ಮಂಡ್ಯ ಕಾಂಗ್ರೆಸ್‍ನಿಂದ 7.5 ಲಕ್ಷ ರೂ ದೇಣಿಗೆ

ಮಂಡ್ಯ, ಏ.2(ನಾಗಯ್ಯ)- ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ 7.5 ಲಕ್ಷ ರೂ ದೇಣಿಗೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಇಂದು ಸಲ್ಲಿಸಲಾಯಿತು.

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಮುಖಂಡರು, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ 7.5 ಲಕ್ಷರು ದೇಣಿಗೆಯ ಚೆಕ್‍ನ್ನು ನೀಡಿದರು. ಈ ಸಂದರ್ಭದಲ್ಲಿ ಮಾತ ನಾಡಿದ ಎನ್.ಚಲುವರಾಯಸ್ವಾಮಿ, ಪ್ರಧಾನಿ ಮೋದಿಯವರ ಕರೆಗೆ ದೇಶದ ಜನತೆ ಪಕ್ಷಾತೀತವಾಗಿ ಕೊರೊನಾ ತಡೆಗೆ ಸ್ಪಂದಿಸುತ್ತಿ ದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡ ಕ್ರಮದ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂದು ಹೇಳಿದರು.

ವಿದೇಶ ಮತ್ತು ನಮ್ಮ ದೇಶಕ್ಕೆ ಹೋಲಿಕೆ ಮಾಡಿದಲ್ಲಿ ಕೊರೊನಾ ನಮ್ಮ ದೇಶದಲ್ಲಿ ಅಷ್ಟೇನೂ ರಾಕ್ಷಸ ಪ್ರವೃತ್ತಿಯನ್ನು ತೋರಿಸಿಲ್ಲ, ಗುರುಹಿರಿಯರು ಸಜ್ಜನರು, ಓಡಾಡಿದ ಈ ನೆಲ ನಿಜಕ್ಕೂ ಪುಣ್ಯಭೂಮಿ, ಕೊರೊನಾ ತಡೆಗೆ ಪ್ರಕೃತಿಯ ಕೊಡುಗೆಯೂ ಇದೆ ಎಂದು ಅವರು ಹೇಳಿದರು.

ಶಾಸಕರ ಅನುದಾನವನ್ನು ಬಳಸಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ, ಯಾವುದೇ ಲೋಪವಾಗ ದಂತೆ ಶಾಸಕರ ಅನುದಾನ ಬಳಕೆಯಾಗಬೇಕು. ಈಗಾಗಲೇ ಕೆಪಿಸಿಸಿ ಕೂಡ ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷರು ದೇಣಿಗೆಯನ್ನು ಸರ್ಕಾರಕ್ಕೆ ನೀಡಿದೆ. ಮಂಡ್ಯ ಜಿಲ್ಲೆಯ ಋಣ ನಮ್ಮ ಮೇಲಿರುವುದರಿಂದ 7.5 ಲಕ್ಷ ರೂ. ದೇಣಿಗೆಯನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಸರ್ಕಾರಕ್ಕೆ ಕಾಂಗ್ರೆಸ್ ಮಾಜಿ ಶಾಸಕರಾದ ಎನ್.ಚಲುವರಾಯ ಸ್ವಾಮಿ 3 ಲಕ್ಷ, ನರೇಂದ್ರ ಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇ ಗೌಡ, ಕೆ.ಬಿ.ಚಂದ್ರ ಶೇಖರ್, ಗಣಿಗ ರವಿ ಅವರು ತಲಾ 1 ಲಕ್ಷ ಹಾಗೂ ಮುಖಂಡ ದಿವಾಕರ್ 50.000 ರೂ.ಗಳನ್ನು ದೇಣಿಗೆ ನೀಡಿದರು.