ಮುಂದಿನ ವಾರ ಜಂಬೂ ಸವಾರಿ ಮಾರ್ಗಕ್ಕೆ 199 ಹೆಚ್ಚುವರಿ ಸಿಸಿ ಕ್ಯಾಮರಾ

ಮೈಸೂರು,ಸೆ. 14(ಆರ್‍ಕೆ)- ದಸರಾ ಮಹೋತ್ಸವಕ್ಕೆ ಇನ್ನಿಲ್ಲದ ಬಂದೋಬಸ್ತ್ ಮಾಡಲು ಮುಂದಾಗಿರುವ ಪೊಲೀಸರು, ಜಂಬೂ ಸವಾರಿ ಸಾಗುವ ರಾಜ ಮಾರ್ಗಕ್ಕೆ ಹೆಚ್ಚುವರಿಯಾಗಿ 199 ಸಿಸಿ ಕ್ಯಾಮರಾ ಅಳವಡಿಸಲು ಸಿದ್ಧತೆ ನಡೆಸಿದ್ದಾರೆ.

ಈ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಅರಮನೆ ಆವರಣ, ರಾಜಮಾರ್ಗ, ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನ ಸುತ್ತಮುತ್ತಲು ಖಾಯಂ ಆಗಿ ಅಳವಡಿಸಿ ರುವ 64 ಸಿಸಿ ಕ್ಯಾಮರಾಗಳ ಕಾರ್ಯ ವೈಖರಿಯನ್ನು ಈಗಾಗಲೇ ಪರಿಶೀಲಿಸಿ ದ್ದಾರೆ. 64ರ ಪೈಕಿ 5 ಕ್ಯಾಮರಾಗಳು ಕೆಟ್ಟು ನಿಂತಿದ್ದು, ಅವುಗಳನ್ನು ತೆಗೆದು ಹೊಸ ಕ್ಯಾಮರಾ ಅಳವಡಿಸುವ ಜತೆಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ತಾತ್ಕಾಲಿಕವಾಗಿ 199 ಸಿಸಿ ಟಿವಿ ಕ್ಯಾಮರಾಗಳನ್ನು ಅಳ ವಡಿಸಿ ತೀವ್ರ ನಿಗಾ ವಹಿಸುವಂತೆ ಪೊಲೀಸ್ ಆಯುಕ್ತ ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕಾನೂನು-ಸುವ್ಯ ವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು ಶುಕ್ರವಾರ ಮೈಸೂರಿನಲ್ಲಿ ದಸರಾ ಭದ್ರತೆ ಕುರಿತಂತೆ ಸಭೆ ನಡೆಸಿ ದಾಗ ಹೆಚ್ಚುವರಿ ಕ್ಯಾಮರಾಗಳನ್ನು ಅಳ ವಡಿಸಿ ವಿಜಯದಶಮಿ ಮೆರವಣಿಗೆ ಯಂದು ಜನರ ಚಲನ-ವಲನಗಳ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂನಲ್ಲಿರುವ ಆಟೋಮೇಷನ್ ಸೆಂಟರ್‍ಗಳಲ್ಲಿ ಹದ್ದಿನ ಕಣ್ಣಿಟ್ಟು, ಸಂಶಯ ಕಂಡುಬಂದಲ್ಲಿ ಆ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿತರಾದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣವೇ ಮುಂಜಾಗ್ರತಾ ಕ್ರಮ ವಹಿಸು ವಂತೆ ನಿರ್ದೇಶನ ನೀಡಿದ್ದಾರೆ.

ಮೆರವಣಿಗೆ ಆರಂಭವಾಗುವ ಅರಮನೆ ಒಳ ಆವರಣ, ಸುತ್ತಲಿನ ಪ್ರವೇಶ ದ್ವಾರ, ರಸ್ತೆಗಳು, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ, ದೊಡ್ಡ ಗಡಿ ಯಾರ, ಕೆ.ಆರ್. ಸರ್ಕಲ್, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಹಳೇ ಆರ್‍ಎಸಿ ಸರ್ಕಲ್, ಅಂಧ ಮಕ್ಕಳ ಶಾಲೆ ಬಳಿ, ಹೈವೇ ಸರ್ಕಲ್, ಬನ್ನಿಮಂಟಪದ ಕೆಎಸ್‍ಆರ್‍ಟಿಸಿ ಬಸ್ ಡಿಪೋ, ಪಂಜಿನ ಕವಾಯತು ಮೈದಾನದ ಒಳ ಹಾಗೂ ಹೊರ ಆವರಣ, ಎಲ್‍ಐಸಿ ಸರ್ಕಲ್ ಸೇರಿ ದಂತೆ ಜಂಬೂ ಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದುದ್ದಕ್ಕೂ ಹೆಚ್ಚುವರಿಯಾಗಿ ತಾತ್ಕಾಲಿಕ 199 ಸಿಸಿ ಕ್ಯಾಮರಾಗಳನ್ನು ಅಳ ವಡಿಸುವ ಕಾರ್ಯ ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ಕಾನೂನು -ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ. ಮುತ್ತು ರಾಜ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.