ನೋಟು ಅಮಾನ್ಯೀಕರಣಕ್ಕೆ 2 ವರ್ಷ; ಕಾಂಗ್ರೆಸ್‍ನಿಂದ ಮೈಸೂರಲ್ಲಿ ಪ್ರತಿಭಟನೆ

ಮೈಸೂರು:  ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಮಾಡಿ ಎರಡು ವರ್ಷವಾದರೂ ಸಂಕಷ್ಟಕ್ಕೆ ಸಿಲುಕಿರುವ ದೇಶದ ಜನರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮ ರೂಪಿಸಲು ವಿಫಲವಾಗಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಅವರ ನೇತೃತ್ವ ದಲ್ಲಿ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ಕಾರ್ಯ ಕರ್ತರು, ಪ್ರಧಾನಿ ನರೇಂದ್ರ ಮೋದಿ ಎರಡು ವರ್ಷಗಳ ಹಿಂದೆ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಏಕಪಕ್ಷೀಯ ನಿರ್ಧಾರ ತಳೆದರು. ನೋಟ್ ಬ್ಯಾನ್ ಆಗಿ 2 ವರ್ಷವಾಗಿದ್ದರೂ ದೇಶದ ಆರ್ಥಿಕ ಪರಿಸ್ಥಿತಿ ಇಂದಿಗೂ ಸುಧಾರಿ ಸಿಲ್ಲ. ಇದರಿಂದ ಕೋಟ್ಯಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಅಲ್ಲದೆ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ದುಸ್ತರವಾಯಿತು. ಸಣ್ಣ ಕೈಗಾರಿಕೆಗಳು ಅವನತಿ ಯತ್ತ ಸಾಗಿದವು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತಿಗಿಳಿದ ಪ್ರೊ.ಬಿ.ಕೆ.ಚಂದ್ರ ಶೇಖರ್, ನೋಟು ಅಮಾನ್ಯೀಕರಣ ದೇಶದ ಅಭಿವೃದ್ಧಿಗೋಸ್ಕರ 100, 200 ವರ್ಷಗಳಿ ಗೊಮ್ಮೆ ಮಾಡುವಂತಹ ಪ್ರಕ್ರಿಯೆಯಾಗಿದೆ. ಅಮೆ ರಿಕದಲ್ಲಿ ಕಳೆದ 200 ವರ್ಷಗಳಿಂದ ನೋಟ್ ಬ್ಯಾನ್ ಮಾಡಿಲ್ಲ. ಯೂರೋಪ್ ರಾಷ್ಟ್ರಗಳಲ್ಲೂ ಮಾಡಿಲ್ಲ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷದಲ್ಲೇ ನೋಟ್ ಬ್ಯಾನ್ ಮಾಡಿತು. ಇದು ಮೋದಿ ಬಿಟ್ಟರೆ ಹಣ ಕಾಸು ಸಚಿವರಿಗೇ ಗೊತ್ತಿರಲಿಲ್ಲ. ಕೆಲವೇ ಕೆಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ನೋಟ್ ಬ್ಯಾನ್ ಘೋಷಣೆ ಮಾಡಿದರು. ಸಚಿವ ಸಂಪುಟ ಹಾಗೂ ಆರ್‍ಬಿಐಗೆ ಈ ವಿಷಯದ ಅರಿವೇ ಇರಲಿಲ್ಲ. ಇದು ಸಂಪುಟಕ್ಕೆ ಮಾಡಿದ ಅಪಮಾನವಾಗಿದೆ. ಯಾವ ಆರ್ಥಿಕ ತಜ್ಞನೂ ನೋಟ್ ಬ್ಯಾನ್‍ನಿಂದ ದೇಶಕ್ಕೆ ಒಳ್ಳೆಯದಾಗಿದೆ ಎಂದು ಹೇಳಿಲ್ಲ. ನೋಟ್ ಬ್ಯಾನ್‍ನಿಂದಾದ ಅನಾನು ಕೂಲದಿಂದ ಈಗಲೂ ಬಡವರು ಪರಿತಪಿಸುತ್ತಿ ದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಮಾಜಿ ಸಂಸದ ಸಿ.ಹೆಚ್. ವಿಜಯಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಮಾಜಿ ಮೇಯರ್ ಗಳಾದ ಟಿ.ಬಿ.ಚಿಕ್ಕಣ್ಣ, ಬಿ.ಕೆ.ಪ್ರಕಾಶ್, ಪುಷ್ಪ ಲತಾ ಟಿ.ಬಿ.ಚಿಕ್ಕಣ್ಣ, ಆರಿಫ್ ಹುಸೇನ್, ಮಾಜಿ ಉಪ ಮೇಯರ್‍ಗಳಾದ ಪುಷ್ಪವಲ್ಲಿ, ಪುಷ್ಪಲತಾ ಜಗನ್ನಾಥ್, ಮುಖಂಡರಾದ ಡೈರಿ ವೆಂಕ ಟೇಶ್, ಲಕ್ಷ್ಮಣ್, ಮೈಸೂರು ಬಸವಣ್ಣ ಸೇರಿದಂತೆ ಪಾಲಿಕೆ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.