ರಾಜ್ಯದಲ್ಲಿ ೩ನೇ ಅಲೆ ಆತಂಕ

ಬೆAಗಳೂರು, ಅ.೨೬(ಕೆಎಂಶಿ)- ಕೋವಿಡ್-೧೯ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಅಲೆಗೆ ಆತಂಕ, ಗಾಬರಿ ಬೇಡ, ಆದರೆ ಮುನ್ನೆಚ್ಚರಿಕಾ ಕ್ರಮ ಅತ್ಯ ವಶ್ಯಕ. ರಾಜ್ಯದಲ್ಲಿ ಈ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸೋಂಕು ತಡೆಯಲು ತಜ್ಞರು ಹಾಗೂ ಅಧಿಕಾರಿಗಳ ಮಾಹಿತಿ ಕೇಳಿದ್ದೇವೆ. ಮಾಹಿತಿ ಬಂದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನಿಯಮಾವಳಿಗಳನ್ನು ಮತ್ತೆ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. ಸಾರ್ವಜನಿಕರು ಸರ್ಕಾರದ ಜೊತೆ ಕೈಜೋಡಿಸಿ ದರೆ ಸೋಂಕುಗಳನ್ನು ತಡೆಯಲು ಸಾಧ್ಯ. ಇಲ್ಲದಿದ್ದರೆ, ಎರಡನೇ ಅಲೆಯ ದುಷ್ಪರಿಣಾಮವೇ ಮರುಕಳಿಸಬಹುದು ಎಂದರು.

ವಿಶ್ವದ ಬಹುತೇಕ ರಾಷ್ಟçಗಳಲ್ಲಿ ಮೂರನೇ ಅಲೆ ಬಂದಿದೆ. ನಾವು ಎಚ್ಚರ ತಪ್ಪಿದರೆ ಮೂರನೇ ಅಲೆ ತಟ್ಟಲಿದೆ. ರಷ್ಯಾದಲ್ಲಿ ಯಾರು ಲಸಿಕೆ ಹಾಕಿಸಿಕೊಂಡಿಲ್ಲವೋ ಅಂತಹವರಲ್ಲಿ ಈ ಸೋಂಕು ಕಂಡು ಬಂದಿದೆ. ಲಸಿಕೆ ಹಾಕಿಸಿಕೊಂಡವರಲ್ಲಿ ಅಂತಹ ದೊಡ್ಡ ಪರಿಣಾಮ ಉಂಟು ಮಾಡಿಲ್ಲ.

ಕೆಲವು ದಿನ ಗಳಿಂದ ರಾಜ್ಯದಲ್ಲಿ ಸೋಂಕು ಪ್ರಮಾಣ ಕಡಿಮೆ ಇದೆಯೆಂದು ನಿರ್ಲಕ್ಷö್ಯ ತೋರುವುದು ಬೇಡ. ಒಂದು ಡೋಸ್ ಲಸಿಕೆ ಪಡೆದ ವರು ಎರಡನೇ ಡೋಸ್ ಅನ್ನೂ ಪಡೆದುಕೊಳ್ಳಿ. ಎರಡು ಡೋಸ್ ಲಸಿಕೆ ಪಡೆದವರ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಇಂತಹ ವೈರಾಣುಗಳನ್ನು ಎದುರಿಸಬಹುದು. ಸೋಂಕಿನ ಹೊಸ ತಳಿ ಮೇಲೆ ಲಸಿಕೆ ಪರಿಣಾಮ ಏನೆಂಬ ಬಗ್ಗೆ ಇದುವರೆಗೆ ಅಧ್ಯಯನ ನಡೆದಿಲ್ಲ. ತಜ್ಞರೊಂದಿಗೆ ಚರ್ಚಿಸಿ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸೋಂಕಿನ ಹೊಸ ತಳಿ ಎವೈ೪.೨ ರಾಜ್ಯದಲ್ಲಿ ಇಬ್ಬರಲ್ಲಿ ಕಂಡುಬAದಿರುವ ಸಂಶಯಗಳಿವೆ. ಈ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಿ ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ. ಕೇಂದ್ರದಿAದ ಮೂರನೇ ಅಲೆ ಬಗ್ಗೆ ಎಚ್ಚರ ವಹಿಸಬೇಕೆಂಬ ಸೂಚನೆ ಇದೆ. ಆದರೆ ನಿರ್ದಿಷ್ಟ ಮಾರ್ಗಸೂಚಿಗಳು ಬಂದಿಲ್ಲ. ಆದರೂ ನಮ್ಮ ಎಚ್ಚರಿಕೆಯನ್ನು ನಾವು ತೆಗೆದುಕೊಳ್ಳುತ್ತೇವೆ. ಮೂರನೇ ಅಲೆ ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯಕ್ಕೆ ಅಪ್ಪಳಿಸಬಹು ದೆಂಬ ಬಗ್ಗೆ ತಜ್ಞರು ಮಾಹಿತಿ ನೀಡಿದ್ದರು. ಆದರೆ ಅದು ಸುಳ್ಳಾಗಿದೆ. ರಾಜ್ಯದಲ್ಲಿ ಶೇಕಡ ೮೦ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಶೇಕಡ ೩೯ ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ, ಇದರಿಂದ ನಮ್ಮವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎಂದರು.