ಮೈಸೂರು-ಬೆಂಗಳೂರು ಹೈವೇ ರಿಂಗ್ ರೋಡ್ ಜಂಕ್ಷನ್‍ನ ಫ್ಲೈ ಓವರ್  ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ
ಮೈಸೂರು

ಮೈಸೂರು-ಬೆಂಗಳೂರು ಹೈವೇ ರಿಂಗ್ ರೋಡ್ ಜಂಕ್ಷನ್‍ನ ಫ್ಲೈ ಓವರ್ ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ

May 26, 2023

ಮೈಸೂರು, ಮೇ 25 (ಆರ್‍ಕೆ)- ವಾಹನಗಳ ಸುಗಮ ಸಂಚಾರಕ್ಕೆ ಮೈಸೂರು -ಬೆಂಗಳೂರು ಹೆದ್ದಾರಿಯ ರಿಂಗ್ ರೋಡ್ ಜಂಕ್ಷನ್‍ನಲ್ಲಿ ನಿರ್ಮಿ ಸಲು ಉದ್ದೇಶಿಸಿರುವ ಫ್ಲೈ ಓವರ್ ಯೋಜನೆಗೆ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸ ವನ್ನು ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿದ್ದಾರೆ.

ಎಕ್ಸ್‍ಪ್ರೆಸ್‍ವೇ ಸಂಚಾರಕ್ಕೆ ಮುಕ್ತವಾದ ನಂತರ ವಾಹನ ದಟ್ಟಣೆಯಿಂದ ಸಮಸ್ಯೆ ಸೃಷ್ಟಿಯಾಗಿದ್ದ ಮೈಸೂರಿನ ಮಣಿಪಾಲ್ ಆಸ್ಪತ್ರೆ ಬಳಿಯ ಕೆಂಪೇ ಗೌಡ ಸರ್ಕಲ್‍ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಮ್ಮ ಸರ್ಕಾ ರವು ಮೈಸೂರು-ಬೆಂಗಳೂರು ನಡುವೆ ಎಕ್ಸ್‍ಪ್ರೆಸ್ ಕಾರಿಡಾರ್ ನಿರ್ಮಿಸಿದ ಬಳಿಕ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯ, ರಜಾ ದಿನಗಳಲ್ಲಿ ವಾಹನ ದಟ್ಟಣೆಯಿಂದಾಗಿ ಈ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಆಗಿ ಗಂಟೆಗಟ್ಟಲೆ ಕಾಯುವಂತಾಗುತ್ತಿತ್ತು ಎಂದರು. ಅದೇ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ
ಈ ಸರ್ಕಲ್‍ನಲ್ಲಿ ಫ್ಲೈ ಓವರ್ ನಿರ್ಮಿಸುವ ಸಂಬಂಧ ಪ್ರಸ್ತಾ ವನೆ ಸಲ್ಲಿಸಿದ್ದು, ಸರ್ಕಾರದ ಅನುಮೋದನೆ ಹಂತದಲ್ಲಿದೆ. ನಾವೂ ಅದರ ಹಿಂದೆ ಬಿದ್ದಿದ್ದು, ಇಷ್ಟರಲ್ಲೇ ಅನುಮೋದನೆ ದೊರೆಯಲಿದೆ. ನಂತರ ಪ್ರಾಧಿಕಾರದಿಂದ ಈ ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳ ಲಾಗುವುದು ಎಂದು ತಿಳಿಸಿದರು. ಫ್ಲೈ ಓವರ್ ನಿರ್ಮಿಸುವವರೆಗೆ ಸಂಚಾರ ಸಮಸ್ಯೆ ನಿವಾರಿಸಲು ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಲ್ಲಿದ್ದ ನಾಲ್ಕು ಸಿಗ್ನಲ್ ಲೈಟ್ ಕಂಬ ಗಳನ್ನು ಬದಿಗೆ ಸ್ಥಳಾಂತರಿಸಿ, ಅಲ್ಲಿನ ಮೀಡಿ ಯನ್‍ಗಳನ್ನು ಕಡಿತಗೊಳಿಸಿರುವುದರಿಂದ ಈಗ ಜಂಕ್ಷನ್ ವಿಶಾಲವಾಗಿದ್ದು, ನಾಲ್ಕು ಕಡೆಯಿಂದ ವಾಹನಗಳು ಸರಾಗವಾಗಿ ಚಲಿಸುತ್ತಿವೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರು-ಬೆಂಗಳೂರು ಹೆದ್ದಾರಿ, ರಿಂಗ್ ರಸ್ತೆಯ ಸರ್ವಿಸ್ ರಸ್ತೆ ಹಾಗೂ ಮೈಸೂರು ಕಡೆಯಿಂದ ಬರುವ ವಾಹನಗಳು ಕೆಂಪೇಗೌಡ ಸರ್ಕಲ್‍ನಲ್ಲಿ ಎಡಕ್ಕೆ ಸರಾಗವಾಗಿ ತಿರುಗಲು (ಫ್ರೀ ಲೆಫ್ಟ್) ಅನುಕೂಲ ವಾಗುವಂತೆ ಮತ್ತಷ್ಟು ವಿಶಾಲಗೊಳಿಸಲು ಸಂಚಾರ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಉಳಿದಂತೆ ಸಿಗ್ನಲ್‍ಲೈಟ್ ಕಂಬಗಳನ್ನು ಸ್ಥಳಾಂತರಿಸಿರುವುದು ಹಾಗೂ ವಿಭಜಕ ಕಡಿತಗೊಳಿಸಿರುವುದರಿಂದ ಅಲ್ಲಲ್ಲಿ ಉಂಟಾ ಗಿರುವ ಗುಂಡಿಗಳ ಮುಚ್ಚಿ ಡಾಂಬರ್ ಹಾಕಿ, ಸರ್ಕಲ್ ಅನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆಯೂ ಹೇಳಿದ್ದೇನೆ. ಅದರಿಂದ ವಾಹನಗಳು ಅಡೆತಡೆಯಿಲ್ಲದೆ ಸಂಚರಿಸಬಹುದಾಗಿದೆ ಎಂದು ಸಂಸದರು ನುಡಿದರು. ಈ ಹಿಂದೆ ಕೆಂಪೇಗೌಡ ಸರ್ಕಲ್‍ನಲ್ಲಿ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ ಗ್ರೇಡ್ ಸಪರೇಟರ್ ನಿರ್ಮಿಸಲು ಉದ್ದೇಶಿಸಿ, 2019ರಲ್ಲಿ ಪ್ರಸ್ತಾವನೆಯನ್ನು ಸಹ ಸಲ್ಲಿಸಲಾಗಿತ್ತು. ಮೈಸೂರು -ಬೆಂಗಳೂರು ಎಕ್ಸ್‍ಪ್ರೆಸ್ ವೇ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾದರೂ ಮಣಿ ಪಾಲ್ ಆಸ್ಪತ್ರೆ ಜಂಕ್ಷನ್‍ನಲ್ಲಿ ಫ್ಲೈ ಓವರ್ ನಿರ್ಮಿ ಸುವ ಪ್ರಸ್ತಾವನೆಗೆ ಇನ್ನು ಅನುಮೋದನೆ ಸಿಕ್ಕಿಲ್ಲ. ಸಂಸದರು ಸ್ಥಳ ಪರಿಶೀಲಿಸಿದ ಸಂದರ್ಭ ಸಂಚಾರ ವಿಭಾಗದ ಎಸಿಪಿ ಪರಶುರಾಮಪ್ಪ, ಸಿದ್ದಾರ್ಥ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಯೋಗೇಶ್, ಎನ್.ಆರ್. ಠಾಣೆ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Translate »