ಕ್ರೀಡಾಪಟು ತಿಪ್ಪವ್ವ ಸಣ್ಣಕ್ಕಿಗೆ ಸನ್ಮಾನ

ಮೈಸೂರು,ಫೆ.22-ಕ್ರೀಡಾ ಪ್ರತಿಭೆಗಳನ್ನು ಪೆÇೀಷಿಸುವ ಸಲುವಾಗಿ ಸುಜೀವ್ ಹೆಲ್ತ್ ಮತ್ತು ಸ್ಪೋಟ್ರ್ಸ್ ಕ್ಲಬ್‍ಗೆ ಚಾಲನೆ ನೀಡಲಾಯಿತು. ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರದ ಬೆಳವಣಿಗೆ ರಕ್ಷಣೆ ಮತ್ತು ಉತ್ತೇಜನಕ್ಕೆ ಬದ್ಧವಾಗಿರುವ ಈ ಕ್ಲಬ್ ಅನ್ನು ಸುಜೀವ್ ಫೌಂಡೇಶನ್ ಅಧ್ಯಕ್ಷ ರಾಜಾರಾಮ್, ಕ್ರೀಡಾಪಟು ತಿಪ್ಪವ್ವ ಸಣ್ಣಕ್ಕಿ ರೋಟರಿ ಸಭಾಂಗಣದಲ್ಲಿ ಉದ್ಘಾಟಿಸಿದರು.
ಬಳಿಕ ರಾಜಾರಾಮ್ ಮಾತನಾಡಿ, ನಾವು ಅನೇಕ ಪ್ರತಿಭಾವಂತ ಕ್ರೀಡಾ ಪಟುಗಳನ್ನು ಹೊಂದಿದ್ದರೂ ದೇಶವು ಒಲಿಂಪಿಕ್ಸ್‍ನಲ್ಲಿ ಗಮನಾರ್ಹ ಸಾಧನೆ ಮಾಡಲು ವಿಫಲವಾಗಿದೆ. ಭಾರತದಲ್ಲಿ ನಮಗೆ ಕ್ರೀಡಾ ಪ್ರತಿಭೆಗಳ ಕೊರತೆಯಿಲ್ಲ. ಆದರೆ ನಾವು ಅವರನ್ನು ವಿಶ್ವ ದರ್ಜೆಯ ಕ್ರೀಡಾಪಟುಗಳಾಗಿ ಪರಿವರ್ತಿಸಬೇಕಾಗಿದೆ. ಈ ಕ್ಲಬ್ ಕ್ರೀಡಾ ಆಕಾಂಕ್ಷಿಗಳನ್ನು ಪೆÇೀಷಿಸುವ ಮತ್ತು ಅವರಿಗೆ ಗುಣಮಟ್ಟದ ತರಬೇತಿ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಉಚಿತವಾಗಿ ಒದಗಿಸುವ ಗುರಿಯನ್ನು ಹೊಂದಿದೆ ಎಂದರು. ಇದೇ ವೇಳೆ ಕ್ರೀಡಾಪಟು ತಿಪ್ಪವ್ವ ಸಣ್ಣಕ್ಕಿ ಅವರನ್ನು ಸನ್ಮಾನಿಸಲಾಯಿತು.