ರಸ್ತೆಗೆ ಅಪಾರ ಪ್ರಮಾಣದ ನೀರು ಹರಿಸಿದ ಉದ್ಯಮಿ

ಮೈಸೂರು,ಅ.19(ಎಸ್‍ಬಿಡಿ)- ಮೈಸೂ ರಿನ ಅಬ್ದುಲ್ ಕಲಾಮ್ ಆಜಾದ್ ವೃತ್ತ (ಹೈವೇ ಸರ್ಕಲ್)ದಲ್ಲಿ ಮಂಗಳವಾರ ಅಪಾರ ಪ್ರಮಾಣದ ನೀರು ಹರಿದು, ರಾಡಿಯಾಗಿತ್ತು.

ನೆಲ್ಸನ್ ಮಂಡೇಲಾ ರಸ್ತೆಯಲ್ಲಿರುವ ರೆಸ್ಟೋರೆಂಟ್‍ವೊಂದರ ನೀರಿನ ಟ್ಯಾಂಕ್ ಶುಚಿಗೊಳಿಸುವ ಸಂದರ್ಭದಲ್ಲಿ ಅದರ ಲ್ಲಿದ್ದ ಅಪಾರ ಪ್ರಮಾಣದ ನೀರನ್ನು ರಸ್ತೆಗೆ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ. ನೀರು ಪುತ್ಥಳಿ ಪಾರ್ಕ್‍ವರೆಗೂ ರಸ್ತೆ ಬದಿ ಯಲ್ಲಿ ಹರಿದು ಬಂದು, ಹೈವೇ ಸರ್ಕಲ್ ಸುತ್ತಲೂ ವ್ಯಾಪಿಸಿತ್ತು. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ವಾಹನಗಳ ಸಂಚಾ ರಕ್ಕೂ ಅಡ್ಡಿಯಾಗಿತ್ತು. ದೊಡ್ಡ ವಾಹನಗಳ ಹಾದು ಹೋದಾಗ ಪಕ್ಕದಲ್ಲಿದ್ದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ನೀರು ಚಿಮ್ಮುತ್ತಿತ್ತು.

ವೃತ್ತದ ಸುತ್ತಲೂ ವ್ಯಾಪಿಸಿದ್ದಲ್ಲದೆ ತಗ್ಗು ಪ್ರದೇಶದ ಜೋಡಿ ತೆಂಗಿನ ಮರ ಸ್ಮಶಾನ ರಸ್ತೆ ಹಾಗೂ ಜಾವಾ ಫ್ಯಾಕ್ಟರಿ ರಸ್ತೆಗೂ ಹರಿದಿತ್ತು. ವೃತ್ತದ ಪಶ್ಚಿಮ ಭಾಗದಲ್ಲಿ ಯಾವುದೋ ಕಾಮಗಾರಿಗೆ ಅಗೆದಿದ್ದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ, ನಿರ್ಮಾಣವಾಗಿದ್ದ ಹೊಂಡಕ್ಕೆ ನೀರು ತುಂಬಿ ಕೆಸರು ಗದ್ದೆಯಂತಾಗಿತ್ತು. ದ್ವಿಚಕ್ರ ವಾಹನಗಳ ಚಕ್ರಗಳು ಹೂತುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಗಂಟೆಗಳ ಕಾಲ ರಸ್ತೆ ಯಲ್ಲಿ ನೀರು ಹರಿದು ರಾಡಿಯಾಗಿ ದ್ದರಿಂದ ಸಾರ್ವಜನಿಕರು ಶಪಿಸಿದರು.

ಟ್ಯಾಂಕ್ ಶುಚಿಗೊಳಿ ಸುವಾಗ ಅದರಲ್ಲಿರುವ ನೀರನ್ನು ಖಾಲಿ ಮಾಡ ಲೇಬೇಕು. ಆದರೆ ಹೀಗೆ ಸಾರ್ವಜನಿಕ ರಸ್ತೆಗೆ ಹರಿಬಿಡುವುದು ಸರಿ ಯಲ್ಲ. ಟೆರೇಸ್‍ನಿಂದ ಮಳೆ ನೀರು ಚರಂ ಡಿಗೆ ಸಂಪರ್ಕ ಕಲ್ಪಿಸಿರುವ ಪೈಪ್ ಮೂಲಕ ಅಲ್ಪ ಪ್ರಮಾಣದಲ್ಲೇ ನೀರನ್ನು ಹರಿಸಬೇಕು. ಹೀಗೆ ಉಡಾಫೆಯಿಂದ ಸಾವಿರಾರು ಲೀಟರ್ ನೀರನ್ನು ಒಮ್ಮೆಲೆ ಟ್ಯಾಂಕ್‍ನಿಂದ ಹೊರ ಹಾಕುವುದು ಅಕ್ಷಮ್ಯ. ಈ ಬಗ್ಗೆ ಪ್ರತಿ ಯೊಬ್ಬರೂ ಎಚ್ಚರಿಕೆ ವಹಿಸಬೇಕು. ಸ್ವಚ್ಛ ಗೊಳಿಸುವ ನೆಪದಲ್ಲಿ ಅಪಾರ ಪ್ರಮಾಣದ ನೀರು ಪೋಲು ಮಾಡುವುದು ಹಾಗೂ ಸಾರ್ವಜನಿಕ ಸ್ಥಳವನ್ನು ರಾಡಿಯಾಗಿ ಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನಗರ ಪಾಲಿಕೆ ಸೂಚನೆ ನೀಡಬೇಕು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.