ ದೃಷ್ಟಿಯಿಂದ ಕಾಫಿ ತೋಟಗಳಲ್ಲಿ ಕಾರ್ಯಚಟುವಟಿಕೆಯನ್ನು ನಾಲ್ಕೈದು ದಿನ ನಿಷೇಧಿಸಲಾಗಿದೆ. ಇದರಿಂದ ಶೋಧ ಕಾರ್ಯಕ್ಕೂ ಅನುಕೂಲ ವಾಗಲಿದೆ ಎಂದು ಕೊಡಗು ವೃತ್ತದ ಸಿಸಿಎಫ್ ನಿರಂಜನ್ ಮೂರ್ತಿ ತಿಳಿಸಿದರು.

Translate »