ಮೈಸೂರು,ಏ.7(ಎಸ್ಪಿಎನ್)- ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ವ್ಯಾಪಿಸಿದೆ. ಆದರೆ, ಬೋಧನಾ ಕ್ಷೇತ್ರ ಭ್ರಷ್ಟಾಚಾರ ವ್ಯಾಪ್ತಿ ಯಿಂದ ದೂರವಿದೆ ಎಂದು ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್ಬಿ ರಸ್ತೆಯ ಜ್ಞಾನ ಬುತ್ತಿ ಸಂಸ್ಥೆಯಲ್ಲಿ ನಡೆದ ಯುಜಿಸಿ-ಎನ್ಇಟಿ ಮತ್ತು ಕೆ.ಸೆಟ್ ಪರೀಕ್ಷೆಯ ತರ ಬೇತಿ ಸಮಾರೋಪದಲ್ಲಿ ಅವರು ಮಾತ ನಾಡಿ, ಬೋಧನಾ ಕ್ಷೇತ್ರ ಇಂದಿಗೂ ಸಮಾಜ ಮುಖಿಯಾಗಿಯೇ ಉಳಿದಿದೆ ಎಂದರು. ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಮಾತನಾಡಿ, ನಾವು ಎಷ್ಟು ಸಮಯ ಓದುತ್ತೇವೆ…
ರಾಜ್ಯ ಸಾರಿಗೆ ಸಂಸ್ಥೆ ನೌಕರರ ಹೋರಾಟಕ್ಕೆ ಕೋಡಿಹಳ್ಳಿ ನೇತೃತ್ವ: ಕುರುಬೂರು ಆತಂಕ
April 8, 2021ಮೈಸೂರು, ಏ.7(ಎಸ್ಪಿಎನ್)- ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಹೋರಾಟ ಮುಂದಿನ ದಿನಗಳಲ್ಲಿ ಅವರಿಗೆ ಮಾರಕವಾಗುವ ಲಕ್ಷಣ ಗೋಚರಿಸುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಗನ್ಹೌಸ್ ಬಳಿಯ ವಿಶ್ವಮಾನವ ಕುವೆಂಪು ಪಾರ್ಕ್ ನಲ್ಲಿ ಬುಧವಾರ ಮೈಸೂರು ತಾಲೂಕು ರೈತ ಕಬ್ಬು ಬೆಳೆಗಾರರ ಸಭೆ ಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಈವರೆಗೂ ರೈತ ಹೋರಾಟಗಳಲ್ಲಿದ್ದವರು. ಈಗ ಕೆಎಸ್ಆರ್ಟಿಸಿ ನೌಕರರ ಪರವಾಗಿ ಹೋರಾಟ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರೈತರು,…
‘ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿ ಪ್ರದಾನ
April 8, 2021ಮೈಸೂರು, ಏ.7(ಎಸ್ಪಿಎನ್)- ಮಾಧ್ಯಮ ಕ್ಷೇತ್ರದ ಮೂವರು ಸಾಧಕ ರಿಗೆ ಈ ಸಾಲಿನ `ರೋಟರಿ ಸಿಲಿಕಾನ್ ಪತ್ರಿಕೋದ್ಯಮ’ ಪ್ರಶಸ್ತಿಯನ್ನು ವಿಜಯ ವಿಠ್ಹಲ ವಿದ್ಯಾಸಂಸ್ಥೆ ಗೌರವ ಕಾರ್ಯ ದರ್ಶಿ ರೋ. ಆರ್.ವಾಸುದೇವ ಭಟ್ ಮೈಸೂರಿನ ಜೆಎಲ್ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣ ದಲ್ಲಿ ಬುಧವಾರ ಪ್ರದಾನ ಮಾಡಿದರು. `ಸುಧರ್ಮ’ ಸಂಸ್ಕøತ ಪತ್ರಿಕೆ ಸಂಪಾದಕ, ಪದ್ಮಶ್ರೀ ಪುರಸ್ಕøತ ಕೆ.ವಿ.ಸಂಪತ್ಕುಮಾರ್ ಮತ್ತು ಕೆ.ಎಸ್.ಜಯಲಕ್ಷ್ಮಿ ದಂಪತಿ ಹಾಗೂ ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣ ಅವರಿಗೆ `ಸಿಲಿಕಾನ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ…
5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ ಮೈಸೂರು ವಿವಿ
April 8, 2021ಮೈಸೂರು, ಏ.7(ಆರ್ಕೆಬಿ/ಪಿಎಂ)- ಮೈಸೂರು ವಿಶ್ವವಿದ್ಯಾನಿಲಯ 2021-22ನೇ ಸಾಲಿಗೆ 5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದೆ. 310.29 ಕೋಟಿ ರೂ. ಆದಾಯ ಅಂದಾಜಿಸಿ ಹಾಗೂ 315.73 ಕೋಟಿ ರೂ. ವೆಚ್ಚಕ್ಕೆ ಬಜೆಟ್ ಸಿದ್ಧಪಡಿಸಿದ್ದು, ಇದರಲ್ಲಿ ಸದರಿ ಕೊರತೆ ಮೊತ್ತ ತೋರಿಸಲಾಗಿದೆ. ಮೈಸೂರಿನ ಮಾನಸಗಂಗೋತ್ರಿ ವಿವಿಯ ವಿಜ್ಞಾನ ಭವನದ ಸಭಾಂಗಣದಲ್ಲಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿಯ 3ನೇ ಸಾಮಾನ್ಯ ಸಭೆಯಲ್ಲಿ ಹಣಕಾಸು ಅಧಿಕಾರಿ ಡಾ.ಟಿ.ಎಸ್. ದೇವರಾಜ ಒಟ್ಟು 5.44 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದರು….
