ಮೈಸೂರು

ಮೈಸೂರಲ್ಲಿ ನೇಮಕಾತಿ ಅಭಿಯಾನ
ಮೈಸೂರು

ಮೈಸೂರಲ್ಲಿ ನೇಮಕಾತಿ ಅಭಿಯಾನ

May 17, 2023

ಮೈಸೂರು, ಮೇ 16(ಆರ್‍ಕೆ)- ನೇಮಕಾತಿ ಅಭಿಯಾನದಡಿ ದೇಶಾದ್ಯಂತ 71,000 ಯುವಜನ ರಿಗೆ ಏಕಕಾಲದಲ್ಲಿ ಸರ್ಕಾರಿ ನೌಕರಿ ನೇಮ ಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು. ಕೇಂದ್ರ ಸರ್ಕಾರದ ಅಂಚೆ ಇಲಾಖೆ, ಭಾರತೀಯ ರೈಲ್ವೆ ಇಲಾಖೆ, ಗೃಹ ಇಲಾಖೆ, ಕಾರ್ಮಿಕ ಮತ್ತು ಸಬಲೀಕರಣ ಸೇರಿದಂತೆ ಹಲವು ಇಲಾಖೆಗಳಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳಿಗೆ ನಿಯಮಾನುಸಾರ ಪ್ರಕ್ರಿಯೆ ನಡೆಸಿ ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಲಾ ಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೇಮಕಾತಿ ಆದೇಶ ಪ್ರತಿಗಳನ್ನು ಸಾಂಕೇತಿಕವಾಗಿ ವಿತರಿಸಿದರು. ನೇಮಕಾತಿ…

ರಂಗಾಯಣ ನಿರ್ದೇಶಕರ ಸ್ಥಾನಕ್ಕೆ  ಅಡ್ಡಂಡ ಕಾರ್ಯಪ್ಪ ರಾಜೀನಾಮೆ
ಮೈಸೂರು

ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ

May 15, 2023

ಮೈಸೂರು, ಮೇ 14(ಎಂಕೆ)-ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನೆಲೆ ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಸಿ ಕಾರ್ಯಪ್ಪ ಭಾನು ವಾರ ರಾಜೀನಾಮೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿ ರುವ ಅವರು, ಸರ್ಕಾರ 2019ರ ಡಿ.27ರಂದು ನನ್ನನ್ನು ಮೈಸೂರಿನ ರಂಗಾಯಣ ನಿರ್ದೇ ಶಕನನ್ನಾಗಿ ನೇಮಿಸಿತ್ತು. ಅದರಂತೆ 2019ರ ಡಿ.30ರಂದು ಅಧಿಕಾರ ಸ್ವೀಕರಿಸಿ ಅಂದಿನಿಂದ ಇಂದಿನವರೆಗೆ ಕಾಯಾ, ವಾಚಾ, ಮನಸಾ ನನ್ನ ಕರ್ತವ್ಯವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ…

ನಾನು ಬುಕ್ ಆಗಿಲ್ಲ, ಮೂಲ  ಕಾಂಗ್ರೆಸ್‍ನ ಕೆಲವರ ಅಪಪ್ರಚಾರವಷ್ಟೇ; ಉಪ್ಪು ಮುಟ್ಟಿ ಪ್ರಮಾಣ
ಮೈಸೂರು

