ಮಕ್ಕಳನ್ನು `ರಿಸೀವರ್’ ಆಗಿ ಬೆಳೆಸಿ
ಮೈಸೂರು

ಮಕ್ಕಳನ್ನು `ರಿಸೀವರ್’ ಆಗಿ ಬೆಳೆಸಿ

May 22, 2023

ಮೈಸೂರು ಮೇ 21(ಸಿಎನ್)- ಪೋಷ ಕರು, ಮಕ್ಕಳು ಬೇಸಿಗೆ ರಜಾದಿನಗಳನ್ನು ಅತ್ಯಂತ ಕೌಶಲ್ಯಯುತ ಚಟುವಟಿಕೆ ಮೂಲಕ ಅರ್ಥಪೂರ್ಣವಾಗಿ ಕಳೆಯಲು ಪ್ರೋತ್ಸಾಹಿಸಬೇಕು. ಯೋಗ ಭಂಗಿಗಳ ಮುಖೇನ ಮಕ್ಕಳ ಬುದ್ದಿಶಕ್ತಿ, ವ್ಯಕ್ತಿ ವಿಕಸನ, ಚುರುಕುತನ ಬೆಳೆಸಿ ಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ ಯೋಗ ಶಿಬಿರಗಳಲ್ಲಿ ಮಕ್ಕಳನ್ನು ತೊಡಗಿ ಸಬೇಕು ಎಂದು ಆಕಾಶವಾಣಿ ನಿರ್ದೇಶಕ ಎಂ.ಉಮೇಶ್ ಸಲಹೆ ನೀಡಿದರು.

ರಾಮಕೃಷ್ಣನಗರದ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಅಂತರ್‍ದೃಷ್ಟಿ ಬ್ರೈನ್ ಅಕಾಡೆಮಿಯಿಂದ ಭಾನುವಾರ ಆಯೋಜಿಸಲಾಗಿದ್ದ 12ನೇ ತಂಡದ ಅಂತರ್‍ದೃಷ್ಟಿ ಮೆದುಳು ಜಾಗೃತಿ ಯೋಗಿಕ್ ಶಿಬಿರದ ಸಮಾರೋಪ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಬುದ್ದಿಶಾಲಿಗಳಾಗಿದ್ದರೆ ಪೋಷ ಕರಿಗೆ ತುಂಬಾ ಸಂತೋಷವಾಗುತ್ತದೆ. ಮಕ್ಕಳ ನಗು ಹಾಗೂ ಕಲಿಕೆಯನ್ನು ನಿರಂತರವಾಗಿ ಕಾಪಾಡಿಕೊಂಡು ಬರುವ ಜವಾಬ್ದಾರಿ ಪೋಷಕರ ಮೇಲಿದೆ. ತಮ್ಮ ಮಕ್ಕಳನ್ನು ಒಂದು ರಿಸೀವರ್ ರೀತಿ ಬೆಳೆಸಬೇಕು. ಯಾವುದೇ ವಿಷಯವಿದ್ದರೂ ಚುರುಕಾಗಿ ಗ್ರಹಿಸುವ ಶಕ್ತಿ ಹೊಂದುವಂತೆ ಅವರಿಗೆ ತರಬೇತಿ ನೀಡಬೇಕು. ಅಂತಹ ಕೌಶಲ್ಯಯುತ ಚಟುವಟಿಗಳು ಯೋಗದಲ್ಲಿ ಅಡಕವಾಗಿವೆ.

