ಅರಣ್ಯ ಇಲಾಖೆಗೆ ಉಚಿತವಾಗಿ 300 ಮಾಸ್ಕ್

ಮೈಸೂರು, ಏ.21(ವೈಡಿಎಸ್)- ಕೊರೊನಾ ಸೋಂಕು ತಡೆಗಾಗಿ ಬಳಸುವ ಮಾಸ್ಕ್‍ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅರಣ್ಯ ಇಲಾಖೆಗೆ 300 ಮಾಸ್ಕ್‍ಗಳನ್ನು ನಗರದ ಡಿಪೌಲ್ ಅಪೆರಲ್ಸ್ ಸಂಸ್ಥೆ ಮಂಗಳವಾರ ಉಚಿತವಾಗಿ ವಿತರಿಸಿತು.

ಮೈಸೂರಿನ ಬನ್ನಿಮಂಟಪದ ಕೈಗಾರಿಕಾ ಪ್ರದೇಶದಲ್ಲಿ ರುವ ಡಿಪೌಲ್ ಅಪೆರಲ್ಸ್ ಸಂಸ್ಥೆಯ ನಿರ್ದೇಶಕ ಶಲ್ಬಿ ಟಿ.ಜಾಕೋಬ್ ರಾಮಾಪುರ ಆನೆ ಶಿಬಿರದ ಮಾವುತರಿಗೆ ನೀಡುವಂತೆ ಅರಣ್ಯ ಇಲಾಖೆಗೆ 300 ಮಾಸ್ಕ್‍ಗಳನ್ನು ಹಸ್ತಾಂತರಿಸಿದರು.

ಮೈಸೂರು ಜಿಲ್ಲಾಡಳಿತದ ಅನುಮತಿ ಪಡೆದು ಮಾ.16ರಿಂದ ಮಾಸ್ಕ್ ತಯಾರಿಕೆ ಆರಂಭಿಸಿದ್ದು, 13 ಕೆಲಸಗಾರರು ಸಾಮಾಜಿಕ ಅಂತರ ಕಾಯ್ದು ಕೊಂಡು ನಿತ್ಯ ಗುಣಮಟ್ಟದ 1200 ಮಾಸ್ಕ್‍ಗಳನ್ನು ತಯಾರಿಸುತ್ತಿದ್ದಾರೆ.

ಇನ್ನೆರಡು ದಿನಗಳಲ್ಲಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರಿಗೆ 10 ಸಾವಿರ ಮಾಸ್ಕ್‍ಗಳನ್ನು ವಿತರಿಸಲಾಗುವುದು. ನಂತರದಲ್ಲಿ ಗ್ರಾಮೀಣ ಭಾಗದ ಡೋರ್ನಹಳ್ಳಿ, ಕೆಆರ್‍ಎಸ್, ಬಸ್ತಿಪುರ, ಹುಲಿಕೆರೆ, ಬೆಳವಾಡಿ ನಗುವನಹಳ್ಳಿ ಹಾಗೂ ಆರೋಗ್ಯ ಇಲಾಖೆ, ಎಂಸಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ವಿತರಿಸಲಾಗು ವುದು ಎಂದು ಶಲ್ಬಿ ಟಿ.ಜಾಕೋಬ್ ವಿವರಿಸಿದರು.