ಪ್ರಕೃತಿ ವಿಕೋಪ ಸಂತ್ರಸ್ಥರಿಗೆ 162 ಮನೆ ಹಸ್ತಾಂತರ

ಮಡಿಕೇರಿ, ಏ.23- ರಾಜ್ಯ ವಸತಿ ಇಲಾಖೆ ವತಿಯಿಂದ ಅರ್ಹ ಫಲಾನು ಭವಿಗಳಿಗೆ ನೀಡಲಾಗುವ ಮನೆಗಳ ಹಕ್ಕು ಪತ್ರವನ್ನು ಮಹಿಳೆಯರ ಹೆಸರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವÀ ವಿ. ಸೋಮಣ್ಣ ಹೇಳಿದರು.

ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ಥರಾದವರಿಗೆ ಗಾಳಿ ಬೀಡುವಿನ 140 ಹಾಗೂ ಬಿಳಿಗೇರಿಯಲ್ಲಿ ನಿರ್ಮಿಸಲಾದ 22 ಮನೆ ಸೇರಿ ಒಟ್ಟು 162 ಮನೆಗಳನ್ನು ಫಲಾನುಭವಿಗಳಿಗೆ ಸಚಿವರು ಹಸ್ತಾಂತರಿಸಿದರು.

ಬಳಿಕ ಮನೆಗಳ ಒಳಾಂಗಣವನ್ನು ಪರಿ ಶೀಲಿಸಿದ ಸಚಿವ ಸೋಮಣ್ಣ ಮನೆಗಳ ಗುಣ ಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಕೃತಿಕ ವಿಕೋಪ ಸಂತ್ರಸ್ಥರಿಗಾಗಿ ಕೊಡಗು ಜಿಲ್ಲೆಯಲ್ಲಿ ನಿರ್ಮಿಸಿರುವ ಮನೆಗಳು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿ ಸಿದರು. ಯಾವುದೇ ಕಾರಣಕ್ಕೂ ಸರಕಾರ ನೀಡಿರುವ ಮನೆಗಳನ್ನು ಪರ ಭಾರೆ ಮಾಡದೇ ಅದರ ಸದುಪಯೋಗ ಪಡಿಕೊಳ್ಳುವಂತೆ ಫಲಾನುಭವಿಗಳಿಗೆ ಕಿವಿ ಮಾತು ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ಸರಕಾರದಿಂದ ನಿರ್ಮಿಸಿರುವ ಮನೆಗಳನ್ನು ಮಹಿಳೆಯರ ಹೆಸರಿಗೆ ಹಕ್ಕು ಪತ್ರ ನೀಡಲು ಸರಕಾರ ನಿರ್ಧರಿಸಿದೆ ಎಂದು ಹೇಳಿದರು. ಕೊಡಗು ಜಿಲ್ಲೆಯ ಬಿಳಿಗೇರಿ ಗ್ರಾಮದಲ್ಲಿ 5 ಎಕರೆಯಲ್ಲಿ ನಿರ್ಮಾಣ ಗೊಂಡ 22 ಮನೆಗಳನ್ನು ವಿಕೋಪ ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಜಿಲ್ಲೆ ಯಲ್ಲಿ ನಿರಾಶ್ರಿತರಿಗೆ ನಿರ್ಮಿಸಲಾದ ಒಟ್ಟು 836 ಮನೆಗಳ ಪೈಕಿ ಇದುವರೆಗೆ 786 ಮನೆ ಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಇನ್ನು ಉಳಿದ 76 ಮನೆಗಳನ್ನು ಕೂಡ ಶೀಘ್ರ ದಲ್ಲೇ ಪೂರ್ಣಗೊಳಿಸಿ ಫಲಾನುಭವಿ ಗಳಿಗೆ ಹಸ್ತಾಂತರ ಮಾಡಲಾಗುತ್ತದೆ. ಬಿಳಿ ಗೇರಿಯಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಮೂಲ ಸೌಕರ್ಯಗಳನ್ನು ಕೂಡ ಒದಗಿಸ ಲಾಗಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶಯದಂತೆ ಪ್ರತಿಯೊಬ್ಬರಿಗೂ ಸೂರು ನೀಡುವ ಭರವಸೆ ಕೊಡಗಿನಲ್ಲಿ ಈಡೇರಿದಂತಾಗಿದೆ ಎಂದು ಸಚಿವ ಸೋಮಣ್ಣ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ರಾಜೀವ ಗಾಂಧಿ ವಸತಿ ನಿಗಮದ ಅಧಿಕಾರಿಗಳು, ಇಂಜಿನಿ ಯರ್‍ಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.