ಗೋಣಿಕೊಪ್ಪ, ಏ.12- ನಾಗರಹೊಳೆ ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನ ದಲ್ಲಿ ಕೂರಹಂದಿ ಬೇಟೆಯಾಡಿದ ಆರೋಪಿ ಯನ್ನು ಕಲ್ಲಳ್ಳ ವನ್ಯಜೀವಿ ವಲಯ ಅಧಿಕಾರಿಗಳು ಬಂಧಿಸಿದ್ದು, ಮೂವರು ಆರೋಪಿಗಳು ತಲೆಮ ರೆಸಿಕೊಂಡಿದ್ದಾರೆ.
ಕೋತೂರು ಗ್ರಾಮದ ಬೊಮ್ಮಾಡು ಹಾಡಿ ನಿವಾಸಿ ಶಶಿಧರ್ ಆಲಿಯಾಸ್ ಶಿವಣ್ಣ (29) ಬಂಧಿತ ಆರೋಪಿ, ಬೊಮ್ಮಾಡು ನಿವಾಸಿಗಳಾದ ನವೀನ್, ಗಣಪತಿ ಆಲಿ ಯಾಸ್ ಮಲ್ಲ, ಜಡೆಯಪ್ಪ ತಲೆಮರೆಸಿಕೊಂಡಿರುವ ಆರೋಪಿಗಳು. ಬಂಧಿತನಿಂದ ವಶಕ್ಕೆ ಪಡೆದ ಕೂರಹಂದಿ ಕಳೇಬರವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಇದರೊಂದಿಗೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹುಣಸೂರು ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್, ಸಹಾಯಕ ಉಪ ಸಂರಕ್ಷಣಾಧಿಕಾರಿ ಪಾಲ್ ಆಂಥೋನಿ ಮಾರ್ಗದರ್ಶÀನದಲ್ಲಿ ಆರ್‍ಎಫ್‍ಒ ಗಿರೀಶ್, ಡಿಆರ್‍ಎಫ್‍ಒ ಯೋಗೇಶ್, ಸಿಬ್ಬಂದಿ ಮುಜಾಮಿಲ್ ಪಕಾಲಿ, ಗಣೇಶ್, ಭರಮಪ್ಪ, ಕುಮಾರ್, ನಿರಲ್ ಇದ್ದರು.