ಮೈಸೂರು

ಹಲವು ಮುಖಂಡರು ಜೆಡಿಎಸ್ ಸೇರ್ಪಡೆ
ಮೈಸೂರು

ಹಲವು ಮುಖಂಡರು ಜೆಡಿಎಸ್ ಸೇರ್ಪಡೆ

April 19, 2018

ತಿ.ನರಸೀಪುರ: ಮೂಗೂರು ಹೋಬಳಿ ಭಾಗದ ವೀರಶೈವ ಲಿಂಗಾಯತ ಸಮುದಾಯ ಈ ಬಾರಿ ಜಾತ್ಯಾ ತೀತ ಜನತಾದಳ ಪಕ್ಷವನ್ನು ಬೆಂಬಲಿಸುವ ಸಾಧ್ಯತೆಗಳಿದ್ದು, ಚುನಾವಣೆಯಲ್ಲಿ ಜೆಡಿಎಸ್ ಜಯಬೇರಿ ಭಾರಿಸುವುದು ಬಹುತೇಕ ಖಚಿತ ಎಂದು ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ಹೇಳಿದರು. ಪಟ್ಟಣದ ಜೆಡಿಎಸ್ ಕಛೇರಿ ಆವರಣ ದಲ್ಲಿ ವಿವಿಧ ಗ್ರಾಮಗಳ ವೀರಶೈವ ಲಿಂಗಾಯತ ಸಮುದಾಯದ ನೂರಾರು ಯುವಕರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನಿರಂತರವಾಗಿ ಬೆಂಬಲಿ ಸುತ್ತಿದ್ದ ಮೂಗೂರು ಹೋಬಳಿಯ ವೀರಶೈವ ಲಿಂಗಾಯತರು ಈಗ ಜೆಡಿಎಸ್‍ನತ್ತ ಒಲವು…

ಏ. 20 ರಂದು ಚಿಕ್ಕಣ್ಣ ನಾಮಪತ್ರ ಸಲ್ಲಿಕೆ
ಮೈಸೂರು

ಏ. 20 ರಂದು ಚಿಕ್ಕಣ್ಣ ನಾಮಪತ್ರ ಸಲ್ಲಿಕೆ

April 19, 2018

ಹೆಚ್.ಡಿ. ಕೋಟೆ:  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ. ಕೋಟೆ ಕ್ಷೇತ್ರದಿಂದ ಏ. 20 ರಂದು ಜೆಡಿಎಸ್ ಅಭ್ಯರ್ಥಿಯಾಗಿ ಬೀಚನಹಳ್ಳಿ ಚಿಕ್ಕಣ್ಣ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಪಟ್ಟಣದ ಪತ್ರಕರ್ತರ ಭವನದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿಕ್ಕಣ್ಣ ಅವರು ಮಾತನಾಡಿ, ಅಂದು ಪಟ್ಟಣದ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೇಟಿಕುಪ್ಪೆ ರಸ್ತೆಯಿಂದ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಮಿನಿ ವಿಧಾನಸೌಧದಲ್ಲಿ ಮಧ್ಯಾಹ್ನ 1.30 ರಿಂದ 2.45 ರೊಳಗಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದರು. ತಾಲೂಕಿನ ಬಿಎಸ್‍ಪಿ ಕಾರ್ಯಕರ್ತರು, ಮುಖಂಡರು,…

ಮತದಾರರಿಗೆ ಆಮಿಷಗಳನ್ನೊಡ್ಡುತ್ತಿರುವ ಕಾಂಗ್ರೆಸ್: ಶಾಸಕ ಸಾ.ರಾ. ಮಹೇಶ್ ಆರೋಪ
ಮೈಸೂರು

ಮತದಾರರಿಗೆ ಆಮಿಷಗಳನ್ನೊಡ್ಡುತ್ತಿರುವ ಕಾಂಗ್ರೆಸ್: ಶಾಸಕ ಸಾ.ರಾ. ಮಹೇಶ್ ಆರೋಪ

April 19, 2018

ಕೆ.ಆರ್.ನಗರ: ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ರಾಜ್ಯದ  ಅಭಿವೃದ್ಧಿಗಾಗಿ ಈ ಬಾರಿ ಹೆಚ್.ಡಿ.ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕಿದ್ದು, ರಾಜ್ಯಾದ್ಯಂತ ಜನತೆಯ ಭಾವನೆಯು ಸಹ ಇದೇ ಆಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದವರು ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನತೆಯೇ ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ…

ವಿಷ ಸೇವಿಸಿ ಯುವಕ ಆತ್ಮಹತ್ಯೆ
ಮೈಸೂರು

ವಿಷ ಸೇವಿಸಿ ಯುವಕ ಆತ್ಮಹತ್ಯೆ

April 19, 2018

ಹುಣಸೂರು: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಶಿವಪುರ ಗ್ರಾಮದ ಲೇ. ಸ್ವಾಮಿಗೌಡರ ಪುತ್ರ ಸಾಗರ್ (19) ಆತ್ಮಹತ್ಯೆ ಮಾಡಿಕೊಂಡವನು. ಈತ ಗ್ರಾಮದಿಂದ ಹುಣಸೂರಿಗೆ ಬರುವ ಮಾರ್ಗ ಮಧ್ಯೆ ದಾಸನಪುರದ ಬಳಿ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದನು. ಇದನ್ನು ಕಂಡ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಸುಧಾ ಮಹದೇವಯ್ಯ ಮರಳಿ ಕಾಂಗ್ರೆಸ್‍ಗೆ
ಮೈಸೂರು