ಮೈಸೂರಲ್ಲಿ ಸೋಮವಾರ 165 ಮಂದಿಗೆ ಸೋಂಕು
April 6, 2021ಮೈಸೂರು, ಏ.5(ಎಸ್ಬಿಡಿ)- ಎಲ್ಲೆಡೆ ಕೊರೊನಾ 2ನೇ ಅಲೆ ಅಬ್ಬರಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ಸೋಮವಾರ 165 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಮತ್ತೆ ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 56,689 ಜನರಿಗೆ ಕೊರೊನಾ ಬಾಧಿಸಿ ದಂತಾಗಿದೆ. ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದ 33 ವರ್ಷದ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 63 ಹಾಗೂ 69 ವರ್ಷದ ವ್ಯಕ್ತಿಗಳಿಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಈ…
ಮೈಸೂರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ಕ್ರೌರ್ಯ
April 6, 2021ಮೈಸೂರು, ಏ.5(ಎಸ್ಬಿಡಿ)- ಸಾರ್ವ ಜನಿಕರ ನಿರ್ಲಕ್ಷ್ಯದಿಂದ ಮೈಸೂರಲ್ಲಿ ಕೊರೊನಾ ಸೋಂಕು ತೀವ್ರವಾಗಿ ಆವರಿಸುವ ಭೀತಿ ಎದುರಾಗಿದೆ. ದೇಶದೆಲ್ಲೆಡೆ ಕೊರೊನಾದ 2ನೇ ಅಲೆ ಎದ್ದಿದೆ. ಮೈಸೂರು ಜಿಲ್ಲೆಯಲ್ಲೂ ಏಳೆಂಟು ದಿನಗಳಿಂದ ನಿರಂತರವಾಗಿ ನೂರಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಮತ್ತೆ ಸಾವಿನ ಸರಣಿಯೂ ಆರಂಭವಾಗಿದೆ. ಅದರಲ್ಲೂ ಯುವ ಸಮುದಾಯದಲ್ಲಿ ಸೋಂಕು ಹೆಚ್ಚು ಹರಡುತ್ತಿರುವ ಬಗ್ಗೆ ಜಿಲ್ಲಾಧಿ ಕಾರಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಗಳನ್ನು ಮರೆತು, ನಿರ್ಲಕ್ಷ್ಯ ತೋರುತ್ತಿರು ವುದು ಆತಂಕಕಾರಿ ಸಂಗತಿಯಾಗಿದೆ. ನೆಪಕ್ಕಷ್ಟೇ ಮಾಸ್ಕ್: ಮೂಗು-ಬಾಯಿ…
ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧದ ಬೆನ್ನ ಹಿಂದೆಯೇ ರಾಜಮಾರ್ಗದಲ್ಲಿ ಹೇಸಿಗೆ ಮೆರೆದವರು!