ನಾನು ಬುಕ್ ಆಗಿಲ್ಲ, ಮೂಲ ಕಾಂಗ್ರೆಸ್‍ನ ಕೆಲವರ ಅಪಪ್ರಚಾರವಷ್ಟೇ; ಉಪ್ಪು ಮುಟ್ಟಿ ಪ್ರಮಾಣ

May 12, 2023

ಮೈಸೂರು,ಮೇ 11(ಪಿಎಂ)-ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಟಸ್ಥವಾಗಿದ್ದರು ಎಂದು ಮೂಲ ಕಾಂಗ್ರೆಸ್‍ನ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ನಾನು ಆ ರೀತಿಯಲ್ಲಿ ಬುಕ್ ಆಗಿಲ್ಲ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಉಪ್ಪು ಮುಟ್ಟಿ ಪ್ರಮಾಣ ಮಾಡಿದರು. ಮೈಸೂರಿನ ರಾಮಕೃಷ್ಣನಗರದಲ್ಲಿ ರುವ ತಮ್ಮ ನಿವಾಸದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಣ್ಣ ತಮ್ಮಂದಿರು ನಾಲ್ಕು ಮಂದಿಯೂ ಜಿ.ಟಿ.ದೇವೇಗೌಡರ ಬಳಿ ಬುಕ್ ಆಗಿದ್ದೇವೆ ಎಂದು…

ಬುಕ್ ಮಾಡಿಕೊಳ್ಳುವ  ಜಾಯಮಾನ ನನ್ನದಲ್ಲ
ಮೈಸೂರು

ಬುಕ್ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ

May 12, 2023

ಮೈಸೂರು, ಮೇ 11(ಪಿಎಂ)-ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಬುಕ್ ಮಾಡಿಕೊಂಡಿ ದ್ದಾರೆ ಎಂಬ ತಮ್ಮ ಮೇಲಿನ ಆರೋಪವನ್ನು ಖಡಾಖಂಡಿತವಾಗಿ ನಿರಾಕರಿಸಿದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೂ ಆದ ಶಾಸಕ ಜಿ.ಟಿ.ದೇವೇಗೌಡ, ಬುಕ್ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಮೈಸೂರಿನ ವಿವಿ ಮೊಹಲ್ಲಾದ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಎಪಿಎಂಸಿ ಅಧ್ಯಕ್ಷ ಸ್ಥಾನ, ಡೈರಿ ಅಧ್ಯಕ್ಷ ಸ್ಥಾನ, ಎರಡು ಗೂಟದ ಕಾರು ಎಲ್ಲಾ ಅನುಭವಿಸಿ, ಮೋಸ ಮಾಡಿದರು. ಮೋಸಗಾರರಿಗೆ ಟಿಕೆಟ್…

ಇವಿಎಂಗಳಿರುವ ಸ್ಟ್ರಾಂಗ್ ರೂಂಗಳಿಗೆ ಭಾರೀ ಭದ್ರತೆ
ಮೈಸೂರು

ಇವಿಎಂಗಳಿರುವ ಸ್ಟ್ರಾಂಗ್ ರೂಂಗಳಿಗೆ ಭಾರೀ ಭದ್ರತೆ

May 12, 2023

ಮೈಸೂರು, ಮೇ 11(ಆರ್‍ಕೆ)-ಇವಿಎಂಗಳನ್ನಿರಿ ಸಿರುವ ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣಿ ಮಹಿಳಾ ಸರ್ಕಾರಿ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜು ಸ್ಟ್ರಾಂಗ್ ರೂಂಗೆ 3 ಹಂತದ ಭಾರೀ ಪೊಲೀಸ್ ಭದ್ರತೆ ಮಾಡಲಾಗಿದೆ. ನಿನ್ನೆಯಷ್ಟೇ ಮತದಾನ ಮುಕ್ತಾಯಗೊಂಡಿದ್ದು, ರಾತ್ರಿಯೇ ಮೈಸೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳನ್ನು ಮೈಸೂರಿನ ಮಹಾರಾಣಿ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಕಾಲೇಜು ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಲಾಗಿದೆ. ಸ್ಟ್ರಾಂಗ್ ರೂಂಗಳಿಗೆ ಪ್ರವೇಶ ದ್ವಾರದಲ್ಲಿ ಶಸ್ತ್ರ ಸಜ್ಜಿತ ಸಿಐಎಸ್‍ಎಫ್ ತುಕಡಿ, ಎರಡನೇ ಹಂತದಲ್ಲಿ…

ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಸಾರ್ವಜನಿಕರಿಗೆ ಮುಕ್ತ
ಮೈಸೂರು

ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ ಸಾರ್ವಜನಿಕರಿಗೆ ಮುಕ್ತ

May 12, 2023

ಮೈಸೂರು, ಮೇ 11(ಆರ್‍ಕೆ)-ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ ಆರ್‍ಎಲ್)ದಲ್ಲಿ ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ (ನ್ಯಾಷನಲ್ ಟೆಕ್ನಾಲಜಿ ಡೇ) ಅಂಗವಾಗಿ ಇಂದು ಡಿಎಫ್‍ಆರ್‍ಎಲ್ ಆವರಣದಲ್ಲಿ ಮುಕ್ತ ದಿನ (ಔಠಿeಟಿ ಆಚಿಥಿ) ವನ್ನಾಗಿ ಆಚರಿಸಲಾಯಿತು. ನೂರಾರು ಮಂದಿ ವಿದ್ಯಾರ್ಥಿ ಗಳು ಆಗಮಿಸಿ ರಕ್ಷಣಾ ಆಹಾರ ಪದಾರ್ಥಗಳನ್ನು ವೀಕ್ಷಿಸಿದರು. ಸಸ್ಯಾಹಾರ ಮತ್ತು ಶಾಖಾಹಾರಿ ಪದಾರ್ಥಗಳನ್ನು ಇಸ್ರೋದ ಬೇಡಿಕೆಗನುಗುಣವಾಗಿ ಸ್ಪೇಸ್ ಮಿಷನ್‍ಗೆ ಪೂರೈಸುತ್ತಿದ್ದು, ಅದಕ್ಕಾಗಿ ಸಿದ್ಧಪಡಿಸಿರುವ ಆಹಾರ ಪದಾರ್ಥಗಳ ವಸ್ತು ಪ್ರದರ್ಶನವನ್ನು…

ನಾಳೆ ಮೈಸೂರು ಮಹಾರಾಣಿ ವಾಣಿಜ್ಯ, ಮ್ಯಾನೇಜ್‍ಮೆಂಟ್ ಕಾಲೇಜಲ್ಲಿ ಮತ ಎಣಿಕೆ: ವಾಹನ ಸಂಚಾರ ನಿರ್ಬಂಧ
ಮೈಸೂರು

ನಾಳೆ ಮೈಸೂರು ಮಹಾರಾಣಿ ವಾಣಿಜ್ಯ, ಮ್ಯಾನೇಜ್‍ಮೆಂಟ್ ಕಾಲೇಜಲ್ಲಿ ಮತ ಎಣಿಕೆ: ವಾಹನ ಸಂಚಾರ ನಿರ್ಬಂಧ

May 12, 2023

ಮೈಸೂರು, ಮೇ 11(ಎಸ್‍ಬಿಡಿ)- ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾದ ವಾಲ್ಮೀಕಿ ರಸ್ತೆಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸುತ್ತ ಮುತ್ತಲ ರಸ್ತೆಗಳಲ್ಲಿ ಮೇ 13ರ ಬೆಳಗ್ಗೆ 5ರಿಂದ ಸಂಜೆ 5ರವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿದಂತೆ ಎಲ್ಲಾ ಮಾದರಿ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸುವುದರ ಜೊತೆಗೆ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ, ಪೊಲೀಸರು, ಅಭ್ಯರ್ಥಿಗಳು, ಏಜೆಂಟರು, ಮಾಧ್ಯಮದವರ ವಾಹನ ನಿಲುಗಡೆಗೆ…

ಮೈಸೂರು ಜಿಲ್ಲೆಯಲ್ಲಿ ಶೇ.75.07 ಮತದಾನ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.75.07 ಮತದಾನ

