ಜು.15ರಂದು ಸಿಬಿಎಸ್‍ಇ  10, 12ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ, ಜೂ. 30- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ-ಸಿಬಿಎಸ್‍ಇಯಲ್ಲಿ ವಿದ್ಯಾರ್ಥಿಗಳ ಈವರೆಗಿನ ತರಗತಿಗಳಲ್ಲಿನ ಸಾಧನೆ ಆಧಾರದ ಮೇಲೆ 10 ಮತ್ತು 12ನೇ ತರಗತಿಗಳ ಮೌಲ್ಯ ಮಾಪನ ಅಳೆಯುವ ಪ್ರಕ್ರಿಯೆ ಆರಂಭವಾಗಿದೆ. ವಿದ್ಯಾರ್ಥಿ ಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡು ತ್ತಿದ್ದು, ಜು.15ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಿಬಿಎಸ್‍ಇ ಪರೀಕ್ಷಾ ನಿಯಂತ್ರಕ ಡಾ.ಸನ್ಯಾಂ ಭಾರದ್ವಾಜ್ ತಿಳಿಸಿದ್ದಾರೆ. ಸಿಬಿಎಸ್‍ಇ ಈಗಾಗಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿ ರುವ ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನ ಕಾರ್ಯಕ್ಷಮತೆ (iಟಿಣeಡಿಟಿಚಿಟ ಚಿssess meಟಿಣ ಠಿeಡಿಜಿoಡಿmಚಿಟಿಛಿe) ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲಿದೆ ಎಂದು ಈ ಹಿಂದೆ ವಕೀಲರು ಸುಪ್ರೀಂ ಕೋರ್ಟ್‍ಗೆ ಮಾಹಿತಿ ನೀಡಿದ್ದರು.