ರಂಗಾಯಣ ನಿರ್ದೇಶಕರ ಸ್ಥಾನಕ್ಕೆ  ಅಡ್ಡಂಡ ಕಾರ್ಯಪ್ಪ ರಾಜೀನಾಮೆ
ಮೈಸೂರು

ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ

May 15, 2023

ಮೈಸೂರು, ಮೇ 14(ಎಂಕೆ)-ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನೆಲೆ ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಸಿ ಕಾರ್ಯಪ್ಪ ಭಾನು ವಾರ ರಾಜೀನಾಮೆ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿ ರುವ ಅವರು, ಸರ್ಕಾರ 2019ರ ಡಿ.27ರಂದು ನನ್ನನ್ನು ಮೈಸೂರಿನ ರಂಗಾಯಣ ನಿರ್ದೇ ಶಕನನ್ನಾಗಿ ನೇಮಿಸಿತ್ತು. ಅದರಂತೆ 2019ರ ಡಿ.30ರಂದು ಅಧಿಕಾರ ಸ್ವೀಕರಿಸಿ ಅಂದಿನಿಂದ ಇಂದಿನವರೆಗೆ ಕಾಯಾ, ವಾಚಾ, ಮನಸಾ ನನ್ನ ಕರ್ತವ್ಯವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ.

ರಂಗಾಯಣದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿ, ನಿರಂತರ ಚಟುವಟಿಕೆಯಿಂದ ರಂಗಾಯಣದ ಕೀರ್ತಿಯನ್ನು ರಾಜ್ಯ-ದೇಶ ದೆಲ್ಲೆಡೆ ಪಸರಿಸುವಂತೆ ನಮ್ಮ ಕಲಾವಿದರ ಸಹಕಾರದೊಂದಿಗೆ ಮಾಡಿದ್ದೇನೆ. ರಂಗಾ ಯಣದಲ್ಲಿ ರಂಗಮಂದಿರಗಳೂ ಸೇರಿದಂತೆ ಇತರೆ ಅವಶ್ಯಕವಾಗಿ ಬೇಕಾದ ಕಾಮಗಾರಿ ಗಳನ್ನು ಲಕ್ಷಾಂತರ ರೂಪಾಯಿಗಳ ವೆಚ್ಚ ದಲ್ಲಿ ದಾನಿಗಳೂ, ಶಾಸಕರ ಅನುದಾನ ಮತ್ತು ಇತರೆ ಮೂಲಗಳ ಆರ್ಥಿಕ ನೆರವಿ ನಿಂದ ಮಾಡಿದ್ದೇನೆ. ರಂಗಾಯಣವನ್ನು ಸ್ವಚ್ಛವಾಗಿಟ್ಟು ಇಡೀ ಪರಿಸರ ಹಸಿರೀ ಕರಣವಾಗುವಂತೆ ನೋಡಿಕೊಂಡಿದ್ದೇನೆ.

ನಾನು ಅಧಿಕಾರ ವಹಿಸಿಕೊಂಡಾಗ ಆರ್ಥಿಕವಾಗಿ ಅಷ್ಟೇನು ಸುಸ್ಥಿತಿಯಲ್ಲಿ ಇರದ ರಂಗಾಯಣದಲ್ಲಿ ಇಂದು 2,09,15,773 ರೂ. ಠೇವಣಿಯಲ್ಲಿಡಲಾಗಿದೆ. ಅಲ್ಲದೇ ಇಂದು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 1,57, 67,300 ರೂ. ಇರುವಂತೆ ನಾಟಕ ಪ್ರದ ರ್ಶನಗಳ ಆದಾಯ, ದಾನಿಗಳಿಂದ ಬಂದ ದಾನ ಹಾಗೂ ಇತರೆ ಉತ್ಸವ, ನಮ್ಮ ಚಟುವಟಿಕೆಗಳಿಂದ ಬಂದ ಆದಾಯ ಎಲ್ಲವನ್ನೂ ಸೇರಿಸಿ, ಮುಖ್ಯವಾಗಿ ಖರ್ಚು ಕಡಿಮೆ ಮಾಡಿ ಉಳಿತಾಯ ಆಗುವ ಹಾಗೆ ಮಾಡಿದ್ದೇನೆ.

ಸರ್ಕಾರ ಹಿರಿಯ ಕಲಾವಿದರು ಮತ್ತು ಸಿಬ್ಬಂದಿಗಳಿಗೆ ನಿವೃತ್ತಿ ನಂತರ ಕೊಡಲು (ಒಟ್ಟು 16 ಜನ) ಇಡುಗಂಟಾಗಿ ಇಟ್ಟ ಹಣ ಇದೀಗ 4,00,00,000 ರೂ.ಗಳಾಗಿದ್ದು, ಇದರ ಬಡ್ಡಿ ಹಣ ಕನಿಷ್ಠ 50 ಲಕ್ಷ ರೂ. ರಂಗಾಯಣಕ್ಕೆ ದಕ್ಕಲಿದೆ. ಹೀಗೆ ಒಟ್ಟು 4,16,83,073 ರೂ. ಹಣ ಖಾತೆಯಲ್ಲಿದೆ ಎನ್ನುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಇದಕ್ಕಾಗಿ ಕಳೆದ 3-4 ತಿಂಗಳಿಂದ ಹಗಲಿ ರುಳೂ ದುಡಿದಿದ್ದೇನೆ. ರಂಗಾಯಣದ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಿದ್ದೇನೆ.
ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ ಸರ್ಕಾರ ರಾಜ್ಯ ವಿಧಾನಸಭಾ ಚುನಾ ವಣೆ ಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ಇದನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡು ತ್ತಿದ್ದೇನೆ. ನನ್ನೊಂದಿಗೆ ನನ್ನ ಈ ಅವಧಿಯಲ್ಲಿ ಸಹಕರಿಸಿದ ರಂಗಾಯಣದ ಎಲ್ಲ ಸಿಬ್ಬಂದಿಗೆ, ಕಲಾವಿದರಿಗೆ, ಅಧಿಕಾರ ವರ್ಗಕ್ಕೆ, ಪ್ರೇಕ್ಷಕ ರಿಗೆ, ನನ್ನ ಕಷ್ಟ ಕಾಲಗಳಲ್ಲಿ ನನ್ನೊಂದಿಗೆ ಕೈಜೋಡಿಸಿದ ಸಂಘ ಪರಿವಾರ ಹಾಗೂ ಮಾಧ್ಯಮದ ಸ್ನೇಹಿತರಿಗೆ ಹೃದಯಪೂರ್ವಕ ವಂದನೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Translate »