May 11, 2023

ಮೈಸೂರು, ಮೇ 10(ಆರ್‍ಕೆ)-ಇಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶೇ.75.07ರಷ್ಟು ಶಾಂತಿಯುತ ಮತದಾನ ನಡೆದಿದೆ. ಭಾರತ ಚುನಾವಣಾ ಆಯೋಗದ ನಿರ್ದೇ ಶನದಂತೆ ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರ ಗಳ 2,905 ಮತಗಟ್ಟೆಗಳಲ್ಲೂ ಬೆಳಗ್ಗೆ 7 ಗಂಟೆಗೆ ಮತದಾನ ಕಾರ್ಯ ಆರಂಭವಾಯಿತಾದರೂ, ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟ ಕಾರಣ ಕೆಲವು ಮತಗಟ್ಟೆಗಳಲ್ಲಿ ಅರ್ಧ ಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಮೈಸೂರು ಜಿಲ್ಲೆಯಲ್ಲಿ 230 ಇತರರು, 13,38,637 ಮಹಿಳೆಯರು ಹಾಗೂ 13,17,121 ಪುರುಷ ಮತದಾರರಿದ್ದು,…

ವೊಟರ್ ಐಡಿ ಕಾರ್ಡ್ ಮರೆತು  ಬಂದ ಪ್ರಮೋದಾದೇವಿ ಒಡೆಯರ್
ಮೈಸೂರು

ವೊಟರ್ ಐಡಿ ಕಾರ್ಡ್ ಮರೆತು ಬಂದ ಪ್ರಮೋದಾದೇವಿ ಒಡೆಯರ್

May 11, 2023

ಮೈಸೂರು,ಮೇ 10(ಎಂಟಿವೈ)- ಮತದಾರರ ಗುರು ತಿನ ಚೀಟಿ ಮರೆತು ಬಂದಿದ್ದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಮತ ಚಲಾಯಿಸಲು ಮತಗಟ್ಟೆ ಬಳಿ ಅರ್ಧ ಗಂಟೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಅರಮನೆ ಸಿಬ್ಬಂದಿ ಮತದಾರರ ಗುರುತಿನ ಚೀಟಿ ತಂದ ಬಳಿಕ ಪ್ರಮೋದಾದೇವಿ ಮತ ಚಲಾಯಿಸಿದರು. ಕೆ.ಆರ್.ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಅಗ್ರ ಹಾರದ ಶ್ರೀಕಾಂತ ಪ್ರೌಢಶಾಲೆಯಲ್ಲಿ ಸ್ಥಾಪಿಸಿದ್ದ ಮತ ಗಟ್ಟೆ ಸಂಖ್ಯೆ 179ರಲ್ಲಿ ಮತದಾನ ಮಾಡಲು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬೆಳಗ್ಗೆ ಆಗಮಿಸಿ ದರು. ಅರಮನೆಯಿಂದ…

ಮೈಸೂರು ಜಿಲ್ಲೆಗೆ 16ನೇ ಸ್ಥಾನ
ಮೈಸೂರು

ಮೈಸೂರು ಜಿಲ್ಲೆಗೆ 16ನೇ ಸ್ಥಾನ

May 9, 2023

ಮೈಸೂರು, ಮೇ 8(ಎಂಟಿವೈ)- ಎಸ್‍ಎಸ್ ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ 16ನೇ ಸ್ಥಾನ ಪಡೆದುಕೊಂಡಿದೆ. ಶೇ.89.75ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಅನಘ 623 ಅಂಕ ಹಾಗೂ ಮೂವರು ವಿದ್ಯಾರ್ಥಿಗಳು 621 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಘ ಎಸ್ ಕಾರ್ನಿಸ್ 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಟಾಪರ್ ಎನಿಸಿದ್ದರೆ, ಯರಗನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಸ್.ಅಜಯ್ 621, ಸದ್ವಿದ್ಯಾ ಶಾಲೆಯ ಎಂ.ಆರ್.ಅರ್ಜುನ್ 621,…

1 2 3 4 5 1,611
Translate »