ಮೈಸೂರು ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ  ಕೃಷಿ ಚಟುವಟಿಕೆ ಬಿರುಸು, ಬಿತ್ತನೆ ಕಾರ್ಯಕ್ಕೆ ಚಾಲನೆ
ಮೈಸೂರು

ಮೈಸೂರು ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಕೃಷಿ ಚಟುವಟಿಕೆ ಬಿರುಸು, ಬಿತ್ತನೆ ಕಾರ್ಯಕ್ಕೆ ಚಾಲನೆ

May 24, 2023

ಮೈಸೂರು, ಮೇ 23(ಎಂಟಿವೈ)- ಮೈಸೂರು ತಾಲೂಕಿನಾದ್ಯಂತ ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.45ರಷ್ಟು ಮಳೆ ಹೆಚ್ಚಾಗಿದ್ದು, ಕೃಷಿ ಚಟುವಟಿಕೆ ಉತ್ತಮವಾಗಿ ಸಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಡಾ.ಹೆಚ್.ಬಿ.ಮಧುಲತಾ ತಿಳಿಸಿದ್ದಾರೆ.

ತಾಲೂಕಿನ ವರುಣ, ಕಸಬಾ, ಜಯ ಪುರ ಹಾಗೂ ಇಲವಾಲ ಹೋಬಳಿಯ ಕೆಲವು ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದರು.

ತಾಲೂಕಿನಾದ್ಯಂತ ಮೇ 23ರವರೆಗೆ ಸಾಕಷ್ಟು ಮಳೆಯಾಗಿದ್ದೂ, ರೈತರು ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ. ತಾಲೂಕಿನಾದ್ಯಂತ ಬಿತ್ತನೆ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ. ಏಪ್ರಿಲ್ ತಿಂಗ ಳಿನಲ್ಲಿ ವಾಡಿಕೆ ಮಳೆ 64 ಮಿಮೀ ಆಗಬೇ ಕಿತ್ತು. ಆದರೆ, 33.9 ಮಿ.ಮೀ ಮಾತ್ರ ಆಗಿತ್ತು. ಮೇ 23ರವರೆಗೆ ವಾಡಿಕೆ ಮಳೆ 89 ಮಿಮೀ ಆಗಬೇಕಾಗಿತ್ತು. ಆದರೆ, 156 ಮಿಮೀ ಆಗಿದೆ. ಈ ತಿಂಗಳಲ್ಲಿ ಶೇ. 120ರÀಷ್ಟು ಮಳೆಯಾಗಿದೆ. ಇದರಿಂದ ರೈತರು ಭೂಮಿ ಸಿದ್ಧತೆ ಮಾಡಿಕೊಂಡು ಬಿತ್ತನೆ ಕಾರ್ಯ ಗಳಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಮೈಸೂರು ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲೂ ಈ ಬಾರಿ 400 ಹೆಕ್ಟೇರ್ ನಲ್ಲಿ ಹೈಬ್ರೀಡ್ ಜೋಳ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಈಗಾಗಲೇ 250 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. 1050 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡುವ ಗುರಿ ಇತ್ತು. ಈಗಾಗಲೇ 412 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. 600 ಹೆಕ್ಟೇರ್‍ನಲ್ಲಿ ಈಗಾಗಲೇ 82 ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿದೆ. 700 ಹೆಕ್ಟೇರ್ ಪ್ರದೇಶದಲ್ಲಿ 733 ಹೆಕ್ಟೇರ್ ನಲ್ಲಿ ಉದ್ದು, 1045 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆ ಕಾರ್ಯ ಆಗಿದೆ. 7650 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಬಿತ್ತನೆ ಗುರಿ ಹೊಂದಲಾಗಿತ್ತು. ಈಗಾ ಗಲೇ 9695 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಯಾಗಿದೆ. 535 ಹೆಕ್ಟೇರ್‍ನಲ್ಲಿ ಅವರೆಕಾಳು ಬಿತ್ತನೆ ಗುರಿ ಇತ್ತು. ಈಗಾಗಲೇ 222 ಹೆಕ್ಟೇರ್ ಬಿತ್ತನೆ ಕಾರ್ಯ ಮುಗಿದಿದೆ. 210 ಹೆಕ್ಟೇರ್‍ನಲ್ಲಿ ಎಳ್ಳು ಬಿತ್ತನೆ ಕಾರ್ಯ ಮುಗಿ ದಿದೆ. ಹತ್ತಿ 1530 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದೂ, ಇಲ್ಲಿಯವರೆಗೆ 1147 ಹೆಕ್ಟೇರ್ ಹಾಗೂ ಹೊಸ ಕಬ್ಬು ಬಿತ್ತನೆ 1390 ಹೆಕ್ಟೇರ್ ಗುರಿ ಹೊಂದಿದ್ದೂ, ಈಗಾಗಲೇ 275 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಡಾ.ಹೆಚ್.ಬಿ.ಮಧುಲತಾ ವಿವರಿಸಿದರು.

ಬಿತ್ತನೆ ಬೀಜ ವಿತರಣೆ: ತಾಲೂಕಿನ ನಾಲ್ಕೂ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳ ಮೂಲಕ ಪ.ಜಾತಿ ಮತ್ತು ಪ.ಪಂ ವರ್ಗಗಳ ರೈತರಿಗೆ ಶೇ.75 ಹಾಗೂ ಇತರೆ ವರ್ಗಗಳ ರೈತರಿಗೆ ಶೇ.50 ಸಹಾಯಧನದಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳಾದ ಹೆಸರು, ಉದ್ದು, ಅಲ ಸಂದೆ, ಮುಸುಕಿನ ಜೋಳ ಮುಂತಾದ ಬಿತ್ತನೆ ಬೀಜಗಳನ್ನು ವಿತರಣೆ ಮಾಡುತ್ತಿದೆ. ಈ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಇದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ರಸಗೊಬ್ಬರ ದಾಸ್ತಾನು: ಮುಂಗಾರು ಹಂಗಾಮಿಗೆ ಮೈಸೂರು ತಾಲೂಕಿಗೆ ಅಗತ್ಯ ವಾದ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರು ಅಗತ್ಯಕ್ಕೆ ಅನುಗುಣವಾಗಿ ರಸ ಗೊಬ್ಬರ ಪಡೆಯಬಹುದಾಗಿದೆ. ಮಾಸಾಂತ್ಯ ದಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿಯೂ ಕೃಷಿ ಪರಿಕರ ಮಾರಾಟಗಾರರ ಸಭೆ ಏರ್ಪ ಡಿಸಲಾಗಿದೆ. ಆ ಸಭೆಯಲ್ಲಿ ರೈತರಿಗೆ ಅಗತ್ಯ ವಾದ ಪರಿಕರಗಳ ದಾಸ್ತಾನು ಹಾಗೂ ನ್ಯಾಯಯುತವಾದ ವಿತರಣಾ ಕ್ರಮಗಳ ಬಗ್ಗೆ ಚರ್ಚಿಸಿ, ರೈತಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಮಾರಾಟಗಾರರಿಗೆ ಸೂಚಿಸ ಲಾಗುವುದು. ರೈತರೂ ಸಹ ಈ ಸಭೆ ಯಲ್ಲಿ ಭಾಗವಹಿಸಿ, ತಮ್ಮ ಕುಂದು ಕೊರತೆ ಹೇಳಿಕೊಳ್ಳಬಹುದು ಎಂದರು.

Translate »