ವೊಟರ್ ಐಡಿ ಕಾರ್ಡ್ ಮರೆತು  ಬಂದ ಪ್ರಮೋದಾದೇವಿ ಒಡೆಯರ್
ಮೈಸೂರು

ವೊಟರ್ ಐಡಿ ಕಾರ್ಡ್ ಮರೆತು ಬಂದ ಪ್ರಮೋದಾದೇವಿ ಒಡೆಯರ್

May 11, 2023

ಮೈಸೂರು,ಮೇ 10(ಎಂಟಿವೈ)- ಮತದಾರರ ಗುರು ತಿನ ಚೀಟಿ ಮರೆತು ಬಂದಿದ್ದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಮತ ಚಲಾಯಿಸಲು ಮತಗಟ್ಟೆ ಬಳಿ ಅರ್ಧ ಗಂಟೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಅರಮನೆ ಸಿಬ್ಬಂದಿ ಮತದಾರರ ಗುರುತಿನ ಚೀಟಿ ತಂದ ಬಳಿಕ ಪ್ರಮೋದಾದೇವಿ ಮತ ಚಲಾಯಿಸಿದರು.

ಕೆ.ಆರ್.ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಅಗ್ರ ಹಾರದ ಶ್ರೀಕಾಂತ ಪ್ರೌಢಶಾಲೆಯಲ್ಲಿ ಸ್ಥಾಪಿಸಿದ್ದ ಮತ ಗಟ್ಟೆ ಸಂಖ್ಯೆ 179ರಲ್ಲಿ ಮತದಾನ ಮಾಡಲು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬೆಳಗ್ಗೆ ಆಗಮಿಸಿ ದರು. ಅರಮನೆಯಿಂದ ಹೊರಡುವ ವೇಳೆ ಅಧಿಕಾರಿ ಗಳು ನೀಡಿದ್ದ ಮತದಾರರ ಕ್ರಮ ಸಂಖ್ಯೆ ಹಾಗೂ ಮಾಹಿತಿಯುಳ್ಳ ಚೀಟಿಯನ್ನಷ್ಟೇ ತಂದಿದ್ದರು. ಮತಗಟ್ಟೆಗೆ ಆಗಮಿಸಿದ ಪ್ರಮೋದಾದೇವಿ ಒಡೆಯರ್ ಅವರು ಸರದಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಅಧಿಕಾರಿಗಳು ನೀಡಿದ್ದ ಸ್ಲಿಪ್‍ನೊಂದಿಗೆ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ತೋರಿಸುವಂತೆ ಮತಗಟ್ಟೆ ಸಿಬ್ಬಂದಿ ಕೇಳಿದರು. ಗುರುತಿನ ಚೀಟಿ ಮರೆತಿರುವುದಾಗಿ ಮನವರಿಕೆ ಮಾಡಿಕೊಂಡ ಪ್ರಮೋದಾದೇವಿ ಒಡೆಯರ್ ಅವರು, ಸಹಾಯಕರನ್ನು ಅರಮನೆಗೆ ಕಳುಹಿಸಿದರು. ಬಳಿಕ ಮತಗಟ್ಟೆ ಆವರಣದಲ್ಲಿ ಕಾರಿ ನಲ್ಲೇ ಅರ್ಧ ಗಂಟೆಗಳ ಕಾಲ ಕುಳಿತಿದ್ದರು.

