ವಿಶ್ವೇಶತೀರ್ಥ ಶ್ರೀಗಳ ವಿರುದ್ಧ ಹಂಸಲೇಖ ನಿಂದನೆ ಮೈಸೂರಲ್ಲಿ ಬ್ರಾಹ್ಮಣ ಸಂಘಟನೆಗಳ ಪ್ರತಿಭಟನೆ

ಹಂಸಲೇಖ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಗೆ ದೂರು
ಕ್ಷಮೆ ಕೇಳದಿದ್ದರೆ ಹಂಸಲೇಖರ ಮನೆ ಮುಂದೆ ಪ್ರತಿಭಟನೆಯ ಎಚ್ಚರಿಕೆ

ಮೈಸೂರು, ನ.೧೮(ಆರ್‌ಕೆಬಿ)- ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಮೈಸೂರಿನ ವಿವಿಧ ಬ್ರಾಹ್ಮಣ ಸಂಘಟನೆಗಳು ಗುರುವಾರ ಮೈಸೂರಿನ ಟಿ.ಕೆ.ಲೇಔಟ್‌ನಲ್ಲಿರುವ ಕೃಷ್ಣಧಾಮದ ಎದುರು ಪ್ರತಿಭಟನೆ ನಡೆಸಿ, ಹಂಸಲೇಖ ವಿರುದ್ಧ ಘೋಷಣೆಗಳನ್ನು ಕೂಗಿದವು. ಅವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದವು.

ಬ್ರಾಹ್ಮಣ ಸಂಘ, ಬ್ರಾಹ್ಮಣ ಯುವ ವೇದಿಕೆ, ಶ್ರೀ ಕೃಷ್ಣ ಮಿತ್ರ ಮಂಡಳಿ, ಶ್ರೀಕೃಷ್ಣ ಟ್ರಸ್ಟ್, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಂಘ ಸೇರಿದಂತೆ ವಿವಿಧ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಸಂತ, ಸಮಗ್ರ ಹಿಂದೂ ಸಮಾ ಜದ ಹಿತಚಿಂತಕರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬಗ್ಗೆ ಅವಹೇಳನಕಾರಿ ಯಾಗಿ ಹಂಸಲೇಖ ನಿಂದಿಸಿದ್ದಾರೆ. ಅವರನ್ನು ತಕ್ಷಣ ಬಂಧಿಸುವAತೆ ಒತ್ತಾಯಿಸಿ, ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಂಸಲೇಖ ಪೇಜಾವರ ಶ್ರೀಗಳನ್ನು ನಿಂದಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆ, ಬಿಳಿಗಿರಿಯ ರಂಗನಾಥಸ್ವಾಮಿ ಪೂಜಾ ಕೈಂಕರ್ಯದ ಕುರಿತು ಹಿಂದೂ ಸಂಪ್ರದಾಯದ ಅವಹೇಳನ ಮಾಡಿದ್ದಾರೆ ಎಂದು ಖಂಡಿಸಿದರು. ಹಂಸಲೇಖ ಮೈಸೂರಿಗೆ ಆಗಮಿಸಿ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳದಿ ದ್ದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕೆಡುವ ಸಂಭವವಿರುತ್ತದೆ. ಪೊಲೀಸರು ಹಂಸಲೇಖರನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿ ಸಿದರು. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಳ ಅಧ್ಯಕ್ಷ ರವಿಶಾಸ್ತಿç ಮಾತನಾಡಿ, ಜನ ಸಮೂಹದ ನಡುವೆ ಗುರುಗಳನ್ನು ಹಾಗೂ ಆಚ ರಣೆಗಳನ್ನು ನಿಂದಿಸಿರುವ ಹಂಸಲೇಖ, ಕೋಣೆ ಯೊಂದರಲ್ಲಿ ನಿಂತು ವಿಡಿಯೋ ಮಾಡಿ ಕ್ಷಮೆ ಯಾಚಿಸುವುದು ಸರಿಯಲ್ಲ. ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿರುವ ಹಂಸಲೇಖ ಅವರು ಖಾಸಗಿ ವಾಹಿನಿಯಲ್ಲಿ ಮಹಾಗುರುಗಳು ಎಂದು ಸ್ವಯಂಕೃತ ಪದ ಬಳಸಬಾರದು. ಅಸಂಖ್ಯಾತ ಹಿಂದೂಗಳ ಮನಸ್ಸಿಗೆ ಘಾಸಿ ಮಾಡಿರುವ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಇಳೈ ಆಳ್ವಾರ್ ಸ್ವಾಮೀಜಿ, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ್‌ರಾವ್, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತಿç, ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಳದ ಗೌರವಾಧ್ಯಕ್ಷ ಎಂ.ಕೆ.ಪುರಾಣ ಕ್, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಸುಪ್ರಭಾ, ವಿಪ್ರ ಜಾಗೃತಿ ವೇದಿಕೆಯ ರಮೇಶ್, ಮುಳ್ಳೂರು ಸುರೇಶ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ರಾಕೇಶ್ ಭಟ್, ವಿಕಾಸ್ ಶಾಸ್ತಿç, ವಿಜಯ್ ಕುಮಾರ್, ಪ್ರಶಾಂತ್, ಸುಚೀಂದ್ರ, ಚಕ್ರಪಾಣ , ಬಾಲಕೃಷ್ಣ, ನಾಗಶ್ರೀ, ವಿಘ್ನೇಶ್ವರ್ ಭಟ್, ಸುದರ್ಶನ್, ಮಂಜುನಾಥ್ ಇನ್ನಿತರರು ಭಾಗವಹಿಸಿದ್ದರು.