ವಿಜೃಂಭಣೆಯ ಶ್ರೀಹಿಂಡಿ ಮಾರಮ್ಮನ ಕೊಂಡೋತ್ಸವ

ಯಳಂದೂರು: ತಾಲೂಕಿನ ಅಗರ ಮಾಂಬಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ಶ್ರೀಹಿಂಡಿ ಮಾರಮ್ಮ ಕೊಂಡೋತ್ಸವ ವಿಭೃಂಜನೆ ಯಿಂದ ನಡೆಯಿತು.

ಅಗರ, ಮಾಂಬಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ಕಿನಕಹಳ್ಳಿ, ಬಸವಪುರ, ಕಟ್ನವಾಡಿ, ಬನ್ನಿ ಸಾರಿಗೆ, ಕುಣ್ಣಗಳ್ಳಿ ಸೇರಿದಂತೆ 7 ಗ್ರಾಮಸ್ಥರು ಪ್ರತಿವರ್ಷ ದೀಪಾವಳಿ ಮಾರನೇ ದಿನದಿಂದ 2 ದಿನಗಳ ಕಾಲ ಗ್ರಾಮ ದೇವತೆ ಶ್ರೀಹಿಂಡಿ ಮಾರಮ್ಮ ಕೊಂಡೋ ತ್ಸವವನ್ನು ಸಂಭ್ರಮದಿಂದ ಆಚರಿಸುವರು.

ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ದೇವಾಲ ಯದಲ್ಲಿ ಸಪ್ತಮಾತೃಕೆಯರಿಗೆ ಪೂಜೆ ಸಲ್ಲಿಸಿ, ವಿಶೇಷ ಹೋವಿನ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅನುವು ಮಾಡಿ ಕೊಡಲಾ ಗಿತ್ತು. ಗುರುವಾರ ರಾತ್ರಿ ಅಗರ ಮಾಂಬಳ್ಳಿ ಗ್ರಾಮದಲ್ಲಿ ಅರ್ಚಕರು ವಿಶೇಷ ಹೋಮ ನಡೆಸಿ ಕೊಂಡೋತ್ಸವಕ್ಕೆ ತಂದಿದ್ದ ಉರುವ ಲಿಗೆ ಸಾಂಪ್ರದಾಯಿಕವಾಗಿ ಅಗ್ನಿ ಸ್ಪರ್ಶ ಮಾಡಿದರು.

ನಂತರ ಸುತ್ತಮುತ್ತಲಿನ ಎಲ್ಲಾ ಗ್ರಾಮ ಸ್ಥರು ಸೇರಿ ಉತ್ಸವ ಮೂರ್ತಿ ಹೊತ್ತು ತಂದರು. ಭಕ್ತರು ಅಗರ ಗ್ರಾಮದ ಕೆರೆ ಯಲ್ಲಿ ಸತ್ತಿಗೆ ಸೋರಿಪಾನಿಗಳಿಗೆ ಹೂವಿನ ಅಲಂಕಾರ ಮಾಡಿ, ಹೊಸ ನೀರು ತಂದು ಗ್ರಾಮದ ಶ್ರೀವೀರಾಂಜನೇಯ ದೇವಾಲ ಯದ ಮುಂದೆ ಹಾಕಲಾಗಿದ ಕೊಂಡೋ ತ್ಸವ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಅರ್ಚಕರು ಕೊಂಡೋ ತ್ಸವ ಹಾಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ಈ ವೇಳೆ ಸಾವಿರಾರು ಭಕ್ತಾದಿ ಗಳು ಕೊಂಡೋತ್ಸವದಲ್ಲಿ ಭಾಗವಹಿಸಿದ್ದರು.
ಹಬ್ಬದ ಅಂಗವಾಗಿ ಗ್ರಾಮದಲ್ಲಿ ವಿಶೇಷ ವಾಗಿ ವಿದ್ಯುತ್ ದೀಪಾಂಕಾರ ಮಾಡಲಾ ಗಿತ್ತು. ಕೊಂಡೋತ್ಸವ ಬಳಿಕ ಉತ್ಸವ ಮೂರ್ತಿ ಮೆರವಣಿಗೆಯುದ್ದಕ್ಕೂ ಸಿಡಿಮದ್ದು ಸಿಡಿಸಿ ಭಕ್ತರು ಸಂಭ್ರಮಿಸಿದರು.