ಕಾರ್ಖಾನೆ ಪುನಾರಂಭಿಸಿ ಕೆಲಸ ನೀಡದಿದ್ದರೆ ತೀವ್ರ ಹೋರಾಟ

ಮೈಸೂರು, ಜು.2(ಪಿಎಂ)- ಜಿಲ್ಲೆಯ ನಂಜನಗೂಡು ತಾಲೂಕು ತಾಂಡ್ಯ ಕೈಗಾ ರಿಕಾ ಪ್ರದೇಶದಲ್ಲಿರುವ ರೀಡ್ ಅಂಡ್ ಟೇಲರ್ ಕಾರ್ಖಾನೆಯನ್ನು ಪುನರಾರಂಭಿಸಿ ಹಿಂದಿನ ಕಾರ್ಮಿಕರನ್ನೇ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಜಗದೀಶ್ ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಾರ್ಖಾನೆಗೀಗ ನೇಮಕಗೊಂಡಿ ರುವ ಲಿಕ್ವಿಡೇಟರ್ ಕಾನೂನುಬಾಹಿರ ವಾಗಿ ಎಲ್ಲಾ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆ ಮಾಡಿದ್ದಾರೆ. ಇದನ್ನು ವಿರೋ ಧಿಸಿದ ಸಂಘವು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ವಿರೋಧ ಪಕ್ಷದ ನಾಯಕರ ಗಮನಕ್ಕೆ ತಂದಿದೆ. ಪರಿಣಾಮ ಮೇ 28ರಂದು ವಿಕಾಸಸೌಧಕ್ಕೆ ಲಿಕ್ವಿಡೇ ಟರ್ ಅವರನ್ನು ಕರೆಯಿಸಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಹಾಗೂ ಸ್ಥಳೀಯ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು. ಲಾಕ್‍ಡೌನ್ ಅವಧಿಯಲ್ಲಿ ಕಾರ್ಮಿಕರ ಬಿಡುಗಡೆ ಮಾಡಿದ್ದನ್ನು ಹಿಂಪಡೆಯಲು ಲಿಕ್ವಿಡೇಟರ್ ಅವರಿಗೆ ಸೂಚನೆ ನೀಡಲಾಗಿತ್ತು. ಅಂದು ಸಮ್ಮತಿಸಿದ್ದ ಲಿಕ್ವಿಡೇಟರ್ ಈವ ರೆಗೂ ಕಾರ್ಮಿಕರ ಬಿಡುಗಡೆ ಕ್ರಮ ಹಿಂಪಡೆದಿಲ್ಲ ಎಂದು ಆರೋಪಿಸಿದರು.

ಇದರಿಂದ ಸಾವಿರಾರು ಕಾರ್ಮಿಕರು ವೇತನವಿಲ್ಲದೇ ಬೀದಿಪಾಲಾಗಿದ್ದು, ಕೂಡಲೇ ಕಾರ್ಖಾನೆ ಪ್ರಾರಂಭಿಸಿ ಕಾರ್ಮಿಕರನ್ನು ಕೆಲಸಕ್ಕೆ ಮತ್ತೆ ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕಾರ್ಖಾನೆ ಉಲ್ಲನ್ ಬಟ್ಟೆ ಉತ್ಪಾದನೆಯಲ್ಲಿ 1998-99ರಿಂದ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಮಾಲೀ ಕರು ವಿವಿಧ ಬ್ಯಾಂಕ್‍ಗಳಲ್ಲಿ ಕಾರ್ಖಾನೆ ಮೇಲೆ ಆಸ್ತಿಗಿಂತ ಹೆಚ್ಚು ಸಾಲ ಪಡೆದು ಮರು ಪಾವತಿ ಮಾಡಲಿಲ್ಲ. ಅಲ್ಲದೇ ಕಾರ್ಖಾನೆ ಯಲ್ಲಿ ಬಂದ ಲಾಭವನ್ನು ಬೇರೆ ಉದ್ದೇಶ ಗಳಿಗೆ ಬಳಸಿದರು. ಸಾಲ ವಸೂಲಿ ಸಂಬಂಧ ಮುಂಬೈನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್‍ನಲ್ಲಿ ದಾವೆ ನಡೆದಿದ್ದು, ಟ್ರಿಬ್ಯೂನಲ್ ಕಾರ್ಖಾನೆಯನ್ನು ಚಾಲನೆ ಯಲ್ಲಿಯೇ ಮಾರಾಟ ಮಾಡಲು ಲಿಕ್ವಿ ಡೇಟರ್ ನೇಮಕ ಮಾಡಿದೆ. ಆದರೆ ಲಿಕ್ವಿ ಡೇಟರ್ ಟ್ರಿಬ್ಯೂನಲ್ ಆದೇಶ ಉಲ್ಲಂ ಘಿಸಿದ್ದಾರೆ. ಕೊರೊನಾ ಕಾರಣದಿಂದ ವೇತನ ಸಹಿತ ರಜೆ ನೀಡುವುದಾಗಿ ನಮ್ಮ ಸಂಘಕ್ಕೆ ಪತ್ರ ಬರೆದು, ಟ್ರಿಬ್ಯೂನಲ್ ಗಮ ನಕ್ಕೂ ತರದೆ ಏಕಾಏಕಿ ಮೇ 14ರಂದು ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಯೂನಿಯನ್ ಅಧ್ಯಕ್ಷ ಜಿ.ಜಯ ರಾಮು, ಉಪಾಧ್ಯಕ್ಷ ಟಿ.ಎಲ್.ಕೇಶವ ಕುಮಾರ್, ಜಂಟಿ ಕಾರ್ಯದರ್ಶಿ ಬಿ.ಸಿದ್ದ ರಾಜು ಮತ್ತಿತರರು ಗೋಷ್ಠಿಯಲ್ಲಿದ್ದರು.