ಗ್ರಾಮೀಣ ಸಂಸ್ಕøತಿ ಉಳಿಸಲು ಸಲಹೆ

ವೀರಾಜಪೇಟೆ,ಮಾ.15-ವಿದ್ಯಾರ್ಥಿಗಳ ಲ್ಲಿರುವ ಪ್ರತಿಭೆಯನ್ನು ಹೊರತೊರಲು ಕಾಲೇಜು ಮಟ್ಟದಲ್ಲಿ ತಮ್ಮಲ್ಲಿರುವ ಪ್ರತಿಭೆ ಯನ್ನು ಪ್ರದರ್ಶಿಸುವ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸುವಂತಾಗ ಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆಯಲ್ಲಿ ನಡೆದ ಕನ್ನಡ-ಇಂಗ್ಲಿಷ್ ಮತ್ತು ಇತಿಹಾಸ ವಿಭಾಗದ ವತಿಯಿಂದ ರಚಿಸಲಾಗಿರುವ ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ವತಿಯಿಂದ ಆಯೋ ಜಿಸಲಾಗಿದ್ದ ”ಸುಗ್ಗಿ ಸಂಭ್ರಮ-ಟಿ 20” ಎಂಬ ರಾಜ್ಯಮಟ್ಟದ ಎರಡು ದಿನಗಳ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸುಗ್ಗಿ ಸಂಭ್ರಮ ಎಂಬ ಸ್ಪರ್ಧೆಯಿಂದ ಎಲೆಮರೆಯ ಕಾಯಿಯಂತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ದೊರಕಿದಂತಾಗಿದೆ.  ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಹತ್ವದ ಘಟ್ಟವಾಗಿದೆ. ಮುಂದೆ ಜೀವನವನ್ನು ರೂಪಿಸಿಕೊಳ್ಳವ ನಿಟ್ಟಿನಲ್ಲಿ ಗುರಿ ಮುಟ್ಟುವಂತಾಗಬೇಕು. ಯುವಕರು ದೇಶದ ರಕ್ಷಣೆಗೆ ಸೇನೆಯಂ ತಹ ಹುದ್ದೆಗೆ ಸೇರಲು ಮುಂದಾಗಬೇಕು ಎಂದರಲ್ಲದೆ, ಪ್ರತಿಯೋಬ್ಬರು ಹಿರಿಯ ರಿಗೆ ಮತ್ತು ಗುರುಗಳಿಗೆ ಗೌರವ ನೀಡುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶು ಪಾಲ ಡಾ.ಟಿ.ಕೆ.ಬೋಪಯ್ಯ ಮಾತನಾಡಿ, ಸುಗ್ಗಿ ಸಂಭ್ರಮ ಎಂಬುದು ಉತ್ತಮವಾದ ವೇದಿಕೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಗಳಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ ಧೈರ್ಯದಿಂದ ಇಂತಹ ವೇದಿಕೆಯ ಅವಕಾಶವನ್ನು ಬಳಸಿಕೊಂಡು ಜೀವನ ದಲ್ಲಿ ಮುಂದೆ ಬರಬೇಕು. ಮುಂದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.  ಅತಿಥಿಯಾಗಿ ಆಗಮಿಸಿದ್ದ ಸೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಎಸ್.ಸುರೇಶ್ ಮಾತ ನಾಡಿ, ಸುಗ್ಗಿ ಸಂಭ್ರಮದಿಂದ ಪ್ರತಿಭೆಯನ್ನು ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ದೊರಕಿದ್ದು ಈ ವೇದಿಕೆಯಲ್ಲಿ ಭಾಗವಹಿಸಿ ದವರು ಮುಂದೆಯು ಪರಿಶ್ರಮದಿಂದ ಯಶಸ್ಸು ಕಾಣುವಂತಾಗಿ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕರ್ನಾ ಟಕ ಸಂಸ್ಕೃತ ವಿಶ್ವವಿದ್ಯಾನಿಲಯದ, ವಿಶ್ರಾಂತ ಕುಲಪತಿ ಪೆÇ್ರ.ಪದ್ಮಾಶೇಖರ್ ಸುಗ್ಗಿ ಸಂಭ್ರಮವನ್ನು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ  ಕನ್ನಡ  ಇಂಗ್ಲಿಷ್ ಮತ್ತು ಇತಿಹಾಸ ವಿಭಾ ಗಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ಗಳನ್ನು ಪೆÇ್ರ,ಎಂ.ಎಸ್. ಶೇಖರ್,  ಪೆÇ್ರ, ಮಹಾದೇವ, ಪೆÇ್ರ.ನಿರ್ಮಲ್‍ರಾಜ್ ಅವರುಗಳು ನೀಡಿದರು. ರಾಜ್ಯಮಟ್ಟದ 16 ಸ್ಪರ್ಧೆಗಳಲ್ಲಿ 20 ಕಾಲೇಜುಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ  ಬಹು ಮಾನ ವಿತರಿಸಿದರು.  ಈ ಸಂದರ್ಭ ಮೈಸೂರು ಮಹರಾಣಿ ಕಾಲೇಜಿನ ವಿದ್ಯಾರ್ಥಿ ಮೇಘನಾ ಮಾತನಾಡಿ, ಸುಗ್ಗಿ ಸಂಭ್ರಮ ಅನ್ನೊದು ಗ್ರಾಮೀಣ ಭಾಗದ ಸೊಗಡು ಕೊಡಗಿನ ವೀರಾಜಪೇಟೆಯಲ್ಲಿ ಆಯೋಜಿಸಿರು ವುದು ಸಂತಸ ತಂದಿದೆ ಎಂದರು.

