ಮೈಸೂರಲ್ಲಿ ಮಂಗಳವಾರ 28 ಮಂದಿಗೆ ಸೋಂಕು 265 ಜನ ಗುಣಮುಖ

ಮೈಸೂರು, ಸೆ.14(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಕ್ರಿಯ ಪ್ರಕರಣಗಳ ಸಂಖ್ಯೆ 500ಕ್ಕೆ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, ಮಂಗಳವಾರ 28 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಇದ ರೊಂದಿಗೆ ಒಟ್ಟು ಸೋಂಕಿ ತರ ಸಂಖ್ಯೆ 1,76,940ಕ್ಕೆ ಏರಿಕೆಯಾಗಿದೆ. ಗುಣ ಮುಖರಾಗಿ ಇಂದು 265 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 1,74,065 ಸೋಂಕಿತರು ಗುಣ ಮುಖ ರಾಗಿದ್ದಾರೆ. ಇಲ್ಲಿಯ ವರೆಗೆ 2,375 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 500ಕ್ಕೆ ಇಳಿಕೆಯಾಗಿದೆ.
ರಾಜ್ಯದ ವರದಿ: ಬೆಂಗ ಳೂರು ನಗರ 231, ದಕ್ಷಿಣ ಕನ್ನಡ 87, ಉಡುಪಿ 57, ಮೈಸೂರು 28, ತುಮಕೂರು 24, ಕೊಡಗು 23, ಉತ್ತರಕನ್ನಡ 18, ಬೆಳಗಾವಿ 11, ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ತಲಾ 10, ದಾವಣಗೆರೆ ಹಾಗೂ ಕೋಲಾರದಲ್ಲಿ ತಲಾ 9, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 8, ಕಲಬುರಗಿ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ 3, ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿ 2, ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ತಲಾ 1 ಪ್ರಕರಣ ಸೇರಿ ರಾಜ್ಯದಲ್ಲಿ ಮಂಗಳವಾರ 559 ಜನರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಬಾಗಲಕೋಟೆ, ಗದಗ ಹಾಗೂ ರಾಮನಗರ ಜಿಲ್ಲೆಗಳಲ್ಲಿಂದು ಒಂದೂ ಪ್ರಕರಣ ವರದಿಯಾಗಿಲ್ಲ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29, 62,967ಕ್ಕೆ ಏರಿಕೆಯಾಗಿದೆ. ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆದ 1,034 ಮಂದಿ ಸೇರಿ ಈವರೆಗೆ ಒಟ್ಟು 29,09,656 ಸೋಂಕಿ ತರು ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಿಸದೇ ಇಂದು 12 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 37,529ಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,754ಕ್ಕೆ ಇಳಿಕೆಯಾಗಿದೆ.