ಮೈಸೂರು ಜಿಲ್ಲೆಯಲ್ಲಿ 637 ಮಂದಿಗೆ  ಕೊರೊನಾ, 565 ಮಂದಿ ಡಿಸ್ಚಾರ್ಚ್

ಮೈಸೂರು,ಸೆ.12(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಶನಿವಾರ 637 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ  ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 25,086ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಗುಣಮುಖರಾದ 565 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 17,490 ಸೋಂಕಿತರು ಗುಣಮುಖ ರಾದಂತಾಗಿದೆ. ಈ ಮಧ್ಯೆ 14 ಸೋಂಕಿತರು ಮೃತಪಟ್ಟಿರುವು ದಾಗಿ ಶನಿವಾರದ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದ್ದು, ಒಟ್ಟು ಕೊರೊನಾಗೆ ಬಲಿಯಾದವರ ಸಂಖ್ಯೆ 576ಕ್ಕೆ ಏರಿದೆ. 7,020 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಅವರೆಲ್ಲಾ ಕೋವಿಡ್ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು, ಹೆಲ್ತ್ ಕೇರ್ಸ್, ಕೋವಿಡ್ ಕೇರ್ ಸೆಂಟರ್ಸ್ ಹಾಗೂ ಹೋಂ ಐಸೋಲೇಷನ್‍ನಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ 175, ಬಳ್ಳಾರಿ 366, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 211, ಬೆಂಗಳೂರು ನಗರ 3,552, ಬೀದರ್ 101, ಚಾಮರಾಜನಗರ 60, ಚಿಕ್ಕಬಳ್ಳಾಪುರ 101, ಚಿಕ್ಕಮಗ ಳೂರು 159, ಚಿತ್ರದುರ್ಗ 227, ದಕ್ಷಿಣ ಕನ್ನಡ 401, ದಾವಣ ಗೆರೆ 267, ಧಾರವಾಡ 239, ಗದಗ 49, ಹಾಸನ 324, ಹಾವೇರಿ 213, ಕಲಬುರಗಿ 222, ಕೊಡಗು 27, ಕೋಲಾರ 53, ಕೊಪ್ಪಳ 183, ಮಂಡ್ಯ 193, ಮೈಸೂರು 637, ರಾಯಚೂರು 131, ರಾಮನಗರ 81, ಶಿವಮೊಗ್ಗ 155, ತುಮಕೂರು 304, ಉಡುಪಿ 169, ಉತ್ತರಕನ್ನಡ 130, ವಿಜಯಪುರ 58, ಯಾದಗಿರಿ 151 ಸೇರಿ ಶನಿವಾರ ರಾಜ್ಯದಲ್ಲಿ 9,140 ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4,49,551ಕ್ಕೆ ಏರಿಕೆಯಾಗಿದೆ. ಸೋಂಕಿತರಿ ಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು ಶನಿವಾರ 9,557 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 3,44,556 ಮಂದಿ ಸೋಂಕು ಮುಕ್ತರಾಗಿದ್ದಾರೆ. ಇಂದು ವರದಿಯಾದ 94 ಮಂದಿ ಸಾವು ಸೇರಿ ಈವರೆಗೆ ರಾಜ್ಯದಲ್ಲಿ 7,161 ಸೋಂಕಿ ತರು ಮೃತಪಟ್ಟಿದ್ದಾರೆ. 97,815 ಸಕ್ರಿಯ ಪ್ರಕರಣಗಳಿವೆ.