ಕೋವಿಡ್-19  ಅರಿವು ಮೂಡಿಸಲು ಧಾರ್ಮಿಕ, ರಾಜಕೀಯ ಮುಖಂಡರ ಮೊರೆಗೆ ಕೇಂದ್ರ ಸೂಚನೆ

ನವದೆಹಲಿ, ಮೇ 17- ನಗರಸಭೆ, ಮಹಾನಗರಪಾಲಿಕೆ ಸೇರಿದಂತೆ ದೇಶದ 30 ಪ್ರದೇಶಗಳಲ್ಲಿ ವಾಸಿಸುತ್ತಿ ರುವ ಬಡತನ ರೇಖೆಗಿಂತ ಕೆಳಗಿರು ವವರಲ್ಲಿ ಕೋವಿಡ್-19 ಕುರಿತಂತೆ ಅರಿವು ಮೂಡಿಸಲು ಧಾರ್ಮಿಕ ಮತ್ತು ರಾಜಕೀಯ ಮುಖಂಡರ ನೆರವು ಪಡೆ ಯುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ಸಂಬಂಧ ಆರೋಗ್ಯ ಸಚಿವಾ ಲಯ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಸ್ಥಳೀಯ ರಾಜ ಕೀಯ ಹಾಗೂ ಧಾರ್ಮಿಕ ಮುಖಂ ಡರ ಮಾತುಗಳ ಮೇಲೆ ಈ ಜನರಲ್ಲಿ ವಿಶ್ವಾಸ ಹೆಚ್ಚು. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಂತಹ ಮುಖಂಡರು ಈ ಸಮುದಾಯಕ್ಕೆ ಮನದಟ್ಟು ಮಾಡಬಲ್ಲರು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಬಡವರೇ ವಾಸಿಸುವ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ಅಷ್ಟಾಗಿ ಇರು ವುದಿಲ್ಲ. ಚಿಕ್ಕ ಜಾಗದಲ್ಲಿ ಹೆಚ್ಚು ಜನರು ಜೀವನ ಸಾಗಿಸುತ್ತಿರುವ ಕಾರಣ, ಕೋವಿಡ್-19 ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವುದು, ಐಸೋಲೇಷನ್‍ಗೆ ಒಳಪಡಿಸುವುದು ಸವಾಲಿನ ಕೆಲಸವಾಗುತ್ತದೆ ಎಂದು ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ. ಇಂತಹ ಪ್ರದೇಶಗಳಿಗೆ ಒಬ್ಬರಂತೆ ಮುಖಂಡನನ್ನು ಗುರುತಿಸಬೇಕು. ‘ಇನ್ಸಿಡೆಂಟ್ ಕಮಾಂಡರ್’ ಎಂದು ಕರೆಯಲಾಗುವ ಈ ವ್ಯಕ್ತಿ, ಜನರಲ್ಲಿ ಅರಿವು ಮೂಡಿಸುವ ಕಾರ್ಯದ ಕ್ರಿಯಾಯೋಜನೆ, ಅದರ ಅನುಷ್ಠಾನ, ಹಣಕಾಸು ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳಬೇಕು. ಯೋಜನೆಯ ಅನುಷ್ಠಾನ ಕುರಿತಂತೆ ಈ ‘ಇನ್ಸಿಡೆಂಟ್ ಕಮಾಂಡರ್’ ನಗರಸಭೆ/ಪಾಲಿಕೆಯ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.