ಬೇಸಿಗೆ ಶಿಬಿರಗಳಲ್ಲಿ ಒಂದಿಷ್ಟು ಆಟ-ಪಾಠ, ನಾಟಕಗಳನ್ನು ಮಾತ್ರ ಕಲಿಸುತ್ತಾರೆ. ಆದರೆ ಯೋಗ ಶಿಬಿರಗಳಲ್ಲಿ ್ಲ ಮಕ್ಕಳಿಗೆ ಸಾಕಷ್ಟು ಉಪಯೋಗವಿದೆ. ಮಕ್ಕಳ ಏಕಾಗ್ರತೆ, ನೆನಪಿನ ಶಕ್ತಿ, ಎಡ ಮತ್ತು ಬಲ ಮೆದುಳಿನ ಸಮತೋಲನ, ಬ್ರೈನ್ ಜಿಮ್, ಯೋಗ ಮತ್ತು ಪ್ರಣಾಯಾಮ, ಪಿರಮಿಡ್ ಧ್ಯಾನದಂತಹ ಕ್ರಿಯಾತ್ಮಕ ಯೋಗ ಕಲಿಸಲಿದ್ದಾರೆ. ಹಾಗಾಗಿ ಮಕ್ಕಳನ್ನು ಯೋಗ ಶಿಬಿರಗಳಿಗೆ ಸೇರಿಸುವ ಮೂಲಕ ನಿಮ್ಮ ಮಕ್ಕಳ ಬುದ್ದಿ ಬೆಳವಣಿಗೆ ನಿಮ್ಮ ಗಮನಕ್ಕೆ ಬರುತ್ತದೆ ಎಂದರು.

ಈ ವೇಳೆ ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಶಿವಪ್ರಕಾಶ್ ಗುರೂಜಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ಬಿ.ಶ್ರೀಕಂಠಸ್ವಾಮಿ, ಆಕಾಶವಾಣಿ ನಿರ್ದೇಶಕ ಎಂ.ಉಮೇಶ್, ಲರ್ನರ್ಸ್ ಗ್ಲೋಬಲ್ ಸ್ಕೂಲ್ ಮತ್ತು ಪಿಯು ಕಾಲೇಜು ಸಂಸ್ಥಾಪಕ ಮುರುಳಿ ಮೋಹನ್, ಶಿಬಿರದ ವ್ಯವಸ್ಥಾಪಕಿ ಮಿಥಿಲ ಮಂಜುನಾಥ್ ಮತ್ತಿತರರಿದ್ದರು.

ಗಾಂಧಾರಿ ವಿದ್ಯೆ ಪ್ರದರ್ಶನ:- ತಕ್ಷ ಚಾಣಕ್ಯ ರೇಬಾ(ಬಸವ ಪ್ರತಿಭೆ) ಎಂಬ 8ನೇ ತರಗತಿ ವಿದ್ಯಾರ್ಥಿ, ಏಕಾಗ್ರತೆ ಹಾಗೂ ಗ್ರಹಿಕಾ ಶಕ್ತಿಯಿಂದ ಬಣ್ಣಗಳು, ಪುಸ್ತಕದ ಪುಟಗಳು, ಸಂಖ್ಯೆಗಳು, ವ್ಯಕ್ತಿಯ ಚಹರೆ, ಧರಿಸಿರುವ ಬಟ್ಟೆ, ವಸ್ತು ಗಳನ್ನು ಕಣ್ಣಿಗೆ ಕಪ್ಪುಪಟ್ಟಿ ಧರಿಸಿಕೊಂಡೇ ತಡವರಿಸಿದೆ ಹೇಳಿದ ರೀತಿ ಎಲ್ಲರನ್ನು ದಿಗ್ಬ್ರಮೆಗೊಳಿಸಿತು. ಅದಲ್ಲದೇ ಈ ಬಾಲಕ 2022ನೇ ಸಾಲಿನ ಅಂತ ರಾಷ್ಟ್ರೀಯ ಬಸವ ಜಯಂತಿಯಲ್ಲಿ ಬಸವಣ್ಣನ ವಚನ ಹಾಗೂ ಅದರ ತಾತ್ಪರ್ಯ ತಿಳಿಸಿದ ಕಾರ್ಯಕ್ರಮ, ಒಂದೇ ಬಾರಿಗೆ 57 ದೇಶದಲ್ಲಿ ಪ್ರಸಾರವಾಗಿ ದಾಖಲೆ ನಿರ್ಮಿಸಿದ್ದ. ಈತನ ಪ್ರತಿಭೆಗೆ ರಾಜ್ಯಮಟ್ಟದ ಚಿಗುರು ರತ್ನ ಪ್ರಶಸ್ತಿ ಹಾಗೂ ಬಾಲಶ್ರೀ ಪ್ರಶಸ್ತಿ ಕೂಡ ಲಭಿಸಿದೆ.

 

Translate »