4ನೇ ಅಲೆ ಅಸಂಭವ: ಖ್ಯಾತ ವೈರಸ್ ತಜ್ಞ

ನವದೆಹಲಿ: ದೇಶಾದ್ಯಂತ ಕೋವಿಡ್ ೪ನೇ ಅಲೆ ಭೀತಿ ಆವ ರಿಸಿರುವಂತೆಯೇ ಇದಕ್ಕೆ ತದ್ವಿರುದ್ಧ ಎಂಬAತೆ ದೇಶದಲ್ಲಿ ೪ನೇ ಅಲೆ ಅಸಂಭವ ಎಂದು ಖ್ಯಾತ ವೈರಾಲಜಿಸ್ಟ್ ಹೇಳಿದ್ದಾರೆ.
ಖ್ಯಾತ ವೈರಾಲಜಿಸ್ಟ್ ಮತ್ತು ಮಾಜಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (ಸಿಎಂಸಿ) ವೆಲ್ಲೂರ್‌ನ ಪ್ರೊಫೆಸರ್ ಡಾ.ಟಿ.ಜೇಕಬ್ ಜಾನ್ ಅವರು ಭಾರತದಲ್ಲಿ ಕೋವಿಡ್-೧೯ ನಾಲ್ಕನೇ ಅಲೆ ಸಂಭವನೀಯತೆ ಅತ್ಯಂತ ಕಡಿಮೆ ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯೊAದಿಗೆ ಮಾತನಾಡಿದ ಅವರು ದೇಶದ ಕೆಲವು ರಾಜ್ಯಗಳು ಕೋವಿಡ್-೧೯ ಪ್ರಕರಣಗಳ ಉಲ್ಬಣ ವನ್ನು ಏಕೆ ವರದಿ ಮಾಡುತ್ತಿವೆ ಎಂದು ಕೇಳಿದಾಗ, ಕಳೆದ ೨-೩ ವಾರಗಳಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ಕೋವಿಡ್ ಸಂಖ್ಯೆಯಲ್ಲಿ ಸಣ್ಣ ಹೆಚ್ಚಳ ಕಂಡುಬAದಿದೆ. ಆದರೆ ಹೆಚ್ಚಳವನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಅಲ್ಲಿ ಸೋಂಕಿನಿAದ ಚೇತರಿಸಿಕೊಳ್ಳುತ್ತಿ ರುವವರ ಸಂಖ್ಯೆ ಕೂಡ ಹೆಚ್ಚಿದೆ ಎಂದರು. ೪ನೇ ಅಲೆ ಬಂದರೆ ಅದು ನನಗೆ ಸಂಪೂರ್ಣ ಆಶ್ಚರ್ಯಕರವಾಗಿರುತ್ತದೆ. ಆದ್ದರಿಂದ ನಾನು ಅದರ ಬಗ್ಗೆ ಏನನ್ನೂ ಊಹಿಸಲು ಸಾಧ್ಯವಿಲ್ಲ. ೪ನೇ ಅಲೆಯ ಸಂಭವನೀಯತೆಯು ತೀರಾ ಕಡಿಮೆಯಾಗಿದೆ ಎಂದರು.