ಮಳೆಗಾಲಕ್ಕೂ ಮುನ್ನ ರಾಜಕಾಲುವೆ ಸ್ವಚ್ಛತೆಗೆ ಮುಂದಾದ ಪಾಲಿಕೆ

ಮೈಸೂರು ಮೇ 10(ವೈಡಿಎಸ್)- ಮಳೆ ಗಾಲ ಆರಂಭಕ್ಕೂ ಮುನ್ನವೇ ನಗರ ಪಾಲಿಕೆ ರಾಜಕಾಲುವೆಯನ್ನು ಸ್ವಚ್ಛಗೊಳಿ ಸುವ ಕಾರ್ಯಕ್ಕೆ ಮುಂದಾಗಿದೆ.

ರಾಜಕಾಲುವೆಯಲ್ಲಿ ಗಿಡಗಂಟಿ ಬೆಳೆದು, ಮಣ್ಣು ತುಂಬಿಕೊಂಡು ಪ್ರತಿ ಬಾರಿ ಮಳೆ ಬಿದ್ದಾಗಲೂ ಈ ರಾಜಕಾಲುವೆ ನೀರು ಸರಾಗ ವಾಗಿ ಹರಿಯಲು ಸಾಧ್ಯವಾಗದೆ ಅಕ್ಕಪಕ್ಕದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ವಲಯ ಕಚೇರಿ-3ರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಮಳೆಗಾಲಕ್ಕೂ ಮುನ್ನವೇ ತಮ್ಮ ವಲಯ ವ್ಯಾಪ್ತಿಯ 13 ಕಿ.ಮೀ. ರಾಜಕಾಲುವೆ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಮೇ 4ರಿಂದ ಶಾರದಾ ದೇವಿನಗರ, ಬೋಗಾದಿ ಬಳಿಯ ರಾಜ ಕಾಲುವೆಯನ್ನು 1 ಹಿಟಾಚಿ, 1 ಟಿಪ್ಪರ್, 15 ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛ ಮಾಡಲಾಗುತ್ತಿದೆ. ಈ ಕುರಿತು ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಮಾತನಾಡಿ, ವಲಯ ಕಚೇರಿ- 3ರ ವ್ಯಾಪ್ತಿಗೆ ಬರುವ 13 ಕಿಮೀ ಉದ್ದದ ರಾಜಕಾಲುವೆಯ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಡಿ.ಕೆ.ಕನ್‍ಸ್ಟ್ರಕ್ಷನ್ ಹಿಟಾಚಿ, ಟಿಪ್ಪರ್ ಉಚಿತವಾಗಿ ನೀಡಿದೆ. ಈಗಾಗಲೇ 4 ಕಿ.ಮೀ ಸ್ವಚ್ಛಗೊಳಿಸಿದ್ದು, ಇನ್ನು 9 ಕಿ.ಮೀ ಬಾಕಿ ಇದೆ ಎಂದರು.

ಸೋಂಕು ನಿವಾರಕ ಸಿಂಪಡಣೆ: ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಪಾಲಿಕೆ ಯಿಂದ ಶನಿವಾರ ಮಧ್ಯಾಹ್ನ ದೇವರಾಜ ಮಾರುಕಟ್ಟೆಗೆ ಮತ್ತು ಸಾರ್ವಜನಿಕ ಶೌಚಾಲಯಗಳಿಗೆ ಕೊರೊನಾ ಸೋಂಕು ನಾಶಕ ರಾಸಾಯನಿಕ ದ್ರಾವಣ ಸಿಂಪಡಿಸ ಲಾಯಿತು. ಲಾಕ್‍ಡೌನ್ ಸಡಿಲವಾಗಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಜನರು ಬರುವ ಸಾಧ್ಯತೆ ಇರುವುದರಿಂದ ಕೊರೊನಾ ಸೋಂಕು ಹರಡ ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಿಕೆಯ ಅಭಯ ತಂಡ ದೇವರಾಜ ಮಾರುಕಟ್ಟೆ ಒಳಾಂಗಣ ಮತ್ತು ಹೊರಾಂಗಣದ ಸುತ್ತ ಸೋಂಕು ನಾಶಪಡಿಸುವ ರಾಸಾಯನಿಕ ದ್ರಾವಣ ಸಿಂಪಡಿಸಿತು. ಪಾಲಿಕೆಯ 65 ವಾರ್ಡ್‍ಗಳಲ್ಲೂ ಪ್ರತಿ ಮನೆ, ಮಾರುಕಟ್ಟೆ, ಬಸ್ ತಂಗುದಾಣ, ಸಾರ್ವಜನಿಕ ಶೌಚಾ ಲಯ ಮತ್ತಿತರ ಸ್ಥಳಗಳಿಗೆ ದ್ರಾವಣ ಸಿಂಪಡಿ ಸಲಾಗುತ್ತಿದೆ ಎಂದು ಪಾಲಿಕೆ ಅರೋಗ್ಯಾ ಧಿಕಾರಿ ಡಾ.ನಾಗರಾಜ್ ಹೇಳಿದರು.