ಜನಪ್ರತಿನಿಧಿಗಳು, ಅಧಿಕಾರಿಗಳ `ಅಭಿವೃದ್ಧಿ’ ಅನಾವರಣ ಮಾಡುತ್ತಿರುವ ಮಳೆರಾಯ!

ಚರಂಡಿ, ರಸ್ತೆಗಳು ಅಧ್ವಾನ

ಕೆರೆ, ಹೊಂಡಗಳಾಗುತ್ತಿರುವ ತಗ್ಗು ಪ್ರದೇಶಗಳು

ರಸ್ತೆಗಳಲ್ಲಿ ಎಲ್ಲಿಕಾದಿವೆಯೋ ಹೊಂಡಗಳು

ಯಾವಾಗ ಮನೆಗೆ ನೀರು ನುಗ್ಗುವುದೋ ನಿವಾಸಿಗಳಲ್ಲಿ ಸದಾ ಆತಂಕ

ಯೋಜನಾಬದ್ಧ ಮೈಸೂರು ನಗರದಲ್ಲಿ ಹುದುಗಿರುವ ಅಗಾಧ ಸಮಸ್ಯೆಗಳನ್ನು ಮಹಾಮಳೆ ಒಂದೊAದಾಗಿ ಹೆಕ್ಕಿ ಹೊರ ತೆಗೆಯುತ್ತಿದೆ. ಕೆರೆಗಳು, ರಾಜಕಾಲುವೆಗಳ ಒತ್ತುವರಿ, ಅಳಿದುಳಿದಿದ್ದರಲ್ಲಿ ಹೂಳು ತುಂಬಿರುವುದು, ಮಳೆ ನೀರು ಚರಂಡಿ ಅವ್ಯವಸ್ಥೆ, ಅವೈಜ್ಞಾನಿಕ ಕಾಮಗಾರಿಗಳ ಪ್ರತಿಫಲವಾಗಿ ರಸ್ತೆಗಳೆಲ್ಲಾ ಜಲಾವೃತವಾಗುತ್ತಿವೆ. ಒಳಚರಂಡಿ ಸಂಪರ್ಕದ ಮೇಲಿನ ಒತ್ತಡ ಹೆಚ್ಚಿ, ಮ್ಯಾನ್‌ಹೋಲ್‌ಗಳಲ್ಲಿ ನೀರು ಉಕ್ಕುತ್ತಿದೆ. ಮುಡಾ ಅನುಮತಿಯೊಂದಿಗೆ ನಿರ್ಮಾಣ ವಾಗಿರುವ ಹಲವು ಖಾಸಗಿ ಬಡಾವಣೆಗಳಲ್ಲಿ ಕೆರೆ ಮಾದರಿ ನಿರ್ಮಾಣವಾಗುತ್ತಿದೆ. ನೂರಾರು ಮನೆಗಳಿಗೆ ನೀರು ನುಗ್ಗುತ್ತಿದೆ. ಹಳೆಯ ಕಟ್ಟಡಗಳು ಮತ್ತಷ್ಟು ದುಸ್ಥಿತಿಗೆ ತಲುಪುತ್ತಿವೆ. ಮಳೆ ಬಂದಾಗಲೆಲ್ಲಾ ನೂರಾರು ಕುಟುಂಬಗಳು ಆತಂಕದಲ್ಲೇ ಕಾಲ ಕಳೆಯುವಂತಾಗಿವೆ. ಮಂಗಳವಾರವೂ ಮಳೆ ಹಲವೆಡೆ ಅಧ್ವಾನ ಸೃಷ್ಟಿಸಿದ್ದು, ಆಡಳಿತ ವ್ಯವಸ್ಥೆ ಗಂಭೀರವಾಗಿ ಪರಿಗಣ ಸಬೇಕಿದೆ.

