ಅರಮನೆ ಆವರಣದಲ್ಲಿ ಮೊಳಗಿದ ಪೊಲೀಸ್ ಬ್ಯಾಂಡ್

ಮೈಸೂರು, ಅ.22(ಎಸ್‍ಪಿಎನ್)- ‘ಕಾಯೌ ಶ್ರೀ ಗೌರಿ’ ಹಾಗೂ `ಶ್ರೀ ಮಹಾ ಗಣಪತಿಂ’ ಮತ್ತು ಟೋನಿ ಮ್ಯಾಥ್ಯೂ ಸಂಯೋಜನೆಯ ಫೈನಲ್ ಕೌಂಟ್‍ಡೌನ್’ ನುಡಿಸಿದ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ಪೊಲೀಸ್ ಸಮೂಹ ವಾದ್ಯಮೇಳ ಕಲಾರಸಿಕರÀ ಮನಸೂರೆಗೊಂಡಿತು.

ದಸರಾ ಮಹೋತ್ಸವದಂಗವಾಗಿ ಅಂಬಾ ವಿಲಾಸ ಅರಮನೆ ಆವರಣದಲ್ಲಿ ಗುರು ವಾರ ಆರನೇ ದಿನದÀ ಕಾರ್ಯಕ್ರಮದಲ್ಲಿ ಸಮೂಹ ವಾದ್ಯಮೇಳದಲ್ಲಿ ಶಿಸ್ತುಬದ್ಧವಾಗಿ ನುಡಿಸಿದ ಪೆÇಲೀಸ್ ವಾದ್ಯವೃಂದವು ಜನಮೆಚ್ಚುಗೆ ಗಳಿಸಿತು. ನಂತರ ಇಮ್ಯಾ ನುಯೆಲ್ ಫ್ರಾನ್ಸಿಸ್ ಮತ್ತು ಟೋನಿ ಮ್ಯಾಥ್ಯೂ ತಂಡದಿಂದ ವಯೊಲಿನ್, ಪಿಯಾನೊ ವಾದನ  ಮೆಚ್ಚುಗೆ ಗಳಿಸಿತು.

ಕರ್ನಾಟಕ ಶಾಸ್ತೀಯ ಸಂಗೀತದಲ್ಲಿ ಆದಿಶಂಕರಾಚಾರ್ಯರು ರಚಿಸಿದ `ಐಗಿರಿ ನಂದಿನಿ’ ಗೀತೆಯನ್ನು ಆದಿತಾಳ ರಾಗದಲ್ಲಿ ನುಡಿಸಿದರು. `ಕಣಕಣದೇ ಶಾರದೇ’, `ಭಾಗ್ಯದ ಲಕ್ಷ್ಮಿ ಬಾರಮ್ಮ’ ಸಿನಿಮಾ ಗೀತೆ ನುಡಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಪಾಶ್ಚಿಮಾತ್ಯ ಸಂಗೀತದಲ್ಲಿ ಕ್ರಿಷ್ಟೊಪರ್ ಫ್ರಾನ್ಸಿಸ್ ಸಂಯೋಜನೆಯ ಸೆರನಡ್ ಗೀತೆ, ಬಿಥೊವೆನ್ಸ್ ಪಿಯಾನೋ ಸೋಲೊ, ಜೈಹೋ, ಟೋನಿ ಮ್ಯಾಥ್ಯೂ ಸಂಯೋಜನೆಯ ಬಿಲಿವರ್ ಹಾಗೂ ಲೇ ಆನ್ ಯುವರ್ ಲವ್ ಗೀತೆಗಳನ್ನು ನುಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ ಹಲವು ಕಿರುತೆರೆ ಶೀರ್ಷಿಕೆ ಗೀತೆಗಳನ್ನು ಹಾಡಿ ಮನೆ ಮಾತಾಗಿರುವ ಗಾಯಕಿ ವಾರಿಜ ವೇಣು ಗೋಪಾಲ್ ಅವರ ಸಂಗೀತ ಗಾಯನ ಪ್ರೇಕ್ಷಕರನ್ನು ಹರುಷದಲ್ಲಿ ತೇಲಿಸಿದವು. ಪಕ್ಕವಾದ್ಯದಲ್ಲಿ ಮೃದಂಗ ಬಿ.ಸಿ.ಮಂಜು ನಾಥ್, ಲಯ ವಾದ್ಯ ಮಮತಾ, ಕಿರಣ, ವೈಲನ್ ಮತ್ತೂರು ಶ್ರೀನಿಧಿ ಸಾಥ್ ನೀಡಿ ದರು. ಇದೇ ವೇಳೆ ಕರ್ನಾಟಿಕ್ ಹಾಗೂ ಆಂಗ್ಲ ಪೊಲೀಸ್ ವಾದ್ಯವೃಂದವರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾ ಪಂಚಾಯತ್ ಸಿಇಒ ಡಿ.ಭಾರತಿ ಪ್ರಮಾಣಪತ್ರ ನೀಡಿ ಗೌರವಿಸಿದರು.