ನಾಗಮಂಗಲದಲ್ಲಿ ರೋಟರಿ ಪದಾಧಿಕಾರಿಗಳ ಪದಗ್ರಹಣ

ನಾಗಮಂಗಲ, ಜು.9(ಮಹೇಶ್)- ಪಟ್ಟಣದ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರೊ|| ಎನ್.ಮಹೇಶ್, ಕಾರ್ಯದರ್ಶಿಯಾಗಿ ರೊ|| ಸೋಮೇಶಪ್ಪ, ಖಜಾಂಚಿಯಾಗಿ ಎನ್.ಬಿ ಲಕ್ಷ್ಮೀನಾರಾಯಣ್ ಗುರುವಾರ ರೋಟರಿ ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ತಾಲೂಕ್ ದಂಡಾ ಧಿಕಾರಿ ಕು.ಞ.ಅಹಮ್ಮದ್, ಮಾನವೀಯ ಮೌಲ್ಯಗಳುಳ್ಳ ರೋಟರಿ ಸಂಸ್ಥೆ ವಿಶ್ವವ್ಯಾಪ್ತಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಂಸ್ಥೆ ಗಳನ್ನು ಹೊಂದಿದೆ. ಕೋವಿಡ್-19 ಸಂಕಷ್ಟ ದಲ್ಲೂ ರೋಟರಿ ಸಂಸ್ಥೆ ಜನರ ಸೇವೆಗಾಗಿ ಆಕ್ಸಿಜನ್ ಯಂತ್ರಗಳು, ಮಾಸ್ಕ್, ಸ್ಯಾನಿಟೈ ಸರ್ ಆರೋಗ್ಯ ಪರಿಕರಗಳನ್ನು ಹಾಗೂ ಬಡವರಿಗಾಗಿ ಹಸು, ಮನೆ ಹಾಗೂ ಸಾರ್ವ ಜನಿಕ ಆಸ್ಪತ್ರೆಗಳಿಗೆ ಹಲವು ಸಲಕರಣೆ ಗಳನ್ನು ನೀಡಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಜಿಲ್ಲಾ ಉಪ ಪಾಲಕ ರೊ| ಆರೀಫ್ ಪಾಷಾ, ವಿಭಾಗಿಯ ಕಾರ್ಯ ದರ್ಶಿ ರೊ|| ಡಾ. ಪ್ರಾಣೇಶ್, ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಮಹೇಶ್ ಎನ್, ಖಜಾಂಚಿ ಹೇಮಂತ್, ವಿಜಯ ಕುಮಾರ್, ಶರತ್ ರಾಮಣ್ಣ, ಪ್ರವೀಣ್, ನಾಗರಾಜ ಶೆಟ್ಟಿ, ರೋಟರಿ ಟೆಸ್ಟ್ ಕಾರ್ಯ ದರ್ಶಿ ಕುಮಾರ್ ಸಿ, ಖಜಾಂಚಿ ಎನ್.ವಿ ಪ್ರಕಾಶ್, ಡಾ.ನಾಡಿಗರ್, ರಾಮೇಗೌಡ, ರಾಜು, ಶೇಕ್ ಅಹಮದ್, ಗೋವಿಂದ ರಾಜ್, ಶಿಲ್ಪ ನಾಗರಾಜ್, ಚೆನ್ನಪ್ಪ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.