ಡಾ.ಶೋಬಿತ್‍ಗೌಡಗೆ ಎಆರ್‍ಪಿ ಪ್ರಶಸ್ತಿ

ಮೈಸೂರು,ಡಿ.12-ಕರ್ನಾಟಕ ಸರ್ಕಾರದ ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಕೊಡ ಮಾಡುವ `ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇ ಷನ್’ (ಎಆರ್‍ಪಿ) ಪ್ರಶಸ್ತಿಯನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲ ಯದ ಡಾ.ಶೋಬಿತ್‍ಗೌಡ ಅವರಿಗೆ ನೀಡಿ ಗೌರವಿಸಿದೆ. ಕಳೆದ ವರ್ಷ ವೈಜ್ಞಾನಿಕ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ವಿಜ್ಞಾನ ಸಂಶೋ ಧನೆಯನ್ನು ಪೋಷಿಸಲು ಎಆರ್‍ಪಿಯನ್ನು ಕರ್ನಾಟಕ ಸರ್ಕಾರದ ವಿಜಿಎಸ್‍ಟಿ ಸ್ಥಾಪಿಸಿದೆ. ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಡಾ.ಶೋಬಿತ್‍ಗೌಡ ಜಪಾನ್ ಹೊಕೈಡೋ ವಿಶ್ವವಿದ್ಯಾನಿಲಯ ದಿಂದ ಪಿಎಸ್.ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಮಾಲೆಕ್ಯೂಲರ್ ಮೆಡಿಸಿನ್ ಇನ್ಸ್‍ಟಿಟ್ಯೂಟ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.