ಮೈಸೂರಲ್ಲಿ ಬೆಳಗಲಿವೆ 80 ಸಾವಿರ ಎಲ್‍ಇಡಿ ಬಲ್ಬ್

ಮೈಸೂರು, ಜ.5(ಆರ್‍ಕೆ)- ಮೈಸೂರು ನಗರದಲ್ಲಿ 80,000 ಎಲ್‍ಇಡಿ ಬಲ್ಬ್‍ಗಳು ಬೆಳಗಲಿವೆ. ಹೊರವರ್ತುಲ ರಸ್ತೆಯ 2300 ಸೇರಿದಂತೆ ಮೈಸೂರಿನ ಬೀದಿ ಕಂಬಗಳಿಗೆ 80 ಸಾವಿರ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಿ 7 ವರ್ಷಗಳವರೆಗೆ ನಿರ್ವ ಹಿಸುವ 108 ಕೋಟಿ ರೂ. ವೆಚ್ಚದ ಯೋಜನೆ ಅನು ಷ್ಠಾನಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಅರ್ಹ ಕಂಪನಿಗಳಿಂದ 2020ರ ಡಿಸೆಂಬರ್ 19 ರಂದು ಗ್ಲೋಬಲ್ ಟೆಂಡರ್ ಆಹ್ವಾನಿಸಿದೆ.

ಟೆಂಡರ್‍ಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾ ವಕಾಶ ನೀಡಲಾಗಿದ್ದು, 2021ರ ಜನವರಿ 20 ರಂದು ಟೆಂಡರ್ ತೆರೆದು ಅರ್ಹವೆನಿಸಿದ ಸಂಸ್ಥೆಗೆ ಕಾಮ ಗಾರಿ ವಹಿಸಲಾಗುವುದು. ಷರತ್ತಿನಂತೆ 8 ತಿಂಗಳೊಳ ಗಾಗಿ ಎಲ್‍ಇಡಿ ಬಲ್ಬ್ ಅಳವಡಿಸಬೇಕಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ. ವಿದ್ಯುತ್ ಶುಲ್ಕವನ್ನು ಕಡಿತಗೊಳಿ ಸಲು ಸರ್ಕಾರ 2015-16ರಲ್ಲಿ ಟ್ಯೂಬ್ ಲೈಟ್ಸ್, ಹೈ ಫ್ರೆಷರ್ ಸೋಡಿಯಂ, ಮಕ್ರ್ಯೂರಿ ವೇಪರ್, ಹಾಲೋಜೆನ್ ನಂತಹ ಸಾಂಪ್ರದಾಯಿಕ ದೀಪಗಳ ಬದಲಾಗಿ ಎಲ್‍ಇಡಿ ಬಲ್ಬ್‍ಗಳನ್ನು ಬೀದಿದೀಪಕ್ಕೆ ಬಳಸುವಂತೆ ಪ್ರಸ್ತಾಪಿಸಿತ್ತು.

ಮೈಸೂರು ನಗರದಲ್ಲಿರುವ 20,000 ಕಂಬಗಳ 80,000 ಬೀದಿ ದೀಪಗಳ ನಿರ್ವಹಣೆ ಹಾಗೂ ವಿದ್ಯುತ್ ಶುಲ್ಕಕ್ಕೆ ಪ್ರತೀ ವರ್ಷ ಸುಮಾರು 12ರಿಂದ 15 ಕೋಟಿ ರೂ. ವೆಚ್ಚವಾಗುತ್ತಿತ್ತು. ಎಲ್‍ಇಡಿ ಬಲ್ಬ್ ಅಳವಡಿಸಿದ ಮೇಲೆ ಉಳಿತಾಯವಾಗುವ ವಿದ್ಯುತ್ ಶುಲ್ಕದ ಹಣವನ್ನು ಮರುಪಾವತಿಸಲಾಗುತ್ತದೆ ಎಂದೂ ಗುರುದತ್ ಹೆಗಡೆ ತಿಳಿಸಿದರು.

ಪೈಲಟ್ ಪ್ರಾಜೆಕ್ಟ್: ಸ್ವಚ್ಛ ನಗರಿ ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಬೀದಿದೀಪಗಳಿಗೆ ಎಲ್‍ಇಡಿ ಬಲ್ಬ್ ಗಳನ್ನು ಅಳವಡಿಸುತ್ತಿರುವುದು ಸ್ಮಾರ್ಟ್‍ಸಿಟಿಗೆ ಆಯ್ಕೆ ಯಾಗದಿರುವ ನಗರಗಳಲ್ಲಿ ರಾಜ್ಯದಲ್ಲೇ ಮೈಸೂರು ಮೊದಲ ನಗರವಾಗಿದೆ. ಪೈಲಟ್ ಪ್ರಾಜೆಕ್ಟ್ ಆಗಿ ಈ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿದೆ. ಆಯೂಬ್ ಖಾನ್, ಆರೀಫ್ ಹುಸೇನ್ ಸೇರಿದಂತೆ ಮಾಜಿ ಮೇಯರ್‍ಗಳ ನಿಯೋಗವು ಬೆಂಗಳೂರಿ£