ಸುಧಾ ಮಹದೇವಯ್ಯ ಮರಳಿ ಕಾಂಗ್ರೆಸ್‍ಗೆ

April 19, 2018

ತಿ.ನರಸೀಪುರ: ಮೂಗೂರು ಜಿ.ಪಂ ಮಾಜಿ ಸದಸ್ಯೆ ಎಂ. ಸುಧಾಮಹದೇವಯ್ಯ ಅವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ ಅವರ ನಿವಾಸಕ್ಕೆ ಕೆಲವು ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿ ನೀಡಿ ಸಚಿವರ ಸಮ್ಮುಖದಲ್ಲಿ ಪಕ್ಷಕ್ಕೆ ಮರು ಸೇರ್ಪಡೆಯಾದರು. ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ರಾಜಕೀಯ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾಂಗ್ರೆಸ್ ಉತ್ತಮವಾದ ಪಕ್ಷವಾಗಿದ್ದು, ಸಾಮಾಜಿಕ ಬದ್ಧತೆ ಯೊಂದಿಗೆ ನಿಷ್ಠೆಯಿಂದ ದುಡಿಯುವವರಿಗೆ ಎಲ್ಲಾ ವರ್ಗದವರಿಗೂ  ಅಧಿಕಾರ ಸಿಗಲಿದೆ. ಕಾಂಗ್ರೆಸ್ ಪಕ್ಷದಿಂದ ಪ್ರಥಮ ಬಾರಿಗೆ ಜಿ.ಪಂ ಸದಸ್ಯೆಯಾಗಿದ್ದ…

ಕಾರು ಡಿಕ್ಕಿ: ಪಾದಚಾರಿ ಸಾವು
ಮೈಸೂರು

ಕಾರು ಡಿಕ್ಕಿ: ಪಾದಚಾರಿ ಸಾವು

April 19, 2018

ಹುಣಸೂರು:  ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಪಟ್ಟಣದ ಯಶೋಧರಪುರ ಬಳಿಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಕುಂದಹಳ್ಳಿ ಗ್ರಾಮದ ಪುಷ್ಪರಾಜ್ (52) ಮೃತರು. ಕೆಲಸದ ನಿಮಿತ್ತ ವಿರಾಜ ಪೇಟೆಯಿಂದ ಹುಣಸೂರಿಗೆ ಮಂಗಳ ವಾರ ಮಧ್ಯರಾತ್ರಿ ಬಂದ ಪುಷ್ಪರಾಜ್ ಯಶೋಧರಪುರ ಟೀ ಅಂಗಡಿ ಬಳಿ ಬಸ್ ಇಳಿದು ಪಿರಿಯಾಪಟ್ಟಣದ ಕಡೆಗೆ ಹೋಗುವ ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಟೀ ಕುಡಿಯುವುದಕ್ಕಾಗಿ ರಸ್ತೆ ದಾಟುತ್ತಿದ್ದಾಗ ಪಿರಿಯಾಪಟ್ಟಣದ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆ…

ತ್ರಿಮತಸ್ಥರ ಸಂಘಟನೆಗಾಗಿ ಏ. 21 ರಂದು ‘ಮೈಸೂರು ವಿಪ್ರ ಸೈನ್ಯ’ಜಾಥಾ
ಮೈಸೂರು

ತ್ರಿಮತಸ್ಥರ ಸಂಘಟನೆಗಾಗಿ ಏ. 21 ರಂದು ‘ಮೈಸೂರು ವಿಪ್ರ ಸೈನ್ಯ’ಜಾಥಾ

April 19, 2018

ಮೈಸೂರು:  ತ್ರಿಮತಸ್ಥ ಬ್ರಾಹ್ಮಣರನ್ನೊಳಗೊಂಡ `ಮೈಸೂರು ವಿಪ್ರ ಸೈನ್ಯ’ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದ್ದು, ಏ.21ರಂದು ತ್ರಿಮತಸ್ಥರ ಸಂಘಟನೆಗಾಗಿ ಜಾಥಾ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದುವರೆದ ಜನಾಂಗವೆಂಬ ಹಣೆಪಟ್ಟಿ ಹೊಂದಿರುವ ಬ್ರಾಹ್ಮಣ ಸಮುದಾಯವನ್ನು ಸರ್ಕಾರ ಸೇರಿದಂತೆ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡಿವೆ. ಆದ್ದರಿಂದ ಒಗ್ಗಟ್ಟಾಗಿ ಸಮುದಾಯದ ಶಕ್ತಿ ಪ್ರದರ್ಶನ ಮಾಡಲಿ ದ್ದೇವೆ. ತ್ರಿಮತಸ್ಥ ಬ್ರಾಹ್ಮಣರು ಭಿನ್ನತೆ ಮರೆತು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದು ಕೊಳ್ಳಬೇಕು…

1 1,609 1,610 1,611
Translate »