ಕಾರಿನಲ್ಲಿ ಒಬ್ಬರೇ ಕುಳಿತಿದ್ದ ಪ್ರಮೋದಾದೇವಿ ಒಡೆ ಯರ್ ಅವರನ್ನು ಕಂಡ ಶಾಲೆಯ ಕೆಲ ವಿದ್ಯಾರ್ಥಿ ನಿಯರು ಕುತೂಹಲದಿಂದ ಮಾತನಾಡಿಸಲು ಬಂದರು. ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಪ್ರಮೋದಾ ದೇವಿ ಒಡೆಯರ್ ವಿದ್ಯಾರ್ಥಿಗಳೊಂದಿಗೆ ಕುಶ ಲೋಪರಿ ವಿಚಾರಿಸಿ, ಶಾಲೆಯ ಬಗ್ಗೆ ಮಾಹಿತಿ ಪಡೆದರು. ನಿಮ್ಮೊಂದಿಗೆ ಮಾತನಾಡಿದ್ದು ನಮಗೆ ಖುಷಿ ತಂದಿದೆ ಎಂದು ವಿದ್ಯಾರ್ಥಿಗಳು ರಾಜವಂಶಸ್ಥರಿಗೆ ಹೇಳುವ ಮೂಲಕ ಸಂಭ್ರಮಿಸಿದರು.
ಕಡ್ಡಾಯವಾಗಿ ಮತದಾನ ಮಾಡಿ: ಸಹಾಯಕರು ಓಟರ್ ಐಡಿ ಕಾರ್ಡ್ ತಂದು ಕೊಟ್ಟ ಬಳಿಕ ಪ್ರಮೋದಾ ದೇವಿ ಒಡೆಯರ್ ಮತ ಚಲಾಯಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂವಿಧಾನ ದಲ್ಲಿ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡ ಲಾಗಿದೆ. ಆ ಅವಕಾಶವನ್ನು ಬಳಸಿಕೊಳ್ಳಬೇಕು. ಮತ ದಾನ ಮಾಡುವುದು ನಮ್ಮ ಕರ್ತವ್ಯವೂ ಆಗಿದೆ. ಜನ ಯಾವ ಪಕ್ಷ ಅಥವಾ ಯಾವ ಅಭ್ಯರ್ಥಿಗಾದರೂ ಮತ ಹಾಕಲಿ. ಆದರೆ ಮತದಾನದಿಂದ ದೂರ ಉಳಿಯ ಬಾರದು. ಮತ ಚಲಾಯಿಸದೇ ನಮ್ಮ ಹಕ್ಕು ಪ್ರತಿಪಾದಿ ಸಲು ಸಾಧ್ಯವಾಗುವುದಿಲ್ಲ. ಹೀಗಾಗಿ 5 ವರ್ಷಕ್ಕೊಮ್ಮೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳೇ ನೀಡಿದ್ದ ಸ್ಲಿಪ್: ಇದುವರೆಗೂ ಚುನಾ ವಣೆ ವೇಳೆ ರಾಜಕೀಯ ಪಕ್ಷಗಳ ಮುಖಂಡರು ಮತ ದಾನ ಸ್ಲಿಪ್ ನೀಡುತ್ತಿದ್ದರು. ಆದರೆ, ಈ ಬಾರಿ ಅಧಿಕಾರಿ ಗಳೇ ಮತದಾನದ ಸ್ಲಿಪ್ ನೀಡಿದ್ದರು. ಆ ಸ್ಲಿಪ್‍ನಲ್ಲಿ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ, ಹೆಸರು ಸೇರಿದಂತೆ ಎಲ್ಲಾ ಮಾಹಿತಿ ನಮೂದಾಗಿತ್ತು. ಇದರಿಂದ ಸ್ಲಿಪ್ ಒಂದೆ ಸಾಕೆಂದು ಭಾವಿಸಿದ್ದೆ. ಆದರೆ ಮತಗಟ್ಟೆಯಲ್ಲಿ ಗುರುತಿನ ಚೀಟಿ ಬೇಕೆಂದು ಕೇಳಿದರು. ಆದ್ದರಿಂದ ಮನೆಯಿಂದ ಗುರುತಿನ ಚೀಟಿ ತಂದು ಮತದಾನ ಮಾಡು ವುದಕ್ಕೆ ತಡವಾಯಿತು. ಸಾಫ್ಟ್‍ಕಾಪಿ ತೋರಿಸಬಹುದಾ ಗಿತ್ತು. ಆದರೆ ಮೊಬೈಲ್ ತೆಗೆದುಕೊಂಡು ಹೋಗ ಬಾರದೇನೋ ಎಂದು ಭಾವಿಸಿದ್ದೆ. ಹಾಗಾಗಿ ತಡ ವಾಯಿತು ಎಂದು ಸ್ಪಷ್ಟನೆ ನೀಡಿದರು.

ಯುವಜನ ನಿರಾಸಕ್ತಿ ತೋರಬಾರದು. ನಮ್ಮ ಧ್ವನಿ ಹೇಳಬೇಕು. ನಾವು ಏನನ್ನೂ ಹೇಳದೇ ಏನೂ ಕೇಳು ವುದಕ್ಕೆ ಸಾಧ್ಯವಾಗುವುದಿಲ್ಲ. ಇಂದಿನ ಯುವ ಪೀಳಿಗೆ ಬದಲಾಗಿದೆ. ನಮ್ಮ ಪೀಳಿಗೆಗಿಂತ ಇಂದಿನ ಪೀಳಿಗೆಯ ಯುವ ಜನರು ಅನುಕೂಲ ಮಾಡಿಕೊಡಿ ಎಂದು ನೇರ ವಾಗಿ ಕೇಳುತ್ತಾರೆ. ಚುನಾಯಿತ ಪ್ರತಿನಿಧಿಗಳು ಮತದಾ ರರ ಬೇಡಿಕೆಗಳನ್ನು ಬಗೆಹರಿಸಬೇಕು. ಜನಪ್ರತಿನಿಧಿಗಳು ಅಭ್ಯರ್ಥಿಯಾದಾಗಿನಿಂದ ಗೆದ್ದ ನಂತರವೂ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಆ ಜವಾಬ್ದಾರಿಯನ್ನು ಜನರು ತೋರಿಸಬೇಕು. ಸುಮ್ಮನೆ ಆಯ್ಕೆಯಾದರೂ, ಅವರು ಏನೂ ಕೆಲಸ ಮಾಡಲಿಲ್ಲ ಎನ್ನುವುದಕ್ಕಿಂತ, ಅವ ರಿಂದ ಕೆಲಸ ಮಾಡಿಸಿಕೊಳ್ಳಲು ಪ್ರಯತ್ನ ಮಾಡಬೇಕು.

ಯದುವೀರ್ ದಂಪತಿಯಿಂದ ಮತದಾನ: ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮತದಾನ ಮಾಡಿ ಅರಮನೆಗೆ ವಾಪಸಾದ ಬಳಿಕ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರು ಶ್ರೀಕಾಂತ ಶಾಲೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತುಕೊಂಡೇ ಮತ ಚಲಾಯಿಸಿದರು.

Translate »