ವಿವಿಗಳಲ್ಲಿ ಸಿಬ್ಬಂದಿ ನೇಮಕಾತಿಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಮೈಸೂರು: ಕುಲಪತಿ ಗಳ ನೇಮಕಾತಿ, ಬೋಧಕ ಮತ್ತು ಬೋಧಕೇ ತರ ಸಿಬ್ಬಂದಿ ನೇಮಕಾತಿ ಹಾಗೂ ವಿಶ್ವವಿದ್ಯಾ ನಿಲಯಗಳಲ್ಲಿ ನಡೆದ ಭ್ರಷ್ಟಾಚಾರದ ತನಿಖೆಗೆ ಒತ್ತಾಯಿಸಿ ಎಬಿವಿಪಿಯ ನೂರಾರು ಕಾರ್ಯ ಕರ್ತರು ಬುಧವಾರ ಮೈಸೂರಿನ ಜಿಲ್ಲಾಧಿ ಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ವಿವಿಗಳಲ್ಲಿ ಸಿಬ್ಬಂದಿಗಳೇ ಇಲ್ಲ. ಕರ್ನಾಟಕ ವಿವಿಗಳಲ್ಲಿ 1700 ಬೋಧಕ ಮತ್ತು 4202 ಬೋಧಕೇತರ ಹುದ್ದೆಗಳು ಸೇರಿದಂತೆ ಆರು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ನಡೆದಿಲ್ಲ. ರಾಜ್ಯ ಸರ್ಕಾರ ಉನ್ನತ ಶಿಕ್ಷಣದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ. ಬಡ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರ ತಕ್ಷಣ ವಿವಿಗಳಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳಿಗೆ ಬೋಧಕರನ್ನು ನೇಮಕ ಮಾಡಬೇಕು, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿ ಭಟನಾಕಾರರು ಆಗ್ರಹಿಸಿದರು. ಎಬಿವಿಪಿ ಮೈಸೂರು ಜಿಲ್ಲಾ ಸಂಚಾಲಕ ಶ್ರೀರಾಮ್, ನಗರ ಕಾರ್ಯದರ್ಶಿ ಗೌತಮ್, ಮುಖಂಡರಾದ ರಾಜು, ನಯನ, ಪ್ರಜ್ಞಾ, ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.