ಮೈಸೂರು, ನ.೧೬(ಎಸ್‌ಪಿಎನ್)- ಸಯ್ಯಾಜಿರಾವ್ ರಸ್ತೆಯ ತಿಲಕ್‌ನಗರದ ತರಳಬಾಳು(ಅಂಧರ ಶಾಲೆ ಪಕ್ಕ) ಶಾಲೆ ಮುಂಭಾಗದಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ರಸ್ತೆ ಬದಿ ಮಂಡಿಯುದ್ದ ನೀರು ನಿಂತುಕೊಳ್ಳುತ್ತದೆ. ಹೈವೇ ಸರ್ಕಲ್ ಕಡೆಯಿಂದ ಬರುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಾತ್ರಿ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುತ್ತದೆ. ನಂಜನಗೂಡು ರಸ್ತೆ- ಎಲೆತೋಟದ ಬಳಿಯ ಕಂಸಾಳೆ ಮಹಾ ದೇವಯ್ಯ ವೃತ್ತ ಮಾರ್ಗದಲ್ಲಿ ಫುಟ್ ಪಾತ್ ಅತಿಕ್ರಮಿಸಿಕೊಂಡಿರುವ ಪರಿ ಣಾಮ ಪಾದಚಾರಿಗಳೂ ರಸ್ತೆಯಲ್ಲೇ ಓಡಾಡಬೇಕಾಗಿದೆ. ಆದರೆ ಮಳೆ ಬಂದಾಗ ರಸ್ತೆ ಜಲಮಯವಾಗುವುದ ರಿಂದ ಸಾರ್ವಜನಿಕರು ಪರಿತಪಿಸುವಂತಾ ಗಿದೆ. ರಸ್ತೆ ಕಿರಿದಾಗಿದ್ದು, ಲಾರಿ, ಟ್ರಾö್ಯಕ್ಟರ್ ಗಳಂತಹ ದೊಡ್ಡ ವಾಹನಗಳು ಹೆಚ್ಚಾಗಿ ಸಂಚರಿಸುವುದರಿAದ ಆಗಾಗ ಅಪಘಾತ ಸಂಭವಿಸುತ್ತವೆ. ಈ ಗಂಭೀರ ಸಮಸ್ಯೆ ಬಗ್ಗೆ ನಗರ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಮೈಸೂರು ಗ್ರಾಮಾಂತರ ಘಟಕದ ಸಹ ವಕ್ತಾರ ಕೆ.ವಸಂತ್‌ಕುಮಾರ್ ತಿಳಿಸಿದ್ದಾರೆ.

ಜೆಎಲ್‌ಬಿ ರಸ್ತೆಯ ಸೆಲ್ವಾನ್ ಗ್ರೀನ್ ಬಡಾವಣೆ ಸಣ್ಣ ಮಳೆಯಾದರೂ ಜಲಾವೃತವಾಗುತ್ತದೆ. ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸದ ಪರಿಣಾಮ ನಿವಾಸಿಗಳು ಆತಂಕಕ್ಕೊಳಗಾಗಿ ದ್ದಾರೆ. ನಾದಬ್ರಹ್ಮ ಸಂಗೀತ ಸಭಾ ಭವನದ ಎದುರಿನ ಶ್ರೀನಿವಾಸನ್ ವೃತ್ತದಲ್ಲಿ ಧಾರಾ ಕಾರ ಮಳೆಯಿಂದ ಕೊಚ್ಚೆ ಗುಂಡಿಗಳು ನಿರ್ಮಾಣವಾಗಿದ್ದು, ಈ ಮಾರ್ಗದಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರಿತಪಿಸುತ್ತಿದ್ದಾರೆ. ನೂರೊಂದು ಗಣಪತಿ ದೇವಸ್ಥಾನ ಮಾರ್ಗ ದಲ್ಲಿ ರಸ್ತೆಡುಬ್ಬ ನಿರ್ಮಿಸಲಾಗಿದ್ದು, ಅದರ ಪಕ್ಕದಲ್ಲಿ ಮಳೆ ನೀರಿನ ರಭಸಕ್ಕೆ ಹೊಂಡ ನಿರ್ಮಾಣವಾಗಿದೆ. ಮಳೆಯಲ್ಲಿ ಹೊಂಡ ಗುರುತಿಸಲಾಗದೆ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು, ಗಾಯಗೊಂಡಿದ್ದಾರೆ.

