ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವೃದ್ಧ, ಯುವಕನನ್ನು ರಕ್ಷಿಸಿದ ಮೈಸೂರಿನ ಫೋಟೋಗ್ರಫಿ ತರಬೇತುದಾರ

ಮೈಸೂರು, ಆ. 16(ಆರ್‍ಕೆ)- ಹಾಸನ ಜಿಲ್ಲೆಯ ಕೊಣನೂರು ಬಳಿ ಕಾವೇರಿ ನದಿ ಯಲ್ಲಿ ಮುಳುಗುತ್ತಿದ್ದ ವೃದ್ಧನನ್ನು ರಕ್ಷಿಸ ಲೆತ್ನಿಸಿ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಮೈಸೂರಿನ ಫೋಟೋ ಗ್ರಫಿ ತರಬೇತುದಾರ ಗಿರಿಮಂಜು ಭಾನು ವಾರ ರಕ್ಷಿಸಿದ್ದಾರೆ.

ಚಿಕ್ಕ ಅರಕಲಗೂಡು ನಿವಾಸಿ 94 ವರ್ಷದ ದಾಸೇಗೌಡ ಹಾಗೂ ಹಾಸನದ ಯುವಕ ನವೀನ್(23) ಅವರನ್ನು ಗಿರಿ ಮಂಜು ಸಮಯಪ್ರಜ್ಞೆಯಿಂದ ರಕ್ಷಿಸಿ ದ್ದಾರೆ. ಮೈಸೂರಿನ ನ್ಯಾಷನಲ್ ಅಕಾ ಡೆಮಿ ಆಫ್ ರುಡ್‍ಸೆಟ್‍ನಲ್ಲಿ ಫೋಟೋ ಗ್ರಫಿ ಉಪನ್ಯಾಸಕರಾಗಿ ಕೆಲಸ ಮಾಡು ತ್ತಿರುವ ಮಂಜು, ಸ್ವಾತಂತ್ರ್ಯ ದಿನವಾದ ಭಾನುವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಕೊಣನೂರು ಬಳಿ ತೂಗು ಸೇತುವೆ ಬಳಿ ಛಾಯಾಗ್ರಹಣ ಮಾಡುತ್ತಿದ್ದರು.
ಆ ವೇಳೆ ವೃದ್ಧರೊಬ್ಬರು ಕಾವೇರಿ ನದಿ ಯಲ್ಲಿ ಮುಳುಗುತ್ತಿದ್ದುದನ್ನು ಕಂಡು ಅಲ್ಲಿಯೇ ಇದ್ದ ಯುವಕನೋರ್ವ ನೀರಿಗೆ ಹಾರಿ ರಕ್ಷಿಸಲೆತ್ನಿಸಿದರಾದರೂ, ಅವರೂ ನೀರಿನಲ್ಲಿ ಮುಳುಗುತ್ತಿದ್ದುದನ್ನು ಗಮನಿ ಸಿದರು. ತಕ್ಷಣ ಕಾರ್ಯೋನ್ಮುಖರಾದ ಮಂಜು, ನೀರಿಗೆ ಹಾರಿ ವೃದ್ಧ ಮತ್ತು ಯುವಕನನ್ನು ರಕ್ಷಿಸಿ, ದಡ ಸೇರಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೊಣನೂರು ಠಾಣೆ ಪೊಲೀ ಸರು ಹಾಗೂ ಸಾರ್ವಜನಿಕರು ಗಿರಿಮಂಜು ಅವರ ಸಮಯಪ್ರಜ್ಞೆ ಹಾಗೂ ಕಾರ್ಯ ಸಾಧನೆಗೆ ಶ್ಲಾಘಿಸಿದರು. ಪ್ರಾಣದ ಹಂಗನ್ನೂ ತೊರೆದು ಇಬ್ಬರ ಪ್ರಾಣ ರಕ್ಷಿಸಿದ ಗಿರಿ ಮಂಜು ಅವರನ್ನು ಅರಕಲಗೂಡು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಟ್ಟೆಪುರ ಗುರುಪ್ರಸನ್ನ ಅವರು ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. ಗಿರಿ ಮಂಜು ಅವರು ಅಲ್‍ಮೊನಕ್ ಇಂಟರ್‍ನ್ಯಾಷ ನಲ್ ಅಡ್ವೆಂಚರ್ ಕ್ಲಬ್ ಹಾಗೂ

ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್‍ನಲ್ಲೂ ತರಬೇತು ದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.