‘ಅರಳು ಮರಳು-ಮರಳಿ ಅರಳು’ ಸಾಂತ್ವನ, ಸನ್ಮಾನ, ಸಂಗೀತ ವಿಶೇಷ ಕಾರ್ಯಕ್ರಮ

ಮೈಸೂರು,ಡಿ.18(ಎಂಕೆ)- ಸುಂದರ ಸಂಜೆ ಯಲ್ಲಿ ಮರಳಿ-ಅರಳಿದ ಹಿರಿಯ ಜೀವಗಳು, ಸಂಗೀತ ಸುಧೆಗೆ ಮಾರುಹೋದರು….!
ನಗರದ ಜೆ.ಕೆ.ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಮೃತ ಮಹೋ ತ್ಸವ ಸಭಾಂಗಣ ದಲ್ಲಿ ಲಾಯಲ್ ವಲ್ರ್ಡ್ ಆಯೋಜಿಸಿದ್ದ ‘ಅರಳು ಮರಳು-ಮರಳಿ ಅರಳು’ ಸಾಂತ್ವನ, ಸನ್ಮಾನ, ಸಂವಾದ ಮತ್ತು ಸಂಗೀತ ವನ್ನೊಳಗೊಂಡ ‘ಸ್ವರಾಂಜಲಿ’ ಕಾರ್ಯಕ್ರಮದಲ್ಲಿ 20 ಮಂದಿ ಗಾಯಕರು, 30 ಮಂದಿ ಸಂಗೀತ ವಾದ್ಯಗಾರ ಹಾಗೂ ಮಕ್ಕಳ ನೃತ್ಯ ನೋಡಗರ ಕಣ್ಮನ ಸೆಳೆಯಿತು.
ಗಾಯಕರಾದ ಡಾ.ಲಾವಣ್ಯ ಶೆಣೈ, ಡಾ. ಎಂ.ಎನ್.ರಘುವೀರ್, ಮೀರಾ ಶ್ರೀಕಾಂತ್, ಭುವನೇಶ್ವರಿ ವೆಂಕಟೇಶ್, ಎಂ.ಎಸ್. ಬಾಲಾಜಿ ಸೇರಿದಂತೆ 20 ಮಂದಿ ಗಾಯಕರು ‘ತೆರೆದಿದೆ ಮನೆ ಓ ಬಾ ಅತಿಥಿ’, ‘ಜೀವ ವೀಣೆ’, ‘ಓಂ ಬ್ರಹ್ಮಾ ನಂದ ಓಂಕಾರ’, ‘ಬಣ್ಣ ನನ್ನ ಒಲವಿನ ಬಣ್ಣ’, ‘ನೀ ಬಂದು ನಿಂತಾಗ’ ಸೇರಿದಂತೆ 28 ಕನ್ನಡ ಮತ್ತು ಹಿಂದಿ ಚಿತ್ರ ಗೀತೆಗಳನ್ನು ಹಾಡಿ ಎಲ್ಲರ ಮನಗೆದ್ದರು. ಹಾಡಿ ತಕ್ಕಂತೆ ವಾದ್ಯಗಾರರು ತಮ್ಮ ಕೈಚಳಕ ತೋರಿ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದರು.

ನಿಷ್ಕಾರಣ ಪ್ರೀತಿ, ಸತ್ಕರಣ ಮಮತೆ: ಕಾರ್ಯ ಕ್ರಮವನ್ನು ಉದ್ಘಾಟಿಸಿದ ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ನಿಷ್ಕಾರಣ ಪ್ರೀತಿ, ಸತ್ಕರಣ ಮಮತೆ ಯನ್ನು ತಂದೆ-ತಾಯಂದಿರಲ್ಲಿ ನೋಡಲು ಸಾಧ್ಯ. ಪ್ರೀತಿ ಯಾವಾಗಲೂ ನಿಷ್ಕಾರಣವಾಗಿರಬೇಕೇ ಹೊರತು ಸ್ವಾರ್ಥಕ್ಕಾಗಿರಬಾರದು. ಮನುಷ್ಯ ನಾನು ಸಂತೋಷವಾಗಿರಬೇಕು ಎಂದು ನಿರ್ಧ ರಿಸಿದರೆ ಸಂತೋಷಪಡಲು ಮಾರ್ಗಗಳು ಸಾಕಷ್ಟಿವೆ ಎಂದರು. ಮನುಷ್ಯನಿಗೆ ತನ್ನ ಎಲ್ಲಾ ವಯಸ್ಸಿ ನಲ್ಲೂ ಒಂದು ಸೌಂದರ್ಯವಿರುತ್ತದೆ. ಆದರೆ ಅದನ್ನು ಮರೆತು ಯೌವನದಲ್ಲಿದ್ದಾಗ ಮಾತ್ರ ನಾವು ಸೌಂದರ್ಯವಾಗಿರುತ್ತೇವೆ ಎಂಬುದು ತಪ್ಪು ತಿಳುವಳಿಕೆಯಾಗಿದೆ. ಜಗತ್ತಿನಲ್ಲಿರುವ ಕಲೆ ಗಳನ್ನು ನೋಡಲು ಕಣ್ಣು ತೆರೆದರೆ ಸಾಲದು ನೋಡು ವುದನ್ನು, ನೋಡುವ ಬಗೆಯನ್ನು ಕಲಿಯಬೇಕು. ಎಲ್ಲಾ ವಯಸ್ಸಿನಲ್ಲೂ ನಾವು ಆರೋಗ್ಯವಾಗಿ ದ್ದೇವೆ, ನಮ್ಮಿಂದ ಸಾಧ್ಯ ಎಂದುಕೊಂಡರೆ ಹಿಂಜರಿಕೆ ಯಾಗುವುದಿಲ್ಲ ಎಂದು ತಿಳಿಹೇಳಿದರು.

ಇದೇ ವೇಳೆ 10 ಮಂದಿ ಹಿರಿಯ ನಾಗರಿ ಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಹೆಚ್.ಎನ್.ದಿನೇಶ್, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್.ರವೀಶ್, ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಲಾವಣ್ಯ ಶೆಣೈ, ಸಂಗೀತ ಶಿಕ್ಷಕಿ ಮೀರಾ ಶ್ರೀಕಾಂತ್, ಹೆಚ್.ಪಿ.ಮಧು ಸೂದನ್, ಸುಮಾ ರಾಜಕುಮಾರ್, ದಿವ್ಯಾ ಕೇಶವನ್ ಮತ್ತಿತರರು ಉಪಸ್ಥಿತರಿದ್ದರು.