ಮೈಸೂರು-ಹೆಚ್.ಡಿ.ಕೋಟೆ ರಸ್ತೆಯ ಪರಸಯ್ಯಹುಂಡಿ-ರಿAಗ್‌ರೋಡ್ ಜಂಕ್ಷನ್ ಸಮೀಪ ಬಸ್ ನಿಲ್ದಾಣದ ಬಳಿ ರಸ್ತೆ ಒತ್ತುವರಿಯಾಗಿದೆ. ಕೆಲವರು ಮನಸ್ಸೋ ಇಚ್ಛೆ ಫುಟ್‌ಪಾತ್ ಅತಿಕ್ರಮಿಸಿ ಕೊಂಡಿರುವುದರಿAದ ಮಳೆ ನೀರು ಚರಂಡಿ ಸೇರದೆ ರಸ್ತೆಯಲ್ಲೇ ಹರಿಯು ತ್ತದೆ. ಮಳೆ ಬಂದಾಗ ಈ ಪ್ರಯಾಣ ಕರು ಬಸ್ ಇಳಿದು-ಹತ್ತುವುದಕ್ಕೂ ತೊಂದರೆ ಯಾಗುತ್ತಿದೆ. ಇಲ್ಲಿನ ತೊಂದರೆ ಬಗ್ಗೆ ಪೊಲೀಸರು ಹಾಗೂ ಜನಪ್ರತಿನಿಧಿ ಗಳಿಗೆ ಹಲವು ಬಾರಿ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಪರಸಯ್ಯನಹುಂಡಿ ನಿವಾಸಿ ಪರಮೇಶ್ ಬೇಸರ ವ್ಯಕ್ತಪಡಿಸಿದರು. ರಾಮಕೃಷ್ಣನಗರದ ಶ್ರೀ ರಾಮಕೃಷ್ಣ ಪರಹಂಸರ ವೃತ್ತದಲ್ಲಿದ್ದ ಸಣ್ಣ ಗುಂಡಿಗಳು ಮಳೆಯಿಂದ ದೊಡ್ಡ ಹೊಂಡಗಳಾಗಿ ನಿರ್ಮಾಣವಾಗಿವೆ. ಈ ವೃತ್ತದ ಸುತ್ತ ವಾಹನ ಸಂಚಾರವೇ ದುಸ್ತರವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮಾರಾಟ ಪ್ರತಿನಿಧಿ ಲಿಂಗರಾಜ್ ಚಿತ್ತಣ್ಣವರ್ ವಿಷಾದಿಸಿ ದ್ದಾರೆ. ಹೆಚ್.ಡಿ.ಕೋಟೆ ರಸ್ತೆ ಸಂಪರ್ಕಿ ಸುವ ಜಯನಗರ ರೈಲ್ವೆ ಕೆಳಸೇತುವೆಯಲ್ಲಿ ಮಳೆ ನಡುವೆಯೇ ಚರಂಡಿ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ನ್ಯೂ ಕಾಂತರಾಜ ರಸ್ತೆಯಿಂದ ಕೆ.ಜಿ.ಕೊಪ್ಪಲಿನಿಂದ ರೈಲ್ವೆ ಹಳಿ ಪಕ್ಕದಲ್ಲಿ ಹಾದು ಹೋಗುವ ಹಳೇ ಮಾನಂದವಾಡಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಮಳೆಯಿಂದ ಮತ್ತಷ್ಟು ಅಧ್ವಾನವಾಗಿದೆ. ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ನಗರ ಪಾಲಿಕೆ ಜನಾಕ್ರೋಶ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯ ಬಿ.ಎಂ.ಸುರೇಶ್ ಎಚ್ಚರಿಕೆ ನೀಡಿದ್ದಾರೆ. ಶ್ರೀರಾಂಪುರA ೨ನೇ ಹಂತದ ಶ್ರೀ ಬಲಮುರಿ ಗಣಪತಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಆಳುದ್ದ ಗುಂಡಿ ಬಿದ್ದಿದ್ದು, ಮಳೆ ನೀರು ತುಂಬಿ ಅಪಘಾತಗಳು ಸಂಭವಿಸುತ್ತಿವೆ ಎಂದು ಗಣಪತಿ ದೇವಸ್ಥಾನದ ಅರ್ಚಕ ಸುದೀಂದ್ರ ಆಚಾರ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಬಹುತೇಕ ರಸ್ತೆ, ವೃತ್ತಗಳ ದುಸ್ಥಿತಿ ಇದೇ ಆಗಿದೆ. ಮಹಾಮಳೆ ನಮ್ಮ ವ್ಯವಸ್ಥೆಯ ನಿರ್ಲಕ್ಷö್ಯತೆ ಪರಿಣಾಮವನ್ನು ಬಯಲಾಗಿಸಿದೆ.