ರಾಜ್ಯದಲ್ಲಿ ಶೇ.80.71ರಷ್ಟು ಶಾಂತಿಯುತ ಮತದಾನ

ಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆಯ 2ನೇ ಹಂತದ ಮತದಾನ ಭಾನು ವಾರ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ರಾಜ್ಯಾದ್ಯಂತ ಶೇ.80.71 ಮತದಾರರು ಹಕ್ಕು ಚಲಾ ಯಿಸಿದ್ದಾರೆ. ಡಿ.22ರಂದು ಮೊದಲ ಹಂತದಲ್ಲಿ ಶೇ.82.13 ಮತದಾನ ಆಗಿತ್ತು. ಎರಡೂ ಹಂತದ ಮತದಾನ ಮುಗಿದಿದ್ದು, ಇದೀಗ ಎಲ್ಲರ ದೃಷ್ಟಿ ಡಿ.30ರಂದು ನಡೆಯುವ ಫಲಿತಾಂಶದ ಮೇಲೆ ನೆಟ್ಟಿದೆ. ಬೆಳಗಾವಿಯ ಒಂದು ಮತಗಟ್ಟೆಯಲ್ಲಿ ಮತ ಪತ್ರ ಬದಲಾಗಿದ್ದರಿಂದ ಮತದಾನವನ್ನು ಡಿ.29ಕ್ಕೆ ಮುಂದೂಡಲಾಗಿದೆ. ರಾಯಚೂರಿನ ಬನ್ನಿಗನೂರು ಮತಗಟ್ಟೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರ ಲಾಗುತ್ತಿದೆ ಎಂಬ ಬಗ್ಗೆ ವಾಗ್ವಾದ ನಡೆದಿದ್ದರಿಂದ ಅರ್ಧ ಗಂಟೆ ಮತದಾನ ಸ್ಥಗಿತಗೊಂಡಿತು. ಕೆಲವೆಡೆ ಸಣ್ಣ ಪುಟ್ಟ ವಾಗ್ವಾದ, ಹೊಯ್ ಕೈ ಹೊರತಾಗಿ ಮತದಾನ ಶಾಂತಿ ಯುತವಾಗಿತ್ತು. ರಾಜ್ಯಾದ್ಯಂತ 5,728 ಗ್ರಾಪಂಗಳ 91,339 ಸ್ಥಾನಗಳಿಗಾಗಿ 2,22,814 ಮಂದಿ ಅಭ್ಯರ್ಥಿಗಳು ಕಣದಲ್ಲಿ ದ್ದರು. 8,076 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎರಡು ಹಂತಗಳಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ತಾಲೂಕುಗಳು: 109, ಪಂಚಾಯಿತಿಗಳು: 2709, ಒಟ್ಟು ಸ್ಥಾನಗಳು: 43,291, ಸ್ಪರ್ಧೆ ನಡೆದಿಲ್ಲ: 216, ಅವಿರೋಧ ಆಯ್ಕೆ: 3,697, ಚುನಾವಣಾ ಸ್ಥಾನ: 39,378, ಅಭ್ಯರ್ಥಿಗಳು: 1,05,431