April 6, 2021ಮೈಸೂರು,ಏ.5-ಮೈಸೂರಿನ ರಾಜಮಾರ್ಗ ಸಯ್ಯಾಜಿ ರಾವ್ ರಸ್ತೆಯಲ್ಲಿ ಸೋಮವಾರ ಕಂಡು ಬಂದ ಪ್ಲಾಸ್ಟಿಕ್ ರಾಶಿ, ಜಿಲ್ಲಾಡಳಿತದ ಆದೇಶವನ್ನು ಅಣಕ ಮಾಡುವಂತಿತ್ತು. ಸ್ವಚ್ಛತೆ, ಪರಿಸರ ಸಂರಕ್ಷಣೆಯ ಸದುದ್ದೇಶದಿಂದ ಜಿಲ್ಲೆಯಾ ದ್ಯಂತ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿ, ಜಿಲ್ಲಾಡಳಿತ ಆದೇಶಿಸಿದೆ. ಮಹತ್ವದ ಈ ನಿಯಮ ಜಾರಿಯಾಗಿರುವ ದಿನವೇ ಮೈಸೂರು ನಗರದ ಪ್ರಮುಖ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ರಾಶಿ ಕಾಣಿಸಿದ್ದು ಮಾತ್ರ ವಿಪರ್ಯಾಸ. ಇಲ್ಲಿನ ಬೀದಿಬದಿ ವ್ಯಾಪಾರಿಗಳು, ಮಳಿಗೆದಾರರು ಕವರ್ ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ರಸ್ತೆ ಬದಿಗೆ ಸುರಿದಿ…
ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್, ಕವರ್ ನಿಷೇಧ
April 6, 2021ಮೈಸೂರು,ಏ.5(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂರನ್ನು ಮತ್ತಷ್ಟು ಸುಂದರಗೊಳಿಸುವುದರೊಂದಿಗೆ ಪರಿಸರ ಮಾಲಿನ್ಯ ತಡೆ ಗಟ್ಟುವ ನಿಟ್ಟಿನಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆ ನಿಷೇ ಧಿಸಲಾಗಿದ್ದು, ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಸೇರಿ ದಂತೆ ಪರಿಸರಕ್ಕೆ ಮಾರಕ ವಾದ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈಸೂರು ನಗರ ಪಾಲಿಕೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯಾದ್ಯಂತ ಏ.5ರಿಂದ ಪ್ಲಾಸ್ಟಿಕ್ ಬ್ಯಾಗ್, ಕವರ್ ಬಳಕೆ ನಿಷೇಧಿಸಿ, ಜಿಲ್ಲಾಡಳಿತ ಆದೇಶ…
ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕ್ ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ
April 6, 2021ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್ಗೌಡ ಕರೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ ಮೈಸೂರು,ಏ.5(ಪಿಎಂ)- ಮಹಿಳಾ ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ಪಡೆದ ಸಾಲಸೌಲಭ್ಯವನ್ನು ಸದ್ಬಳಕೆ ಮಾಡಿ ಕೊಳ್ಳಬೇಕೆಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ರಾಜ್ಯ ಅಪೆಕ್ಸ್ ಬ್ಯಾಂಕ್ನ ಉಪಾಧ್ಯಕ್ಷ ಜಿ.ಡಿ.ಹರೀಶ್ಗೌಡ ಕರೆ ನೀಡಿ ದರು. ಮೈಸೂರಿನ ನೆಹರು ವೃತ್ತದಲ್ಲಿರುವ ಎಂಸಿಡಿಸಿಸಿ ಬ್ಯಾಂಕ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್ನ ಜನತಾನಗರ ಶಾಖೆ ವತಿಯಿಂದ ಕಾಯಕ ಯೋಜನೆಯಡಿ ಮಹಿಳಾ ಸ್ವಸಹಾಯ…
ಮೈಸೂರಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ: ಡಿಸಿ ರೋಹಿಣಿ ಸಿಂಧೂರಿ
April 6, 2021ಮೈಸೂರು, ಏ.5- ಮೈಸೂರು ಜಿಲ್ಲೆ ಹಾಗೂ ನಗರದಲ್ಲಿ ಕೋವಿಡ್-19 2ನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನ್ ಸಂಸ್ಥೆಯ ಖಾಸಗಿ ಆಸ್ಪತ್ರೆಯ ವತಿಯಿಂದ ಮೈಸೂರು ನಗರದಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡಬೇಕೆಂಬ ಗುರಿ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು. ಮೈಸೂರಿನ ಹೆಬ್ಬಾಳ್ನÀಲ್ಲಿರುವ ಆಶಾಕಿರಣ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ನಗರದ 65 ವಾರ್ಡ್ಗಳಲ್ಲಿ ಮಹಾನ್ ಗ್ರೂಪ್ ಖಾಸಗಿ ಆಸ್ಪತ್ರೆಯವರು ನಮ್ಮ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ…