‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ

ಹನೂರು, ಜು.10(ಸೋಮು)- ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಸೌಲಭ್ಯ ಗಳ ಜೊತೆಗೆ ಉಪಯುಕ್ತ ಮಾಹಿತಿ ಯನ್ನು ನೀಡಲಾಗುತ್ತಿದ್ದು, ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.

ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಮಗ್ರ ಕೃಷಿ ಅಭಿ ಯಾನ 2020-21ನೇ ಸಾಲಿನ ‘ಇಲಾಖೆ ಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಹಾಗೂ ಮುಂಗಾರು ರೈತರ ಬೆಳೆ ಸಮೀಕ್ಷೆ ಕಾರ್ಯ ಕ್ರಮಕ್ಕೆ ಚಾಲನೆ ಮತ್ತು ಕೃಷಿ ಯಂತ್ರೋಪ ಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಗಳು ರೈತರ ಅನುಕೂಲಕ್ಕೆ ವಿನೂತನವಾದ ಕಾರ್ಯಕ್ರಮ ಮತ್ತು ಯೋಜನೆಗಳನ್ನು ನೀಡಿವೆ. ಕೃಷಿ ಇಲಾಖೆ ಯಲ್ಲಿ ಸೌಲಭ್ಯಗಳ ಜೊತೆಗೆ ಆಯಾ ಕಾಲಕ್ಕೆ ಬೆಳೆಯಲಾಗುವ ಬೆಳೆಗಳು, ಮಣ್ಣಿನ ಸವಕಳಿ ತಡೆಗಟ್ಟುವುದು, ಇನ್ನಿತರೆ ಉಪ ಯುಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ. ಕೃಷಿ ಇಲಾಖೆ ವತಿಯಿಂದ ಎಸ್‍ಸಿ, ಎಸ್‍ಟಿ ಗಳಿಗೆ ಶೇ. 80ರಷ್ಟು ಸಬ್ಸಿಡಿ ಹಾಗೂ ಶೇ. 80ರಷ್ಟು ಇನ್ನಿತರರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ನೆರೆಯ ತಮಿಳುನಾಡಿನಿಂದ ಭತ್ತದ ಕಟಾವು ಯಂತ್ರಗಳನ್ನು ಬಳಸಬೇಕಾಗಿದೆ. ನಾವು ಪರಾವಲಂಬಿಗಳಾಗಬಾರದು, ಈ ಹಿನ್ನೆಲೆಯಲ್ಲಿ ನಮ್ಮಲ್ಲೇ ಯಂತ್ರೋಪ ಕರಣಗಳನ್ನು ಖರೀದಿಸುವ ವ್ಯವಸ್ಥೆ ಆಗ ಬೇಕಿದೆ. ಕಳೆದ ಎರಡು ತಿಂಗಳುಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆಗಳು ನಷ್ಟ ಉಂಟಾಗಿದೆ. ಮುಂಬರುವ ದಿನಗಳಲ್ಲಾ ದರೂ ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಇದೇ ವೇಳೆ ಕೊಳ್ಳೇಗಾಲ ಕೃಷಿ ಇಲಾ ಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ, ಕೃಷಿ ಇಲಾಖೆಯಲ್ಲಿ ವಿನೂ ತನವಾಗಿ ಬೆಳೆ ಸಮೀಕ್ಷೆಯನ್ನು ನಡೆಸಲು ರೈತರಿಗೆ ಅನುಕೂಲ ಕಲ್ಪಿಸಿರುವುದು ಸೇರಿ ದಂತೆ ಕೃಷಿ ಇಲಾಖೆಯಿಂದ ದೊರಕುವ ಸೌಲಭ್ಯಗಳು ಮತ್ತು ಮಾಹಿತಿ ಬಗ್ಗೆ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಹನೂರು ತಾಲೂಕು ಕೃಷಿ ಅಧಿಕಾರಿ ರಘುವೀರ್, ತಾಂತ್ರಿಕ ಅಧಿಕಾರಿ ಧಮೇಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಬಸವರಾಜಪ್ಪ, ಪಪಂ ಅಧ್ಯಕ್ಷೆ ಚಂದ್ರಮ್ಮ, ಸದಸ್ಯರು, ಮುಖಂಡರಾದ ಜವಾದ್ ಅಹಮದ್, ಗುರುಮಲ್ಲಪ್ಪ, ಇನ್ನಿತರರು ಇದ್ದರು.