ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಅಂತರಶಾಲಾ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆ-3

ಮೈಸೂರು, ಸೆ.20-ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯು ‘ಕಾರ್ಡಿ ಯಾಲಜಿ ಸೊಸೈಟಿ ಆಫ್ ಇಂಡಿಯಾ’ ಸಹಯೋಗದಲ್ಲಿ ಮೂರನೆಯ ಬಾರಿಗೆ ಅಂತರಶಾಲಾ ‘ಆನ್‍ಲೈನ್ ರಸ ಪ್ರಶ್ನೆ ಸ್ಪರ್ಧೆ-3’ ಆಯೋಜಿ ಸಲಾಗಿತ್ತು. ಮೈಸೂರಿನಲ್ಲಿ ಆನ್ ಲೈನ್ ಮೂಲಕ ನಡೆದ ಮೊದಲ ರಸಪ್ರಶ್ನೆ ಕಾರ್ಯಕ್ರಮ ಇದಾ ಗಿದ್ದು, ಸ್ಪರ್ಧೆಯಲ್ಲಿ ಒಟ್ಟು 37 ತಂಡಗಳು, 74 ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಕ್ವಿಜ್‍ನಿಂದಾಗಿ ಮಕ್ಕಳು ಮನುಷ್ಯನ ದೇಹರಚನೆ, ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ತಿಳಿದುಕೊಂಡರು. ಮನೋರಂಜನೆಯ ಜೊತೆಗೆ ಸಾಕಷ್ಟು ವಿಷಯಗಳನ್ನು ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಕಲಿಸಲಾಯಿತು ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಡಾ.ಶಶಿರೇಖಾ ತಿಳಿಸಿದರು.
ಸ್ಪರ್ಧೆಯಲ್ಲಿ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ವಿಜೇತರಾಗಿ ಹೊರಹೊಮ್ಮಿದರೆ, ಸದ್ವಿದ್ಯಾ ಶಾಲೆಯು 2ನೆಯ ಸ್ಥಾನ ಪಡೆಯಿತು. ಮೊದಲ 2 ಸ್ಥಾನಗಳನ್ನು ಪಡೆದವರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು ಎಂದು ಡಾ.ಶಶಿರೇಖಾ ಮಾಹಿತಿ ನೀಡಿದರು.