ಸಮಾರಂಭದಲ್ಲಿ ಕಾಲೇಜಿನ ಕನ್ನಡ ವಿಭಾಗದ ಡಾ,ಡಿ.ಕೆ.ಉಷಾ,  ಇತಿಹಾಸ ವಿಭಾಗದ ಪ್ರೊ.ರುದ್ರಾ,  ಇಂಗ್ಲೀಷ್ ವಿಭಾ ಗದ ಪಿ.ಎನ್.ನಾಗರಾಜ್‍ಮೂರ್ತಿ,  ಪ್ರಾಧ್ಯಪಕರಾದ ಆರ್.ರಘುರಾಜ್,  ಪ್ರೊ,ಕೆ. ಬಸವರಾಜು ಸೇರಿದಂತೆ ಎಲ್ಲಾ ಉಪನ್ಯಾಸಕ ವೃಂದ ಮುಂತಾದವರು ಉಪಸ್ಥಿತರಿದ್ದರು.

ಡಿ.ಕೆ.ಉಷಾ ಸ್ವಾಗತಿಸಿದರು.  ವಿ.ಎನ್. ನಾಗರಾಜು ಮೂರ್ತಿ ವರದಿ ಮಂಡಿಸಿ ದರೆ,  ಜೆರಿಟಾ ಮೆನೆಜಸ್ ಮತ್ತು ರೇಖಾ ನಿರೂಪಿಸಿದರು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಾವಗೀತೆ, ರಸಪ್ರಶ್ನೆ, ಚರ್ಚಾಸ್ಪರ್ಧೆ, ಭಾಷಣ, ಕಿರುನಾಟಕ, ಜಾನಪದನೃತ್ಯ, ಸಂವಿಧಾನ, ಛದ್ಮವೇಷ,  ನನ್ನ ಮೆಚ್ಚಿನ ಪುಸ್ತಕ, ನನ್ನ ಇತಿಹಾಸಿಕ ಘಟನೆ, ಕವನ ವಾಚನ,  ಪ್ರಬಂಧ ಮಂಡನೆ ಸೇರಿದಂತೆ ಅನೇಕ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.