ಕಠಿಣ ಕಫ್ರ್ಯೂ: ಮಾರುಕಟ್ಟೆಗಳಲ್ಲಿ ಗ್ರಾಹಕರ ಜಾತ್ರೆ

ಮೈಸೂರು,ಏ.26(ಎಂಕೆ)- ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತೆ ಕಠಿಣ ಕಫ್ರ್ಯೂ ಘೋಷಣೆ ಮಾಡುತ್ತಿದ್ದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮೈಸೂರಿನ ವಿವಿಧ ಮಾರುಕಟ್ಟೆಗಳಿಗೆ ಸೋಮವಾರ ಸಂಜೆ ಜನಸಾಗರವೇ ಹರಿದುಬಂದಿತು.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬೆರ ಳಣಿಕೆಯಷ್ಟು ಜನರು ಕಾಣುತ್ತಿದ್ದ ದೇವ ರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಎಂಜಿ ರಸ್ತೆ ಮಾರುಕಟ್ಟೆ, ಮೀನಾ ಬಜಾರ್ ಇನ್ನಿತರೆ ಮಾರುಕಟ್ಟೆ ಗಳು, ಕಫ್ರ್ಯೂ ಘೋಷಣೆ ಬಳಿಕ ಜನ ಜಂಗುಳಿಯಿಂದ ತುಂಬಿ ತುಳುಕಿದವು.
14 ದಿನಗಳ ಕಫ್ರ್ಯೂ ಅವಧಿಗಾಗು ವಷ್ಟು ಹಣ್ಣು-ತರಕಾರಿ, ದಿನಸಿ ಪದಾರ್ಥ ಗಳನ್ನು ಕೊಂಡುಕೊಳ್ಳಲು ಮುಗಿಬಿದ್ದರು. ಸಾಮಾಜಿಕ ಅಂತರ ಎಂಬುದನ್ನು ಮರೆತು ಅಗತ್ಯ ಪದಾರ್ಥಗಳನ್ನು ಕೊಳ್ಳಲು ಪೈಪೋಟಿ ನಡೆಸಿದರು. ಸ್ಕೂಟರ್, ಬೈಕ್, ಕಾರು, ಗೂಡ್ಸ್ ಆಟೋಗಳಲ್ಲಿಯೂ ತಮಗೆ ಬೇಕಾ ಗುವಷ್ಟು ವಸ್ತುಗಳನ್ನು ಕೊಂಡೊಯ್ದರು.

ಟ್ರಾಫಿಕ್ ಜಾಂ: ಏಕಾಏಕಿ ಮೈಸೂರಿನ ಎಲ್ಲಾ ಬಡಾವಣೆಗಳಿಂದ ಅಗತ್ಯ ವಸ್ತುಗಳಿ ಗಾಗಿ ಮಾರುಕಟ್ಟೆಗಳಿಗೆ ಜನರು ಧಾವಿ ಸುತ್ತಿದ್ದಂತೆ ಟ್ರಾಫಿಕ್ ಜಾಂ ಹೆಚ್ಚಾಗ ತೊಡ ಗಿತು. ಶಿವರಾಂಪೇಟೆ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ ಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಯುಂಟಾಯಿತು. ಪಾದಚಾರಿಗಳು ರಸ್ತೆ ದಾಟುವುದಕ್ಕೂ ಪರದಾಡುವಂತಾಯಿತು.