ಜನತಾ ಕರ್ಫ್ಯೂ ಪಾಲಿಸದಿದ್ದರೆ ಕಾನೂನು ಕ್ರಮ ಎಂಬ ಭಾಸ್ಕರ್ ರಾವ್ ಆದೇಶ ಅಧಿಕ ಪ್ರಸಂಗತನ: ಸಿದ್ದರಾಮಯ್ಯ

ಬೆಂಗಳೂರು, ಮಾ.21- ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಅನು ಷ್ಠಾನಕ್ಕೆ ಸಹಕಾರ ನೀಡದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದ ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಜನತಾ ಕರ್ಫ್ಯೂ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಭಾಸ್ಕರ್ ರಾವ್ ಹೇಳಿಕೆಗೆ ಸಿದ್ದರಾಮಯ್ಯ ತಪರಾಕಿ ಬಾರಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪ್ರಧಾನಿ ಯವರ ‘ಜನತಾ ಕರ್ಫ್ಯೂ’ ಕರೆಯನ್ನು ಪಾಲಿಸದ ಜನರ ವಿರುದ್ಧ ಕಾನೂನು ಕ್ರಮ ಎಂದ ಬೆಂಗಳೂರು ಪೆÇಲೀಸ್ ಆಯುಕ್ತರ ಹೇಳಿಕೆ ಖಂಡನೀಯ. ‘ಪೆÇಲೀಸ್ ಕರ್ಫ್ಯೂ’ ಮಾಡಲು ಹೊರಟಿರುವುದು ಅಧಿಕಪ್ರಸಂಗತನದ ನಡವಳಿಕೆ. ಪೆÇಲೀಸರ ಮಧ್ಯಪ್ರವೇಶವೂ ಸ್ವಯಂಪ್ರೇರಿತರಾಗಿ ಕರ್ಫ್ಯೂನಲ್ಲಿ ಭಾಗವಹಿಸಲು ಹೊರಟಿರುವ ಜನರನ್ನು ಆತಂಕಕ್ಕೀಡು ಮಾಡಿದೆ ಎಂದು ಬರೆದುಕೊಂಡಿ ದ್ದಾರೆ. ಕೊರೊನಾ ವಿರುದ್ಧ ಇಂದು ನಡೆಯಬೇಕಾಗಿರುವುದು ಜನತಾ ಸಮರ. ಈ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಆಚರಿಸು ವಂತೆ ಪ್ರಧಾನಿ ಮೋದಿಯವರು ನೀಡಿದ್ದ ಕರೆಗೆ ರಾಜ್ಯದ ಜನರು ಪೂರ್ಣ ಸಹಕಾರ ನೀಡಬೇಕು ಎಂದು ಮತ್ತೊಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮಾರ್ಚ್ 22ನೇ ಭಾನುವಾರ ದೇಶಾದ್ಯಂತ ಜನತಾ ಕರ್ಪ್ಯೂ ಘೋಷಿಸಿರುವುದನ್ನು ಆರೋಗ್ಯದ ದೃಷ್ಟಿಯಿಂದಾಗಿ ಪ್ರತಿ ಯೊಬ್ಬರು ಪಾಲಿಸಬೇಕು. ಇಲ್ಲದಿದ್ದರೆ ಐಪಿಸಿ ಸೆಕ್ಷನ್ 269 ಮತ್ತು 270 ಅಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಭಾಸ್ಕರ್ ರಾವ್ ಹೇಳಿದ್ದರು. ಆದರೀಗ ಪೆÇಲೀಸ್ ಆಯುಕ್ತರ ಈ ಹೇಳಿಕೆಗೆ ತೀವ್ರ ಅಸಮಾಧಾನ ಹೊರಹಾಕಿರುವ ಸಿದ್ದರಾಮಯ್ಯ, ಈ ರೀತಿ ಆದೇಶ ನೀಡಲು ನೀವ್ಯಾರು ಎಂದು ನೇರ ಪ್ರಶ್ನಿಸಿದ್ದಾರೆ.